* ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಬೈರವನ ದೊಡ್ಡಿ ಸಮೀಪ ನಡೆದ ಘಟನೆ
* ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ
* ಜಮೀನು ವಿವಾದಕ್ಕೆ ಕೊಲೆ ಮಾಡಿರುವ ಶಂಕೆ
ರಾಮನಗರ(ಫೆ.26): ಕಾಂಗ್ರೆಸ್(Congress) ಮುಖಂಡನನ್ನ ದುಷ್ಕರ್ಮಿಗಳು(Miscreants) ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ(Ramanagara) ಜಿಲ್ಲೆಯ ಬಿಡದಿ ಹೋಬಳಿ ಬೈರವನ ದೊಡ್ಡಿ ಸಮೀಪ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ. ಗಂಡಪ್ಪ ಎಂಬುವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ.
ದುಷ್ಕರ್ಮಿಗಳು ಗಂಡಪ್ಪ(Gundappa) ಅವರ ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ(Murder) ಮಾಡಲಾಗಿದೆ. ಬೈರವನ ದೊಡ್ಡಿ ಸಮೀಪ ಇರುವ ಅವರದೇ ತೋಟದ ಬೈಕ್ ಸರ್ವಿಸ್ ಸ್ಟೇಷನ್ ಮನೆಯಲ್ಲಿ ಕೊಲೆ ಮಾಡಲಾಗಿದೆಮ ಎಂದು ತಿಳಿದು ಬಂದಿದೆ.
ಮಗಳನ್ನು ಕೊಂದ ತಂದೆ, ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ತರಿಸುತ್ತೆ
ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಮೃತದೇಹವನ್ನ(Deadbody) ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಮೀನು ವಿವಾದಕ್ಕೆ(Land Dispute) ಸಂಬಂಧಿಸಿದಂತೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಿಡದಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ(Investigation) ಆರಂಭಿಸಿದ್ದಾರೆ. ಪೊಲೀಸರು ತನಿಖೆಯಿಂದಷ್ಟೇ ಕೊಲೆಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.
ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕಾರ್ಮಿಕನ ಕೊಲೆ
ಬೆಂಗಳೂರು(Bengaluru): ಕಾರ್ಮಿಕನೊಬ್ಬನ(Labor) ತಲೆ ಮೇಲೆ ದುಷ್ಕರ್ಮಿಗಳು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಸಮೀಪದ ಪಾದಚಾರಿ ಮಾರ್ಗದಲ್ಲಿ ನಡೆದಿದೆ.
ಮಂಡ್ಯ(Mandya) ಜಿಲ್ಲೆಯ ಮದ್ದೂರು ಮೂಲದ ಸತೀಶ್(42) ಕೊಲೆಯಾದ ದುರ್ದೈವಿ. ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯ ಬಸ್‌ನಿಲ್ದಾಣದ ಸಮೀಪವಿರುವ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಎದುರಿನ ಪಾದಚಾರಿ ಮಾರ್ಗದಲ್ಲಿ ಗುರುವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಮೃತ ಸತೀಶ್ ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದ. ಮದ್ಯ ವ್ಯಸನಿಯಾಗಿದ್ದ ಸತೀಶ್, ಗುರುವಾರ ಮಧ್ಯಾಹ್ನ ಹನುಮಂತ ನಗರದಲ್ಲಿರುವ ಅಕ್ಕನ ಮನೆಗೆ ಹೋಗಿದ್ದು, 500 ರು. ಪಡೆದು ಬಂದಿದ್ದ ಎಂದು ತಿಳಿದು ಬಂದಿದೆ. ಬೆಳಗ್ಗೆ ಪಾದಚಾರಿ ಮಾರ್ಗದಲ್ಲಿ ಮೃತದೇಹ ಬಿದ್ದಿತ್ತು. ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆಗೈದಿರುವ ಸಾಧ್ಯತೆಯಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದ್ದು, ತನಿಖೆಯಿಂದ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನ ವಾಪಸ್ ಕೇಳಿದ್ದಕ್ಕೆ ಸೋಡಾದಲ್ಲಿ ಸೈನೈಡ್ ಹಾಕಿ ವ್ಯಕ್ತಿ ಕೊಲೆ!
