ಬೆಳಗಿನವರೆಗೂ ಪಾರ್ಟಿ ಮಾಡಿದ್ದ ದರ್ಶನ್&ಗ್ಯಾಂಗ್! ಹತ್ಯೆಗೂ ಮುನ್ನ ಏನೇನಾಯ್ತು? ಕಂಪ್ಲೀಟ್‌ ಡೀಟೆಲ್ಸ್

By Suvarna News  |  First Published Jun 11, 2024, 6:51 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ ಮತ್ತು ಗ್ಯಾಂಗ್ ಸೇರಿ 13 ಮಂದಿಯನ್ನು ಈವರೆಗೆ ಬಂಧಿಸಲಾಗಿದ್ದು, ಕೊಲೆಯ ಹಿಂದಿನ  ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.


ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 13 ಮಂದಿಯನ್ನು ಈವರೆಗೆ ಬಂಧಿಸಲಾಗಿದ್ದು, ಬೆನ್ನಲ್ಲೇ  ಕೊಲೆಯ ಬಗ್ಗೆ ಒಂದೊಂದೇ ವಿಚಾರ ಹೊರಗಡೆ ಬರುತ್ತಿದೆ.  ಕೊಲೆಗೂ ಮುನ್ನ ಏನೇನಾಯ್ತು ಎಂಬ ಬಗ್ಗೆ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಅಪೋಲೋ ಮಡಿಕಲ್‌ ನಲ್ಲಿ ಕೆಲಸ ಮಾಡುತ್ತಿದ್ದ, ಮನೆಗೆ ಒಬ್ಬನೇ ಆಧಾರಸ್ತಂಭ. ಮದುವೆಯಾಗಿ 1 ವರ್ಷವಾಗಿದ್ದು, ಹೆಂಡತಿ ಈಗ ಗರ್ಭಿಣಿ. ಶುಕ್ರವಾರ ಆತನ ವೀಕ್‌ ಆಫ್ ಇದ್ದ ಕಾರಣ ಕೆಲಸಕ್ಕೆ ಹೋಗಿರಲಿಲ್ಲ. ಶನಿವಾರ ಮನೆಯಿಂದ ಹೊರಟವ ಕೆಲಸಕ್ಕೆ ಹೋಗಿರಲಿಲ್ಲ. ಮನೆಯವರು ಕೆಲಸಕ್ಕೆ ಹೋಗಿದ್ದಾನೆ ಎಂದೇ ಅಂದುಕೊಂಡಿದ್ದರು.

Latest Videos

undefined

ವಿಕೃತವಾಗಿ ರೇಣುಕಾಸ್ವಾಮಿ ಕೊಲೆ, ಬರೋಬ್ಬರಿ 15 ಕಡೆ ಗಾಯದ ಬಗ್ಗೆ ಮರಣೋತ್ತರ ಪರೀಕ್ಷೆಯಿಂದ ಬಹಿರಂಗ!

ಆದರೆ ಶನಿವಾರ ಚಿತ್ರದುರ್ಗ ಡಿ ಬಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ದರ್ಶನ್  ಕರೆ ಮಾಡಿ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತರಲು ಹೇಳಿದ್ದರಿಂದ ಬಾಸ್ ಕರೆಯುತ್ತಿದ್ದಾರೆ ಎಂದು  ಶನಿವಾರ ಬೆಂಗಳೂರಿಗೆ ರೇಣುಕಾ ಸ್ವಾಮಿಯನ್ನು ಕರೆತಂದಿದ್ದಾನೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬರಲು ಗರಿಷ್ಠ 4 ಗಂಟೆ ಅಷ್ಟೆ. ಕನಿಷ್ಠ 2.30 ಗಂಟೆ.

ಕಿಡ್ನಾಪ್‌ ಮಾಡಿ   ರೇಣುಕಾ ಸ್ವಾಮಿಯನ್ನು ಸಂಜೆ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಸಮೀಪದಲ್ಲಿರುವ  ಶೆಡ್‌ನಲ್ಲಿ ಇರಿಸಲಾಗಿತ್ತು.  ಈ ಶೆಡ್‌ ದರ್ಶನ್ ಆಪ್ತ ವಿನಯ್ ಗೆ ಸೇರಿದ್ದಾಗಿದೆ.  ರೇಣುಕಾಸ್ವಾಮಿಯನ್ನು ಕರೆತಂದ ಬಗ್ಗೆ  ದರ್ಶನ್‌ ಗೆ ಕರೆ ಮಾಡಿ ತಿಳಿಸಲಾಗಿತ್ತು.  ಹೀಗಾಗಿ ಶನಿವಾರ ಜೂ.8ರ ಸಂಜೆ 7 ಗಂಟೆಗೆ ದರ್ಶನ್ ಶೆಡ್‌ಗೆ ವಿಸಿಟ್ ಮಾಡಿದ್ದ.

