Bengaluru: ಕಸದ ರಾಶಿಗೆ ಎಸೆದ 4-5 ತಿಂಗಳ ಮಗುವಿನ ಮೇಲೆ ವಾಹನ ಹರಿದು ಸಾವು!

Published : Mar 04, 2023, 01:34 PM IST
Bengaluru: ಕಸದ ರಾಶಿಗೆ ಎಸೆದ 4-5 ತಿಂಗಳ ಮಗುವಿನ ಮೇಲೆ ವಾಹನ ಹರಿದು ಸಾವು!

ಸಾರಾಂಶ

ಉತ್ತರ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಸದ ರಾಶಿಯಲ್ಲಿ ಬಿಸಾಡಲಾಗಿದ್ದ ನಾಲ್ಕೈದು ತಿಂಗಳ ಮಗುವೊಂದರ ಮೇಲೆ ವೇಗವಾಗಿ ಬಂದ ವಾಹನಗಳು  ಹರಿದ ಪರಿಣಾಮವಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಬೆಂಗಳೂರು (ಮಾ.4): ಉತ್ತರ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಸದ ರಾಶಿಯಲ್ಲಿ ಬಿಸಾಡಲಾಗಿದ್ದ ನಾಲ್ಕೈದು ತಿಂಗಳ ಮಗುವೊಂದರ ಮೇಲೆ ವೇಗವಾಗಿ ಬಂದ ವಾಹನಗಳು  ಹರಿದ ಪರಿಣಾಮವಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲಾರಿಗೆ ಕಸ ತುಂಬುತ್ತಿದ್ದಾಗ ಮಗುವನ್ನು ತುಂಬಿದ್ದ ಕವರ್ ರಸ್ತೆಗೆ ಬಿದ್ದಿದೆ. ಈ ವೇಳೆ  ವೇಗವಾಗಿ ಬಂದ ವಾಹನಗಳು ಆ ಕವರ್‌ ಮೇಲೆ ಹರಿದ ಪರಿಣಾಮ ನಜ್ಜು ಗುಜ್ಜಾಗಿ ಸಾವನ್ನಪ್ಪಿದೆ.

ಅಮೃತಹಳ್ಳಿ ಬಳಿಯ ಪಂಪಾ ಲೇಔಟ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ದಾರಿಹೋಕರು ಪೊಲೀಸರಿಗೆ  ವಿಷಯ ತಿಳಿಸಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಗೆ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಫೆಬ್ರವರಿ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ: ಮಹಿಳಾ ದಿನಾಚರಣೆ ಹೊತ್ತಲ್ಲೇ ವೃದ್ಧೆಯ ಮೇಲೆ ಕುಡುಕರಿಬ್ಬರು ಅತ್ಯಾಚಾರ!

ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಲಾರಿಗೆ ಕಸ ತುಂಬುತ್ತಿದ್ದಾಗ ಒಳಗಿದ್ದ ಶಿಶುವಿನ ಕವರ್ ರಸ್ತೆಗೆ ಬಿದ್ದಿದೆ. ಪ್ಲಾಸ್ಟಿಕ್‌ನೊಳಗೆ ಮಗು ಸುತ್ತಿರುವುದನ್ನು ಗಮನಿಸಲು ಸಾಧ್ಯವಾಗದೆ, ಹಲವಾರು ವಾಹನಗಳು ಅದರ ಮೇಲೆ ಹರಿದು ಅದರ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಯಾದಗಿರಿ: ಮಗನ ಸಾವಿನ ಆಘಾತದಿಂದ ತಂದೆಯೂ ಆತ್ಮಹತ್ಯೆಗೆ ಶರಣು

ಮಗುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಾಶಿಯಲ್ಲಿ ಎಸೆದಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಬಿಬಿಎಂಪಿ ಟ್ರಕ್‌ಗೆ ತ್ಯಾಜ್ಯ ತುಂಬಲಾಗಿತ್ತು. ಲಾರಿ ಚಲಿಸುತ್ತಿದ್ದಂತೆ ಒಳಗಿದ್ದ ಶಿಶುವಿನ ಕವರ್ ರಸ್ತೆಯ ಮೇಲೆ ಬಿದ್ದಿದೆ. ಕವರ್ ಸುತ್ತಲೂ ಚೆಲ್ಲಿದ ಕಸ ಇದನ್ನು ಸಾಬೀತುಪಡಿಸಿತು. ಮಗುವನ್ನು ಗಮನಿಸದೆ ಹಲವು ವಾಹನಗಳು ಕವರ್ ಮೇಲೆ ಹರಿದು ಶಿಶು ಪ್ರಾಣಬಿಟ್ಟಿದೆ. ದೇಹ ನಜ್ಜು ಗುಜ್ಜಾಗಿರುವುದರಿಂದ ಲಿಂಗವನ್ನು ತಿಳಿಯುವುದು ಕಷ್ಟವಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!