ವಿಚಕ್ಷಣಾ ಆಯೋಗದ ಅಧಿಕಾರಿಗಳ ಎದುರೇ ಐಎಎಸ್ ಅಧಿಕಾರಿಯ ಪುತ್ರನ ಆತ್ಮಹತ್ಯೆ!

By Santosh NaikFirst Published Jun 25, 2022, 6:11 PM IST
Highlights

ಕಾನೂನು ಪದವೀಧರನಾಗಿದ್ದ ಕಾರ್ತಿಕ್ ಪೊಪ್ಲಿ ತನ್ನ ಮನೆಯ ಮೊದಲ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ ರಾಜ್ಯ ವಿಚಕ್ಷಣಾ ಆಯೋಗ ಅಧಿಕಾರಿಗಳು ಕಾರ್ತಿಕ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಾರ್ತಿಕ್ ತಾಯಿ ಆರೋಪಿಸಿದ್ದಾರೆ. 

ಚಂಡೀಗಢ (ಜೂನ್ 25):  ಭ್ರಷ್ಟಾಚಾರ ಪ್ರಕರಣದಲ್ಲಿ(Graft Case) ಆರೋಪಿಯಾಗಿರುವ ಪಂಜಾಬ್ ಕೇಡರ್ ಐಎಎಸ್ ಸಂಜಯ್ ಪೊಪ್ಲಿ (Punjab cadre IAS Sanjay Popli) ಅವರ ಪುತ್ರ ಕಾರ್ತಿಕ್ ಪೊಪ್ಲಿ (26) ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಜಾಬ್ ವಿಚಕ್ಷಣಾ ಆಯೋಗದ ( Punjab vigilance bureau) ಅಧಿಕಾರಿಗಳ ಎದುರೇ ಈ ಘಟನೆ ನಡೆದಿದೆ. ಭ್ರಷ್ಟಚಾರ ಆರೋಪದಲ್ಲಿ ಸೆಕ್ಟರ್ 11 ರಲ್ಲಿರುವ ಸಂಜಯ್ ಪೊಪ್ಲಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿ ಬಂಧಿಸುವ ವೇಳೆ ಈ ಘಟನೆ ನಡೆಸಿದೆ.

ಕಾನೂನು ಪದವೀಧರನಾಗಿದ್ದ (law graduate)  ಕಾರ್ತಿಕ್ ಪೊಪ್ಲಿ(Kartik Popli) ತನ್ನ ಮನೆಯ ಮೊದಲ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ ರಾಜ್ಯ ವಿಚಕ್ಷಣಾ ಆಯೋಗ ಅಧಿಕಾರಿಗಳು ಕಾರ್ತಿಕ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಾರ್ತಿಕ್ ತಾಯಿ ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನ ಮಗನ ಸಾವಿಗೆ ಕಾರಣರಾದ ಪಂಜಾಬ್ ಪೊಲೀಸ್ ಅಧಿಕಾರಿಗಳ ಸಮವಸ್ತ್ರವನ್ನು ನಾನು ಕಳಚದೇ ಬಿಡುವುದಿಲ್ಲ ಎಂದು ಕಾರ್ತಿಕ್ ಪೋಪ್ಲಿ ತಾಯಿ ಪ್ರತಿಜ್ಞೆಯನ್ನೂ ಮಾಡಿದ್ದಾರೆ.

ಚಂಡೀಗಢದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ಇದು ಆತ್ಮಹತ್ಯೆ ಪ್ರಕರಣ. ನಾವು ತನಿಖೆ ಆರಂಭಿಸಿದ್ದೇವೆ. ಕಾರ್ತಿಕ್ ಅವರನ್ನು ಪಂಜಾಬ್‌ನ ವಿಚಕ್ಷಣಾ ಅಯೋಗದ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ ಎಂದು  ಅವರ ಕುಟುಂಬ ಸದಸ್ಯರು ಆರೋಪಿಸಿದ್ದು, ಅವರ ಹೇಳಿಕೆಗಳನ್ನು ನಾವು ದಾಖಲಿಸಿಕೊಳ್ಳುತ್ತೇವೆ' ಎಂದಿದ್ದಾರೆ.