ಅದಾಗಿ ರಾತ್ರಿ 8.30ಕ್ಕೆ ಬಂದ ದರ್ಶನ್ ಮತ್ತೆ ಮರಳಿ ಹೋಗಿದ್ದು, ರಾತ್ರಿ 9.30 ಗಂಟೆಗೆ. ಈ ಒಂದು ಗಂಟೆಯ ಅವಧಿಯಲ್ಲಿ ಮೃತ ರೇಣುಕಾ ಸ್ವಾಮಿಗೆ ಎಲ್ಲರೂ ಸೇರಿ ಹಿಂಸಿಸಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ವಿನಯ್ ಜೊತೆ ದರ್ಶನ್, ಪವಿತ್ರಾ ಗೌಡ ಕೂಡ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ದರ್ಶನ್ ಮರಳಿ ಹೋದ ಬಳಿಕ ಶೆಡ್‌ನಲ್ಲಿದ್ದ ಇತರರು ಮತ್ತೆ ಹೊಡೆದಿದ್ದಾರೆ.  ಸುಮಾರು ಬೆಳಗ್ಗಿನ ಜಾವ 5.30ರ ಸಮಯದಲ್ಲಿ ಅಂದ್ರೆ ಜೂನ್‌ 9 ರಂದು  ದರ್ಶನ್ ಗೆ ಕರೆ ಮಾಡಿದ್ದ ಗ್ಯಾಂಗ್‌ ರೇಣುಕಾ ಸ್ವಾಮಿ ಮೃತಪಟ್ಟಿರುವ ಬಗ್ಗೆ ತಿಳಿಸುತ್ತೆ. ಈ ವೇಳೆ ಎಲ್ಲಾದ್ರೂ ಬಾಡಿ ಬಿಸಾಕಿ ಈ ವಿಚಾರ ಮುಚ್ಚಿ ಹಾಕಿ ಎಂದು ದರ್ಶನ್ ಹೇಳಿದ್ದು, ಬೆಳಗ್ಗೆ ಆಗಿದ್ದರಿಂದ ಆತುರದಲ್ಲಿ ಸುಮನಹಳ್ಳಿ ಜಂಕ್ಷನ್ ನ ಮೋರಿ ಬಳಿಯೇ ದರ್ಶನ್ ಗ್ಯಾಂಗ್ ಮೃತದೇಹವನ್ನು ಬಿಸಾಕಿ ಹೋಗಿದೆ. 

ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್‌ ಹಾಕಿ ಡಿಲೀಟ್‌ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!

ಜೂನ್‌ 8 ರಂದು ರೇಣುಕಾ ಸ್ವಾಮಿ ಕಿಡ್ನಾಪ್‌, ಜೂನ್‌ 9 ರಂದು ಪೊಲೀಸರಿಗೆ ಮೋರಿ ಬಳಿ ಮೃತದೇಹ ಸಿಕ್ಕಿತ್ತು. ಜೂನ್‌ 10 ರಂದು ಮಧ್ಯಾಹ್ನ‌ ಕಾಮಾಕ್ಷಿಪಾಳ್ಯ ಠಾಣೆಗೆ ಓಡಿ ಬಂದಿದ್ದ ಆರೋಪಿಗಳಾದ ನಂದೀಶ್, ಪವನ್, ನವೀನ್ ಹಣಕಾಸಿನ ವಿಷ್ಯಕ್ಕೆ ನಾವೇ ಕೊಲೆ ಮಾಡಿದ್ದು ಅಂತಾ ಒಪ್ಪಿಕೊಂಡಿದ್ದರು. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಆರೋಪಿಗಳು ರಾತ್ರಿಯಿಡೀ ದರ್ಶನ್ ಗೆ ಕರೆ ಮಾಡಿ ಮಾತಾಡಿದ್ದ ಬಗ್ಗೆ ಬೆಳಕಿಗೆ ಬಂದಿತ್ತು.

