* ದೂರವಾಣಿ ಕರೆ ಮಾಡುತ್ತಾ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿರುವ ಶಂಕೆ
* ಕೌಟುಂಬಿಕ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿದ್ದ ಸುರೇಶ್
* ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಉಳ್ಳಾಲ(ಫೆ.09): ದುಬೈಗೆ(Dubai) ತೆರಳುತ್ತೇನೆಂದು ಹೇಳಿದ್ದ ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್ ಸೋಮೇಶ್ವರ ಸಮುದ್ರದಲ್ಲಿ ಆತ್ಮಹತ್ಯೆ ನಡೆಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ಸಂಜೆ ಮೃತದೇಹ(deadody) ಕಂಡುಬಂದಿದೆ.
ಕುತ್ತಾರು ತೇವುಲ ನಿವಾಸಿ, ಪ್ರಸ್ತುತ ಕೊಲ್ಯದಲ್ಲಿ ವಾಸವಿರುವ ಸುರೇಶ್ ಸಾಲಿಯಾನ್ (48) ಮೃತರು. ಕೊಲ್ಯ ಮನೆಯಿಂದ ಸೋಮವಾರ ತಡರಾತ್ರಿ ಹೊರಗಡೆ ತೆರಳಿದ್ದು, ರಾತ್ರಿ ದೂರವಾಣಿ ಮೂಲಕ ತನ್ನ ಸಂಬಂಧಿಕರೊಬ್ಬರಿಗೆ ನಾನು ದೂರ ಹೋಗುತ್ತೇನೆ ಇನ್ನು ಬರುವುದಿಲ್ಲ ಎಂದು ಫೋನ್ ಮಾಡಿ ಸ್ವಿಚ್‌ಆಫ್ ಮಾಡಿದ್ದರು. ಕರೆ ಮಾಡಿದ್ದ ಸಂಬಂಧಿ ಮನೆ ಸೋಮೇಶ್ವರ ಬಳಿಯೇ ಇದ್ದರಿಂದ ಅವರು ಏನಾದರೂ ಸಮಸ್ಯೆಯಿಂದ ಸಮುದ್ರ ಕಿನಾರೆಗೆ ಬಂದಿರುವ ಸಾಧ್ಯತೆಯ ಬಗ್ಗೆ ಹುಡುಕಿ ಯಾರು ಇಲ್ಲದೆ ಇದ್ದಾಗ ಹಿಂದೆ ಹೋಗಿದ್ದರು.
Tumakuru : ವೇಶ್ಯಾವಾಟಿಕೆಗೆ ಪ್ರಚೋದನೆ ಆರೋಪದ ಬೆನ್ನಲ್ಲೇ ನಾಣಿ ಹಂದ್ರಾಳ ಆತ್ಮಹತ್ಯೆಗೆ ಯತ್ನ
ಆರ್ಕಿಟೆಕ್ಟ್ ಎಂಜಿನಿಯರ್ ಹಾಗೂ ಭೂವ್ಯವಹಾರ ಹೊಂದಿದ್ದ ಸುರೇಶ್‌ಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅವರಿಗೆ ಪತ್ನಿ ಮತ್ತು ಪುತ್ರ, ಪುತ್ರಿಯಿದ್ದು ಈ ನಡುವೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧವಿದ್ದ ಕಾರಣ ಪತ್ನಿಯೊಂದಿಗೆ ವಿರಸದಿಂದ ವಿಚ್ಛೇದನ ಹಂತಕ್ಕೆ ತಲುಪಿತ್ತು. ಈ ನಡುವೆ ಸುರೇಶ್ ವಿವಾಹಿತ ಮಹಿಳೆಯೊಂದಿಗೆ ಗ್ರಾಮಚಾವಡಿ ಬಳಿಯ ಮನೆಯೊಂದರಲ್ಲಿ ಬಾಡಿಗೆಗಿದ್ದು, ತನ್ನ ಕೊಲ್ಯದ ಮನೆಗೆ ಬರುತ್ತಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಕೌಟುಂಬಿಕ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ತಲೆನೋವಿಗೆ ಸಂಬಂಧಿಸಿದಂತೆ ತನ್ನ ಸ್ನೇಹಿತರಿಗೆ ತಿಳಿಸಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದಿದ್ದರು.