IAS Sanjay Popli's son killed, shot in the head, Mother has accused Punjab vigilance team of firing.
Turbulent times continue in Punjab under reckless regime pic.twitter.com/M2Kei5EiEg

— Manjinder Singh Sirsa (@mssirsa)


ಪಂಜಾಬ್ ವಿಜಿಲೆನ್ಸ್ ಬ್ಯೂರೋದ ತಂಡವು ಐಎಎಸ್ ಪೊಪ್ಲಿ ಅವರ ಮನೆಗೆ ಶೋಧ ಕಾರ್ಯ ನಡೆಸಲು ತಲುಪಿತ್ತು ಎಂದು ಪೊಲೀಸರು ಈ ವೇಳೆ ಹೇಳಿದ್ದಾರೆ. ತಂಡದ ಭೇಟಿಯ ಬಗ್ಗೆ ಪಂಜಾಬ್ ವಿಜಿಲೆನ್ಸ್ ತಂಡವು ಪ್ರದೇಶ ಪೊಲೀಸ್ ಠಾಣೆ, ಸೆಕ್ಟರ್ 11 ಗೆ ಮಾಹಿತಿ ನೀಡಿದೆ. ಐಎಎಸ್ ಸಂಜಯ್ ಪೊಪ್ಲಿ ಅವರನ್ನು ಬಂಧಿಸಿ ವಿಜಿಲೆನ್ಸ್ ತಂಡ ಮನೆಯಿಂದ ಮರಳಿದ್ದು, ಸಂಜಯ್ ಪೊಪ್ಲಿ ಅವರನ್ನು ಮೊಹಾಲಿ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬುಲೆಟ್‌ ಏಟಿನಿಂದ ಗಾಯಗೊಂಡಿದ್ದ ಕಾರ್ತಿಕ್ ಪೊಪ್ಲಿ ಅವರನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ ರವಾನಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಮೂಲಗಳು ತಿಳಿಸಿವೆ.

ಪಂಜಾಬ್ ಕೇಡರ್ ಐಎಎಸ್ ಸಂಜಯ್ ಪೊಪ್ಲಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜೂನ್ 20 ರಂದು ಬಂಧಿಸಲಾಯಿತು. ವಿಜಿಲೆನ್ಸ್ ತಂಡವು ಅವರ ಮನೆಯಿಂದ ಭಾರೀ ಪ್ರಮಾಣದ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ. ಆತನ ವಿರುದ್ಧ ಸೆಕ್ಟರ್ 11 ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವೂ ದಾಖಲಾಗಿದೆ. ಸಂಜಯ್ ಪೊಪ್ಲಿ ಅವರನ್ನು ಪಂಜಾಬ್ ಸರ್ಕಾರದ ಪಿಂಚಣಿಗಳ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು.

ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ

ಗುತ್ತಿಗೆದಾರ ಸಂಜಯ್ ಕುಮಾರ್ ಅವರು ಭ್ರಷ್ಟಾಚಾರ ನಿಗ್ರಹ ಸಹಾಯವಾಣಿಗೆ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಕಿಕ್‌ಬ್ಯಾಕ್‌ಗಾಗಿ ಸಂಜಯ್ ಪೊಪ್ಲಿ ಎರಡನೇ ಕಂತನ್ನು ಒತ್ತಾಯಿಸುತ್ತಿದ್ದಾರೆ ಎಂದು ತೋರಿಸಲು ಕುಮಾರ್ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಪೋಪ್ಲಿ ಅವರು ಮೇ ತಿಂಗಳಲ್ಲಿ ಪಿಂಚಣಿ ನಿರ್ದೇಶಕರಾಗಿ ವರ್ಗಾವಣೆಯಾಗುವ ಮೊದಲು ಪಂಜಾಬ್ ಒಳಚರಂಡಿ ಮಂಡಳಿಯ ಸಿಇಒ ಆಗಿದ್ದರು. 

ಸಿಧು ಮೂಸೆವಾಲಾ ಕೊಲೆ ಬಳಿಕ ಎಚ್ಚೆತ್ತ ಪಂಜಾಬ್ ಸರ್ಕಾರ, 424 ವಿವಿಐಪಿಗಳಿಗೆ ಭದ್ರತೆ ಮರುನಿಯೋಜಿಸಲು ನಿರ್ಧಾರ!

ಮಂಡಳಿಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಸಂದೀಪ್ ವಾಟ್ಸ್ ಅವರನ್ನು ಸಂಜಯ್ ಕುಮಾರ್‌ ಅವರ ದೂರಿನ ಮೇಲೆಗೆ ಬಂಧಿಸಲಾಗಿದೆ.  ಕರ್ನಾಲ್‌ನ ನಿವಾಸಿ ಮತ್ತು ದಿಖದಲಾ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನ ಸರ್ಕಾರಿ ಗುತ್ತಿಗೆದಾರ ಆಗಿರುವ ಸಂಜಯ್ ಕುಮಾರ್ , ನವನಶೆಹರ್ ನಲ್ಲಿ ಒಳಚರಂಡಿ ಪೈಪ್ ಲೈನ್ ಅಳವಡಿಕೆಗೆ ಟೆಂಡರ್ ಗಾಗಿ ಇವರಿಬ್ಬರೂ ಶೇ.1ರಷ್ಟು ಕಮೀಷನ್ ಕೇಳಿದ್ದರು ಎಂದು ದೂರು ನೀಡಿದ್ದರು.

 

click me!