ದಾವಣಗೆರೆ(Davanagere): ಚಿನ್ನದ ಒಡವೆ ಮಾಡಲು ಕೊಟ್ಟಿದ್ದ ವ್ಯಕ್ತಿ ಚಿನ್ನ ವಾಪಸ್ ಕೇಳಿದ್ದಕ್ಕೆ ಆತನಿಗೆ ಜೀರಾ ಸೋಡಾದಲ್ಲಿ ಸೈನೈಡ್ ಹಾಕಿ ಕುಡಿಸಿ ಕೊಲೆ ಮಾಡಿದ್ದ ಪ್ರಕರಣ ಭೇದಿಸಿರುವ ಇಲ್ಲಿನ ಬಡಾವಣೆ ಪೊಲೀಸರು ಮಂಜುನಾಥ ಚಿತ್ರಗಾರ ಎಂಬಾತನನ್ನು ಬಂಧಿಸಿದ್ದಾರೆ(Arrest).
ದರ್ಶನ್ ರಾಯ್ಕರ್ ಎಂಬವರು ಮಂಜುನಾಥಗೆ ಚಿನ್ನದ ಒಡವೆಗಳನ್ನು ಮಾಡಿ ಕೊಡುವಂತೆ ಜ.4ರಂದು 110 ಗ್ರಾಂ ಒಡವೆಗಳನ್ನು ಕೊಟ್ಟಿದ್ದರು. ಆದರೆ, ಮಂಜುನಾಥ ಚಿತ್ರಗಾರ ಒಡವೆ ಮಾಡಿಕೊಡದ ಹಿನ್ನೆಲೆಯಲ್ಲಿ ಅವರ ಚಿನ್ನ ವಾಪಸ್ ಕೊಡುವಂತೆ ಕೇಳಿದ್ದರು.
Vijayapura: ಪಿಎಸ್‌ಐ ಪುತ್ರನ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಈ ವೇಳೆ ಅರ್ಜುನ್ ರಾಯ್ಕರ್‌ಗೆ ಆರೋಪಿ ಮಂಜು ಜೀರಾ ಸೋಡಾ ಕೊಟ್ಟು, ಅದನ್ನು ಕುಡಿಯುತ್ತಿರಿ. ಮನೆಗೆ ಹೋಗಿ ಒಡವೆ ತರುತ್ತೇನೆಂದು ಹೋಗಿದ್ದಾನೆ. ಜೀರಾ ಸೋಡ ಕುಡಿಯುತ್ತಲೇ ತೀವ್ರ ಅಸ್ವಸ್ಥಗೊಂಡ ಅರ್ಜುನ್ ರಾಯ್ಕರ್‌ರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಜೀರಾ ಸೋಡಾ ಬಾಟಲಿಯಲ್ಲಿ ಸೈನೈಡ್ ವಿಷದ ಅಂಶವಿರುವುದು ದೃಢಪಟ್ಟಿದೆ.
ಅನುಮಾನಾಸ್ಪದ ರೀತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಮೃತದೇಹ ಪತ್ತೆ
ಹುಬ್ಬಳ್ಳಿ(Hubballi): ಇಲ್ಲಿನ ಐಟಿ ಪಾರ್ಕ್(IT Park) ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತದಲ್ಲಿರುವ ಶೌಚಾಲಯ ಬಳಿ ಖಾಸಗಿ ಸೆಕ್ಯೂರಿಟಿ ಗಾರ್ಡ್ ಸುಟ್ಟು ಕರಕಲಾಗಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ನಿವಾಸಿ, ಸದ್ಯ ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ಚನ್ನಮಲ್ಲಯ್ಯ ಶೇಖಯ್ಯ ಹಿರೇಮಠ (44) ಮೃತಪಟ್ಟವರು. ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಗುರುವಾರ ರಾತ್ರಿ ಎಂದಿನಂತೆ ಕೆಲಸಕ್ಕೆ ಬಂದಿದ್ದು, ಶುಕ್ರವಾರ ಶೌಚಾಲಯದಲ್ಲಿ ಸುಟ್ಟಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.