Mysuru: ದೈಹಿಕವಾಗಿ ಬಳಸಿಕೊಂಡು ವಿಚ್ಛೇದಿತ ಮಹಿಳೆಗೆ ವಂಚನೆ: ಪೊಲೀಸಪ್ಪನ ವಿರುದ್ಧ FIR

By Kannadaprabha NewsFirst Published Feb 26, 2022, 1:07 PM IST
Highlights

*  ಹುಲ್ಲಹಳ್ಳಿ ಠಾಣೆಯ ಮುಖ್ಯಪೇದೆ ಮೇಲೆ ಎಫ್‌ಐಆರ್‌
*  ಸಹಾಯ ಮಾಡುವ ನೆಪದಲ್ಲಿ ವಿಚ್ಛೇದನ ಕೊಡಿಸಿದ್ದ ಪೇದೆ
*  ಗುಟ್ಟು ಬಯಲಾಗುವ ಭೀತಿಯಲ್ಲಿ ಗರ್ಭಪಾತ ಮಾಡಿಸಿದ್ದ ಪೇದೆ ಕೃಷ್ಣ 

ನಂಜನಗೂಡು(ಫೆ.26):  ಮದುವೆಯಾಗುವುದಾಗಿ ವಿಚ್ಛೇದಿತ ಮಹಿಳೆಯನ್ನು ನಂಬಿಸಿ ವಂಚಿಸಿರುವ ಆರೋಪದ ಮೇರೆಗೆ ತಾಲೂಕಿನ ಹುಲ್ಲಹಳ್ಳಿ ಠಾಣೆಯ ಮುಖ್ಯಪೇದೆ ಮೇಲೆ ಎಫ್‌ಐಆರ್‌(FIR) ದಾಖಲಾಗಿದೆ. ಹುಲ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ. ಕೃಷ್ಣ ಎಂಬಾತನ ಮೇಲೆ ತಲಕಾಡು ಮೂಲದ ಸದ್ಯ ಮೈಸೂರಿನಲ್ಲಿ(Mysuru) ವಾಸಿಸುತ್ತಿರುವ ಮಹಿಳೆಯೊಬ್ಬರು(Women) ದೂರು(Complaint) ನೀಡಿದ್ದಾರೆ.

ಈ ಹಿಂದೆ ಬನ್ನೂರು ಪೊಲೀಸ್‌ ಠಾಣೆಯಲ್ಲಿ ಕೃಷ್ಣ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆಂದು ಪೊಲೀಸ್‌ ಠಾಣೆಗೆ ತೆರಳಿದ್ದ ಸಂದರ್ಭ ಪರಿಚಯವಾದ ಪೊಲೀಸ್‌ ಕೃಷ್ಣ ಅವರು ನನಗೆ ಸಹಾಯ ಮಾಡುವ ನೆಪದಲ್ಲಿ ನನ್ನ ಪತಿಗೆ ವಿಚ್ಛೇದನ(Divorce) ಕೊಡಿಸಿದ್ದರು. ಬಳಿಕ ಮದುವೆಯಾಗುವ ಭರವಸೆ ನೀಡಿ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ನನ್ನೊಂದಿಗೆ ಕೆಲ ದಿನಗಳ ಕಾಲ ಸಂಸಾರ ನಡೆಸಿ ದೈಹಿಕ ಸಂಪರ್ಕವನ್ನು ಸಾಧಿಸಿದ್ದರು. 

