ಅಂತರ್ಜಾತಿ ವಿವಾಹ, ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ!

ನಿವೃತ್ತ ಸೇನಾ ಸಿಬ್ಬಂದಿಯಾಗಿರುವ ಮಾವ, ಅಳಿಯನನ್ನು ಕೊಂದ ಬೆನ್ನಲ್ಲಿಯೇ ಸ್ಥಳೀಯ ಪೊಲೀಸರಿಗೆ ಸ್ವತಃ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಆ ಬಳಿಕ ಪೊಲೀಸರಿಗೆ ತಾವಾಗಿಯೇ ಶರಣಾಗಿದ್ದಾರೆ.
 

man shoots son in law in Bihars Buxar over love marriage shocking case recorded in cctv san

ಪಾಟ್ನಾ (ಜೂನ್ 7) : ಬಿಹಾರದಲ್ಲಿ ಮರ್ಯಾದಾ ಹತ್ಯೆಯ (dishonour killing) ಆಘಾತಕಾರಿ ಪ್ರಕರಣವೊಂದರಲ್ಲಿ, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಳಿಯನನ್ನೇ (son in law) ಮಾವ (Father-in-law) ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣ ನಡೆಸಿದೆ. 

ನಿವೃತ್ತ ಸೇನಾ ಸಿಬ್ಬಂದಿಯಾಗಿರುವ ಮಾವ, ಭಾನುವಾರ ತನ್ನ ಮಗನ ಸಹಾಯದಿಂದ ಅಳಿಯನಿಗೆ ಗುಂಡು ಹಾರಿಸಿದ್ದಾರೆ. ಬಿಹಾರದ ಬಕ್ಸರ್ (Buxar ) ಜಿಲ್ಲೆಯ ದುಮ್ರಾವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕ್ಷೌರಿಕನ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ಶೇವ್ ಮಾಡಿಸಿಕೊಳ್ಳುತ್ತಿರುವಾಗ, ಆತನ ಕಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅವನ ಕಡೆಗೆ ತಿರುಗಿ ಅವನ ಮುಖಕ್ಕೆ ಪಿಸ್ತೂಲಿನಿಂದ ಗುಂಡು ಹಾರಿಸುತ್ತಾನೆ. ಶೂಟ್ ಆದ ಬೆನ್ನಲ್ಲಿಯೇ ಕುಳಿತಿದ್ದ ಸೀಟ್ ನಿಂದ ವ್ಯಕ್ತಿ ಎದ್ದೇಳುವುದು ಕಂಡಿದೆ. ಬಹುತೇಕವಾಗಿ ಮೊದಲು ಮಾಡಿದ ಶೂಟ್ ನಲ್ಲಿ ಗುರಿ ತಪ್ಪಿದಂತೆ ಕಂಡಿದೆ. ಗುಂಡಿನ ದಾಳಿಯ ಬೆನ್ನಲ್ಲಿಯೇ ಕ್ಷೌರಿಕ ದಿಕ್ಕಾಪಾಲಾಗಿ ಓಡಿದ್ದಾರೆ. ಆ ಬಳಿಕ, ಹತ್ಯೆಯಾದ ವ್ಯಕ್ತಿಗೆ ರೇಜರ್ ನ ಮೂಲಕ ಶೂಟ್ ಮಾಡಿದ ವ್ಯಕ್ತಿ ಹಲ್ಲೆ ಮಾಡುತ್ತಾರೆ. ಆ ನಂತರ ಪಿಸ್ತೂಲ್ ಹಿಡಿದುಕೊಂಡ ಮತ್ತೊಬ್ಬ ವ್ಯಕ್ತಿ ಜೊತೆಯಾದ ಬಳಿಕ, ಅಳಿಯ ತಲೆಗೆ ಗುಂಡು ಹಾರಿಸುತ್ತಾರೆ. ಬಳಿಕ ಇಬ್ಬರೂ ಸೇರಿ ಅಳಿಯನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಕಾಲಿನಿಂದ ತುಳಿದು ಮತ್ತೊಮ್ಮೆ ಗುಂಡು ಹಾರಿಸುವ ದೃಶ್ಯ ಸೆರೆಯಾಗಿದೆ. 