ವಿದೇಶಕ್ಕೆ ತೆರಳುತ್ತೇನೆ ಎಂದು ಸ್ನೇಹಿತರಲ್ಲಿ ಹೇಳಿ ನೇರವಾಗಿ ಸೋಮೇಶ್ವರ ಕಡಲ ಕಿನಾರೆಗೆ ಆಗಮಿಸಿ ಪಾದರಕ್ಷೆಯನ್ನು ರುದ್ರಪಾದೆಯ ಕೆಳಗಡೆ ಇಟ್ಟು ದೂರವಾಣಿ ಕರೆ ಮಾಡುತ್ತಾ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕರಾವಳಿ ರಕ್ಷಣಾ ಪಡೆಯ ಸ್ಥಳೀಯ ಜೀವರಕ್ಷಕರು ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಮೃತದೇಹ ಕಂಡು ಬಂದಿದ್ದು, ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಉಳ್ಳಾಲ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
5ನೇ ಮಹಡಿಯಿಂದ ಬಿದ್ದು ಖ್ಯಾತ ವೈದ್ಯನ ಪುತ್ರ ಆತ್ಮಹತ್ಯೆ
ಆನೇಕಲ್: ಜೀವನದಲ್ಲಿ ಜಿಗುಪ್ಸೆಗೊಂಡ ಖಾತ್ಯ ವೈದ್ಯ ದಂಪತಿಯ ಪುತ್ರ, 10ನೇ ತರಗತಿ ವಿದ್ಯಾರ್ಥಿ(Student) 5ನೇ ಮಹಡಿಯ ಮೇಲಿನಿಂದ ಬಿದ್ದು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಕಮ್ಮಸಂದ್ರದ ಡ್ಯಾಡಿ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಆನೇಕಲ್‌ನ(Anekal) ಪ್ರತಿಷ್ಠಿತ ಸ್ಪರ್ಷ ಆಸ್ಪತ್ರೆಯ ವೈದ್ಯ ದಂಪತಿ ಶರಣ್ ಪಾಟೀಲ್ ಮತ್ತು ಮಮತಾ ಪಾಟೀಲ್ ಅವರ ಏಕೈಕ ಪುತ್ರ ಆದಿತ್ಯ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಟ್ರೆಮಿಸ್ ಶಾಲೆಯಲ್ಲಿ ಸಿಬಿಎಸ್‌ಇಯಲ್ಲಿ ಎಸ್‌ಎಸ್‌ಎಲ್‌ಸಿ(SSLC) ವ್ಯಾಸಂಗ ಮಾಡುತ್ತಿದ್ದ. ಆದಿತ್ಯ ಕಳೆದ ಕೆಲ ದಿನಗಳಿಂದ ಏಕಾಂಗಿಯಾಗಿರುತ್ತಿದ್ದ. ಮನೆಯಿಂದ ಹೊರಬರದೇ ಒಂಟಿಯಾಗಿರುತ್ತಿದ್ದ.
Crime News ಲಗ್ನ ಪತ್ರಿಕೆ ಪ್ರಿಂಟ್, ಪೊಲೀಸಪ್ಪನಿಂದ ಲವ್ ಸೆಕ್ಸ್ ದೋಖಾ
ಮಂಗಳವಾರ ಮಧ್ಯಾಹ್ನ ಪರೀಕ್ಷೆ ಇದ್ದ ಕಾರಣ ತನ್ನ ಡ್ಯೂಪ್ಲೆಕ್ಸ್ ಮನೆಯಲ್ಲಿಯೇ ಓದಿಕೊಳ್ಳುತ್ತಿದ್ದ. ಇದ್ದಕ್ಕಿದಂತೆ ಅಂಗಡಿಗೆ ಹೋಗಿ ಬರುವುದಾಗಿ ಮನೆಯ ಕೆಲಸದಾಕೆ ಮೇರಿಯಮ್ಮನಿಗೆ ತಿಳಿಸಿದ್ದಾನೆ. ಬಳಿಕ ಮನೆಯಿಂದ ಹೊರಬಂದ ಆತ ಮನೆಯ ಹಿಂಬದಿಯ ಇರುವ ಅಪಾರ್ಟ್‌ಮೆಂಟ್‌ನ ಐದನೆಯ ಮಹಡಿಗೆ ತೆರಳಿ ಅಲ್ಲಿದ್ದ ಹಾರಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಡಾಂಬರು ರಸ್ತೆಗೆ ತಲೆ ಒಡೆದು ಮೆದುಳು(Brain) ಹೊರಬಂದಿತ್ತು. ಆದಿತ್ಯ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತನಿಗೆ ಪೋಷಕರು ಕಷ್ಟ ಎಂದರೇನೆಂಬುದನ್ನೇ ತಿಳಿಯದಂತೆ ಮುದ್ದಾಗಿ ಸಾಕಿದ್ದರು. ಘಟನೆ ನಡೆದ ವೇಳೆ ಪೋಷಕರು ಆಸ್ಪತ್ರೆಗೆ ಹೋಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಮಗನ ಶವದ ಮೇಲೆ ಮಲಗಿ ಶರಣ್ ಪಾಟೀಲ್ ಅವರು ಮಗುನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ನೋಡುಗರ ಕರುಳು ಹಿಂಡುತ್ತಿತ್ತು. ತಾಯಿಯೂ ಕೂಡ ಪುತ್ರನ ತೋಳಿನ ಮೇಲೆ ಮಲಗಿ ಕಣ್ಣೀರ ಧಾರೆ ಹರಿಸಿದರು. ಡಿವೈಎಸ್ಪಿ ಮಲ್ಲೇಶ್ ಮತ್ತು ವೃತ್ತ ನಿರೀಕ್ಷಕರು ಭೇಟಿ ಸ್ಥಳಕ್ಕೆ ಭೇಟಿ ನೀಡಿದ್ದರು.