Kidney Fraud: ಆನ್‌ಲೈನ್‌ನಲ್ಲಿ ಕಿಡ್ನಿ ಮಾರಾಟಕ್ಕೆ ಹೋಗಿ 86 ಲಕ್ಷ ಕಳೆದುಕೊಂಡ

ಪರಿಣಾಮ ನಾನು ಗರ್ಭವತಿಯಾಗಿದ್ದರಿಂದ(Pregnant) ನಮ್ಮ ಗುಟ್ಟು ಬಯಲಾಗುವ ಭೀತಿಯಲ್ಲಿ ಗರ್ಭಪಾತ(Abortion) ಮಾಡಿಸಿದ್ದರು. ಜೊತೆಗೆ ಕಳೆದ ನಾಲ್ಕಾರು ವರ್ಷಗಳಿಂದ ಮದುವೆಯಾಗುವುದಾಗಿ ಸಬೂಬು ಹೇಳಿಕೊಂಡು ಬಂದು ಕಾಲ ದೂಡುತ್ತಿದ್ದು, ಈಗ ಕೊನೆಗೆ ಕೈಕೊಟ್ಟಿದ್ದಾರೆ. ಈ ಕುರಿತು ವಿಚಾರಿಸಲು ತೆರಳಿದಾಗ ಕೃಷ್ಣ ತನ್ನ ಅಪ್ರಾಪ್ತ ಮಗನ ಜೊತೆಗೂಡಿ ನನ್ನ ಮೇಲೆ ಹಲ್ಲೆ(Assalut) ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಹುಲ್ಲಹಳ್ಳಿ ಠಾಣೆ ಪಿಎ ಮಹೇಶ್‌ಕುಮಾರ್‌ ಆರೋಪಿ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹುಲ್ಲಹಳ್ಳಿ ಠಾಣೆಯ ಮುಖ್ಯಪೇದೆ ಮತ್ತು ಅವರ ಪುತ್ರನ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಮುಖ್ಯಪೇದೆ ಮೇಲಿನ ಆರೋಪ ಸಾಬೀತಾದರೇ ಅಮಾನತುಗೊಳಿಸಿ, ಕಾನೂನು ಕ್ರಮ ಕ್ರಮ ಜರುಗಿಸಲಾಗುವುದು ಅಂತ ಮೈಸೂರು ಎಸ್ಪಿ ಆರ್‌. ಚೇತನ್‌ ತಿಳಿಸಿದ್ದಾರೆ.  

ದುಬಾರಿ ಬಡ್ಡಿಯ ಆಸೆ ತೋರಿಸಿ 500 ಜನರಿಗೆ 40 ಕೋಟಿ ವಂಚನೆ

ಬೆಂಗಳೂರು: ದುಬಾರಿ ಬಡ್ಡಿ(Interest) ಆಸೆ ತೋರಿಸಿ ನೂರಾರು ಜನರಿಂದ 40 ಕೋಟಿ ಹಣ ವಸೂಲಿ ಮಾಡಿ ವಂಚಿಸಿದ(Fraud) ಆರೋಪ ಮೇರೆಗೆ ಖಾಸಗಿ ಪರವಾನಿಗೆ ಹೊಂದಿದ ಚಿಟ್ಸ್‌ ಫಂಡ್‌ ಕಂಪನಿ(Chits Fund Company) ನಿರ್ದೇಶಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಫೆ.16 ರಂದು ನಡೆದಿತ್ತು. 

ಬನಶಂಕರಿ ಎರಡನೇ ಹಂತದ ಪಂಚಮುಖಿ ಚಿಟ್‌ ಫಂಡ್ಸ್‌ ಸಂಸ್ಥೆ ನಿರ್ದೇಶಕ ಅನಂತರಾಮ್‌ ಬಂಧಿತನಾಗಿದ್ದು(Arrest), ಈ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಕಂಪನಿಯ ಪಾಲುದಾರ ಶಂಕರ್‌ ಹಾಗೂ ವರುಣ್‌ ರಾಜ್‌ ಪತ್ತೆಗೆ ತನಿಖೆ(Investigation) ನಡೆದಿದೆ. ಫೈನಾನ್ಸ್‌ ಕಂಪನಿ ಹೆಸರಿನಲ್ಲಿ ಜನರಿಗೆ ಆಧಿಕ ಬಡ್ಡಿ ಆಮಿಷವೊಡ್ಡಿ ಅನಂತ್‌ ಟೋಪಿ ಹಾಕಿದ್ದು, ಇತ್ತೀಚೆಗೆ ಪದ್ಮನಾಭನಗರದ ಸಿವಿಲ್‌ ಎಂಜನಿಯರ್‌ ದರ್ಶನ್‌ ವೆಂಕಟೇಶ್‌ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.