ಈ ನಡುವೆ ದಾಳಿ ಮಾಡಿದವರು ಬಂದೂಕುಗಳನ್ನು ಮರುಲೋಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದು ಸಿಕ್ಕಿಹಾಕಿಕೊಂಡಾಗ, ನೆಲದ ಮೇಲೆ ಶವದಂತೆ ಬಿದ್ದಿರುವ ವ್ಯಕ್ತಿಯ ಮೇಲೆ ದೈಹಿಕವಾಗಿಯೂ ಹಲ್ಲೆ ನಡೆಸುತ್ತಾರೆ. ಆತನ ತಲೆಯ ಮೇಲೆ ಕಾಲಿಟ್ಟು ಅಲ್ಲಿಂದ ಹೊರಡುವ ಮುನ್ನ ಅವನನ್ನು ಪದೆ ಪದೆ ಒದೆಯುವುದಲ್ಲದೆ, ಭೀಕರವಾಗಿ ಹೊಡೆಯುವುದು ದಾಖಲಾಗಿದೆ. ಸಾವಿಗೀಡಾದ ರಕ್ತಸಿಕ್ತ ದೇಹವು ಮೂಲೆಯಲ್ಲಿ ಬಿದ್ದಿರುವುದನ್ನು ಸಿಸಿಟಿಯಲ್ಲಿ ನೋಡಬಹುದಾಗಿದೆ.

ಆಂಧ್ರ, ಹಿಂದೂ ಯುವಕನ ‘ಮರ್ಯಾದಾ ಹತ್ಯೆ’: ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆ!

ಕೊಲೆಯಾದವರನ್ನು ಮೋನು ರೈ (Monu Rai)ಎಂದು ಗುರುತಿಸಲಾಗಿದ್ದು, ಇವರು ಸ್ಥಳೀಯ ನಗರಸಭಾ ಸದಸ್ಯ ಸೋನು ರೈ(Sonu Rai)ಅವರ ಸಹೋದರರಾಗಿದ್ದಾರೆ. ಮಾವ ಸುನೀಲ್ ಪಾಠಕ್ (Sunil Pathak), ನಿವೃತ್ತ ಸೇನಾ ಸಿಬ್ಬಂದಿ, ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಸ್ವತಃ ಕರೆದು ಪೊಲೀಸರ ಮುಂದೆ ಶರಣಾಗಿದ್ದಾರೆ. ಅವರ ಪುತ್ರ ಧನು ಪಾಠಕ್ (Dhanu pathak) ಕೂಡ ಪ್ರಕರಣದಲ್ಲಿ ಪಾಲುದಾರನಾಗಿದ್ದಾನೆ. 'ಪ್ರೇಮ ವಿವಾಹ'ದ ಕಾರಣದಿಂದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ಗುರುತಿಸಲಾಗಿದ್ದು, ಮಾವನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್ ಕೂಡ ವಶಪಡಿಸಿಕೊಳ್ಳಲಾಗಿದೆ.

ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?

ಕೆಲವು ದಿನಗಳ ಹಿಂದೆ, ತೆಲಂಗಾಣದ ಆದಿಲಾಬಾದ್‌ನಲ್ಲಿ ಮರ್ಯಾದಾ ಹತ್ಯೆಯ ಘಟನೆ ಕೂಡ ನಡೆದಿತ್ತು. ಹಿಂದೂ ಹುಡುಗಿ, ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆ ಬಳಿಕ ಆತನ ಮನೆಯವರು ಯುವತಿಯ ಮೇಲೆ ಕೋಪಗೊಂಡಿದ್ದರು. ಇದರೊಂದಿಗೆ ಎರಡೂ ಕುಟುಂಬದವರು ಗ್ರಾಮ ಪಂಚಾಯಿತಿಯ ಮುಂದೆ ನ್ಯಾಯ ಪಡೆದಿದ್ದರು. ಈ ವೇಳೆ ಎರಡೂ ಕುಟುಂಬದ ಹಿರಿಯರು ಉಪಸ್ಥಿತರಿದ್ದರು. ಯುವತಿ ತನ್ನ ಪತಿಯೊಂದಿಗೆ ಇರಬಾರದು, ಹಾಗೂ ನತನ್ನ ತಂದೆಯ ಮನೆಗೆ ಹಿಂದಿರುಗಬೇಕೆಂದು ನಿರ್ಧರಿಸಲಾಯಿತು. ಕೆಲ ದಿನಗಳಲ್ಲೇ ಹುಡುಗಿಯ ಶವ ತಂದೆಯ ಮನೆಯಲ್ಲಿ ಪತ್ತೆಯಾಗಿತ್ಉತ. ಇದನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಿದ ಪೊಲೀಸರು ಹುಡುಗಿಯ ತಂದೆ ಹಾಗೂ ಕುಟುಂಬ ಸದಸ್ಯರನ್ನು ಬಂಧಿಸಿದ್ದಾರೆ.

 

Latest Videos
Follow Us:
Download App:
  • android
  • ios