ಈ ವೇಳೆ ಡೌಟ್ ಮೇಲೆ ಹೆಚ್ಚಾಗಿ ಮಧ್ಯರಾತ್ರಿ 2.30ರವರೆಗೂ ಆರೋಪಿಗಳಿಗೆ ಸರಿಯಾಗಿ ಪೊಲೀಸರು ಕ್ಲಾಸ್ ತೆಗೆದುಕೊಂಡಾಗ, ಒಂದೊಂದೇ ವಿಚಾರ ಬೆಳಕಿಗೆ ಬಂದಿದೆ. ಲಾಠಿ ಏಟು ಬೀಳ್ತಿದ್ದಂತೆಯೇ ನಂದೀಶ್ ಬಾಯಿ ಬಿಟ್ಟಿದ್ದು, ಅಣ್ಣಾ ಮತ್ತು ಅಕ್ಕ ಇಬ್ಬರೂ ಇದ್ರೂ ಸಾರ್ ಅಂತಾ ಹೇಳಿದ್ದ, ಆ ಅಣ್ಣ- ಅಕ್ಕಾ ಯಾರು ಅಂತ ಹುಡುಕುತ್ತಾ ಹೋದ ಪೊಲೀಸರಿಗೆ ಸಿಕ್ಕಿದ್ದೇ  ದರ್ಶನ್ ಮತ್ತು ಅವರ ಎರಡನೇ ಪತ್ನಿ ಪವಿತ್ರಾ ಗೌಡ ಹೆಸರು. 

ಇನ್ನು ಇಷ್ಟೆಲ್ಲ ಆದ ಮೇಲೆ ದರ್ಶನ್ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಅದೇ ಯೋಚನೆಯಲ್ಲಿ ಆರ್ ಆರ್ ನಗರದ ಸ್ಟೋನಿ ಬ್ರೂಕ್ ನಲ್ಲೇ ನಟ ದರ್ಶನ್ ಗ್ಯಾಂಗ್ ಪಾರ್ಟಿ ಮಾಡ್ತಿತ್ತು ಎಂದು ತಿಳಿದುಬಂದಿದೆ. ಬೆಳಗ್ಗೆ 3.30ರ ತನಕ ಪಾರ್ಟಿ ನಡೆದಿತ್ತು ಎಂದು ತಿಳಿದುಬಂದಿದೆ. ಇನ್ನು ಕೊಲೆ ಕೇಸ್‌ ಅನ್ನು ಸುಲಭದಲ್ಲಿ ಮುಚ್ಚಿ ಹಾಕಲು ದರ್ಶನ್ ಮತ್ತು ಗ್ಯಾಂಗ್ ಮೂವರನ್ನು ಶರಣಾಗಲು ಕಳುಹಿಸಿ ದುಡ್ಡಿನ ವ್ಯವಹಾರಕ್ಕೆ ಕೊಲೆ ನಡೆದಿತ್ತು ಎಂದು ಹೇಳಲು ತಿಳಿಸಿತ್ತು. ಆದ್ರೆ ಈಗ ಅದು ಉಲ್ಟಾ ಹೊಡೆದು ದರ್ಶನ್ ಸೇರಿ 13 ಜನ ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ. 

ದರ್ಶನ್‌ ಮತ್ತು ಪವಿತ್ರಗೌಡ ಸೇರಿ 13 ಮಂದಿಯ ಬಂಧನವಾಗಿದೆ. ದರ್ಶನ್ ಸ್ನೇಹಿತ ವಿ.ವಿನಯ್, ದರ್ಶನ್ ಮ್ಯಾನೇಜರ್ ಆರ್ ನಾಗರಾಜು, ಎಂ.ಲಕ್ಷ್ಮಣ್, ಎಸ್ ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವ ಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನವರು ದರ್ಶನ್ ಬಾಡಿಗಾರ್ಡ್ಸ್ ಆಗಿದ್ದಾರೆ.

ಇನ್ನು ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲ್ಲಲಾಗಿದೆ. ದೇಹದ 15 ಕಡೆಗೆ ಬಲವಾದ ಗಾಯವಾಗಿದೆ ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. 

click me!