Fraud Case; ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಬಂಧನ

2009ರಲ್ಲಿ ಬನಶಂಕರಿ 2ನೇ ಹಂತದಲ್ಲಿ ತನ್ನ ಸೋದರ ಶಂಕರ್‌ ಜತೆ ಸೇರಿ ಪಂಚಮುಖಿ ಚಿಟ್‌ ಫಂಡ್ಸ್‌ ಹೆಸರಿನ ಕಂಪನಿಯನ್ನು ಅನಂತರಾಮ್‌ ಶುರು ಮಾಡಿದ್ದ. ಕೋಣನಕುಂಟೆಯಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ಅನಂತರಾಮ್‌, ಚೀಟಿ ಮಾತ್ರವಲ್ಲದೆ ಫೈನಾನ್ಸ್‌(Finance) ಹಾಗೂ ವಾಹನಗಳಿಗೆ ವಿಮಾ ಮಾಡಿಸುವ ವ್ಯವಹಾರ ಸಹ ನಡೆಸುತ್ತಿದ್ದ. ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.24 ರಷ್ಟು ಬಡ್ಡಿ ಕೊಡುವುದಾಗಿ ಆತ ಹೇಳಿದ್ದ. ಈ ಮಾತು ನಂಬಿದ ಸುಮಾರು 500ಕ್ಕೂ ಹೆಚ್ಚಿನ ಜನರು ಹಣ(Money) ಹೂಡಿದ್ದರು.

ಆರಂಭದಲ್ಲಿ ಜನರಿಗೆ ದುಬಾರಿ ಬಡ್ಡಿ ನೀಡಿ ವಿಶ್ವಾಸಗಳಿಸಿದ ಆರೋಪಿ, ಕಳೆದ ಒಂದೂವರೆ ತಿಂಗಳಿಂದ ಏನೇನೂ ಕಾರಣ ನೀಡಿ ಬಡ್ಡಿ ವಿತರಣೆ ಸ್ಥಗಿತಗೊಳಿಸಿದ್ದಾರೆ. ಕೊನೆಗೆ ಫೆ.3 ರಂದು ಕಂಪನಿ ಕಚೇರಿ ಬಾಗಿಲು ಬಂದ್‌ ಮಾಡಿದ್ದಾರೆ. ಈ ಕಂಪನಿಯಲ್ಲಿ ದೂರುದಾರ ದರ್ಶನ್‌ ಅವರು, ತಮ್ಮ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಸೇರಿದಂತೆ ಕುಟುಂಬದ ಐವರು ಸದಸ್ಯರ ಹೆಸರಿನಲ್ಲಿ 57 ಲಕ್ಷ ತೊಡಗಿಸಿದ್ದರು. ತಮಗೆ ಪೂರ್ವ ಒಪ್ಪದದಂತೆ ಹಣ ವಿತರಿಸದೆ ವಂಚಿಸಿದ್ದಾರೆ ಎಂದು ದರ್ಶನ್‌ ಆರೋಪಿಸಿದ್ದಾರೆ. ಇದೇ ರೀತಿ 170 ಮಂದಿ ಸಂತ್ರಸ್ತರು ದೂರು ನೀಡಿದ್ದು, ಸುಮಾರು 500ಕ್ಕೂ ಹೆಚ್ಚಿನ ಜನರಿಗೆ ಅಂದಾಜು 40 ಕೋಟಿಗೂ ಅಧಿಕ ಹಣ ಮೋಸ ಹೋಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದರು.
 

click me!