ಹಳೆ ಬೆಳಗಾವಿಯ ಸಾಯಿನಗರ ನಿವಾಸಿ ಅಯೇಜಾಜಅಹ್ಮದ ಅಹ್ಮದರಪೀಕ ಪೀರಜಾದೆ ಕಾಣೆಯಾದ ವ್ಯಕ್ತಿ
ಬೆಳಗಾವಿ(ಸೆ.20): ಹೆಂಡತಿ ಕಳುಹಿಸಿದ ವಿವಾಹ ವಿಚ್ಛೇದನ ನೋಟಿಸ್‌ನಿಂದ ಮನನೊಂದು ಮನೆಯಿಂದ ಹೊರಗೆ ಹೋದವ ವ್ಯಕ್ತಿ ಇದುವರೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ನಗರದ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ಬೆಳಗಾವಿಯ ಸಾಯಿನಗರ ನಿವಾಸಿ ಅಯೇಜಾಜಅಹ್ಮದ ಅಹ್ಮದರಪೀಕ ಪೀರಜಾದೆ (28) ಕಾಣೆಯಾದ ವ್ಯಕ್ತಿ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯವರಾಗಿದ್ದ ಈ ಕುಟುಂಬ ಬೆಳಗಾವಿ ಸಾಯಿನಗರದಲ್ಲಿ
ವಾಸವಾಗಿದ್ದರು. ಅಯೇಜಾಜಅಹ್ಮದ ನಗರದ ವಾಹನ ಶೋರೂಮ್‌ನದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವಿವಾಹ ವಿಚ್ಚೇಧನ ನೀಡುವ ಕುರಿತು ಕಾಣೆಯಾದ ಅಯೇಜಾಜ ಅಹ್ಮದ ಪತ್ನಿ ನೋಟೀಸ್ ಕಳುಹಿಸಿದ್ದಾಳೆ. ಈ ನೋಟಿಸ್‌ನಿಂದ ಮನನೊಂದು ಸೆ.9 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೆಲಸ ಇದೆ ಎಂದು ಮನೆಯಲ್ಲಿ ಹೇಳಿ ಹೋದವನು ಮರಳಿ ಮನೆಗೆ ಬಂದಿಲ್ಲ. ಈ ಕುರಿತು ಪರಿಚಯಸ್ಥರಲ್ಲಿ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದ್ದು, ಈತನ ಕುರಿತು ಸುಳಿವು ಸಿಕ್ಕಿಲ್ಲ ಎಂದು ಕಾಣೆಯಾದ ಅಯೇಜಾಜಅಹ್ಮದ ತಂದೆ ಅಹ್ಮದರಪೀಕ ಪೀರಜಾದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದ!
ಕಾಣೆಯಾದ ಅಯೇಜಾಜಅಹ್ಮದ 5. 8 ಅಡಿ ಎತ್ತರ, ಕೋಲು ಮುಖ, ನೆಟ್ಟನೆಮೂಗು, ಸದೃಢ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೊರಡುವಾಗ ತಿಳಿ ನೀಲಿ, ಕಂದು ಮತ್ತು ಬಿಳಿ ಬಣ್ಣದ ಡಿಜೈನ್‌ವುಳ್ಳ ಉದ್ದ ತೋಳಿನ ಶರ್ಚ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ. ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಮನುಷ್ಯನ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ನಗರ ಪೊಲೀಸ್ ಕಂಟ್ರೋಲ್ ರೂಮ್ 0831-2405233, ಶಹಪೂರ ಪೊಲೀಸ ಠಾಣೆ ದೂರವಾಣಿ -0831-2405244, ಪೊಲೀಸ ಇನ್ಸಪೆಕ್ಟರ್ ಮೊ.ನಂ-9480804046 ನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.