ಕಲಬುರಗಿ: ಕಪ್ಪಗಿದ್ದಿಯಾ ಎಂದು ಹೆಂಡತಿಯ ಕೊಲೆ ಮಾಡಿದ ಗಂಡ

By Kannadaprabha News  |  First Published Mar 4, 2023, 2:24 PM IST

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್‌ ಗ್ರಾಮದಲ್ಲಿ ನಡೆದ ಘಟನೆ. 


ಕಲಬುರಗಿ(ಮಾ.04):  ಕಪ್ಪಗಿದ್ದಿಯಾ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜೇವರ್ಗಿ ತಾಲೂಕಿನ ಕೆಲ್ಲೂರ್‌ ಗ್ರಾಮದಲ್ಲಿ ನಡೆದಿದೆ. ಫರ್ಜಾನ ಬೇಗಂ (28) ಕೊಲೆಯಾದವರು. ಖಾಜಾ ಪಟೇಲ್‌ ಎಂಬಾತನೆ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕಪ್ಪಗಿದ್ದಿಯಾ, ನೀನೆಷ್ಟೇ ಪೌಡರ್‌ ಹಾಕಿದರೂ ಬೆಳ್ಳಗಾಗಲ್ಲ ಅಂತ ಖಾಜಾ ಪಟೇಲ್‌ ಪತ್ನಿ ಫರ್ಜಾನ ಬೇಗಂ ಅವರಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಮದುವೆಯಾದ ದಿನದಿಂದಲೂ ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

Tap to resize

Latest Videos

undefined

Murder case: ಪಕ್ಕದ ಮನೆಯವ್ಳ ಜತೆ ಮಾತಾಡಿದ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿ ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !

7 ವರ್ಷಗಳ ಹಿಂದೆ ಫರ್ಜಾನ ಬೇಗಂ ಮತ್ತು ಖಾಜಾ ಪಟೇಲ್‌ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್‌ ಮತ್ತು ಆತನ ಕುಟುಂಬದವರು ಪರಾರಿಯಾಗಿದ್ದಾರೆ. ಈ ಸಂಬಂಧ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!