Pune Crime: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ

By BK Ashwin  |  First Published Sep 20, 2022, 6:35 PM IST

ಯುವತಿಗೆ ಪಾರ್ಸೆಲ್ ತಲುಪಿಸಿದ ನಂತರ ನೀರು ಕೇಳುವ ನೆಪದಲ್ಲಿ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಫುಡ್ ಡೆಲಿವರಿ ಏಜೆಂಟ್ ಬಂಧನವಾಗಿದೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ ಈ ಘಟನೆ ನಡೆದಿದೆ. 


ಯುವತಿಗೆ ನೀರು ಕೇಳುವ ನೆಪದಲ್ಲಿ ಹಾಗೂ ಆಕೆಯನ್ನು ಪರಿಚಯ ಮಾಡಿಕೊಳ್ಳುವ ನೆಪವೊಡ್ಡಿ ಕಾಲೇಜು ವಿದ್ಯಾರ್ಥಿನಿಯ ಮೈ ಕೈ ಮುಟ್ಟಿದ ಆರೋಪದ ಮೇಲೆ ಫುಡ್‌ ಡೆಲಿವರಿ ಏಜೆಂಟ್‌ ಮೇಲೆ ಕೇಸ್‌ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ ಆರೋಪದ ಮೇಲೆ 40 ವರ್ಷದ ಆಹಾರ ವಿತರಣಾ ಏಜೆಂಟ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರಕ್ಷಕ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಆನ್‌ಲೈನ್ ಫುಡ್ ಅಗ್ರಿಗೇಟರ್ ಆ್ಯಪ್ (Food Aggregator App) ಮೂಲಕ ರೆಸ್ಟೋರೆಂಟ್‌ನಿಂದ ಶನಿವಾರ ಆಹಾರವನ್ನು ಆರ್ಡರ್ ಮಾಡಿದ್ದರು.

ನಂತರ, ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಯುವತಿಗೆ ಪಾರ್ಸೆಲ್ ನೀಡಿದ ನಂತರ, ಆರೋಪಿ ರಯೀಸ್ ಶೇಖ್ ಕುಡಿಯಲು ನೀರು (Water) ಕೇಳಿದನು. ಹಾಗೆ ನೀರು ಕುಡಿಯುತ್ತಿದ್ದಾಗ, ವಿದ್ಯಾರ್ಥಿನಿಯೊಂದಿಗೆ ಸಂಭಾಷಣೆ ನಡೆಸಿ ಆಕೆ ಹುಟ್ಟಿದ ಊರು (Native Place) ಮತ್ತು ಕಾಲೇಜಿನ (College) ವಿವರಗಳನ್ನು ಆರೋಪಿ ಕೇಳಿದನು ಎಂದು ಮಹಾರಾಷ್ಟ್ರದ ಕೊಂಡ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: Uttar Pradesh: ಫಲಿಸಲಿಲ್ಲ ಚಿಕಿತ್ಸೆ; ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಬಾಲಕಿ ಸಾವು

ನಂತರ, ಆರೋಪಿಯು ಆ ಯುವತಿಗೆ ತಾನು ಆಕೆಯ ಚಿಕ್ಕಪ್ಪನಂತೆ ಎಂದು ಹೇಳಿದ್ದಾನೆ ಮತ್ತು ತನಗೆ ಏನಾದರೂ ಬೇಕಾದರೆ ಹೇಳುವಂತೆಯೂ ಕೇಳಿದ್ದಾನೆ. ಅಲ್ಲದೆ, ಅವನು ಪುಣೆಯ ಆ ವಿದ್ಯಾರ್ಥಿನಿಗೆ ಫೋನ್‌ನಲ್ಲಿ ಸಂದೇಶವನ್ನು (Message) ಕಳುಹಿಸಿದ್ದು, ಆದರೆ ಅದನ್ನು ತಕ್ಷಣವೇ ಡಿಲೀಟ್‌ ಮಾಡಿದ್ದಾನೆ ಎಂದೂ ಪೊಲೀಸ್‌ ಅಧಿಕಾರಿ ಹೇಳಿದರು. ಅಲ್ಲದೆ, ಆರೋಪಿ ನಂತರ ಮತ್ತೊಂದು ಲೋಟ ನೀರು ಕೇಳಿದನು ಮತ್ತು ಯುವತಿ ಮತ್ತೆ ನೀರು ಕೊಟ್ಟಾಗ, ಅವನು ಅವಳ ಕೈಯನ್ನು ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ" ಎಂದು ಅಧಿಕಾರಿ ಹೇಳಿದರು.

ಬಳಿಕ ಆ ವಿದ್ಯಾರ್ಥಿನಿ ಎಚ್ಚರಿಕೆ ನೀಡಿದಾಗ, ಆರೋಪಿ ಓಡಿಹೋಗಲು ಪ್ರಯತ್ನಿಸಿದನು. ಆದರೆ ಹೌಸಿಂಗ್ ಸೊಸೈಟಿಯ ಕೆಲವರು ಅರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ನಂತರ ಕಿರುಕುಳಕ್ಕೊಳಗಾದ ಯುವತಿ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು, ಆರೋಪಿಯನ್ನು ಬಂಧಿಸಿ (Arrest) ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಗೆ ಅತಿರೇಕದ ನಮ್ರತೆ) ಮತ್ತು 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಜಾಮೀನಿನ (Bail) ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಯಿತು ಎಂದೂ ಮಹಾರಾಷ್ಟ್ರದ ಪುಣೆಯ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Lakhimpur Kheri Horror: ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ, ಕೊಲೆ; 6 ಆರೋಪಿಗಳು ವಶಕ್ಕೆ

click me!