
ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 10ಕ್ಕೂ ಹೆಚ್ಚು ಮಂದಿ ಅರೆಸ್ಟ್ ಆದ ಬೆನ್ನಲ್ಲೇ ಕೊಲೆಯ ಬಗ್ಗೆ ಒಂದೊಂದೇ ವಿಚಾರ ಹೊರಗಡೆ ಬರುತ್ತಿದೆ.
ಇನ್ನು ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲ್ಲಲಾಗಿದೆ ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ರೇಣುಕಾ ಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಗಾಯವಾಗಿದೆ. ದೇಹದ 15 ಭಾಗಗಳಲ್ಲಿ ಹಲ್ಲೆಯಾಗಿರೋದು ಪತ್ತೆಯಾಗಿದೆ ಎಂದು ಫಾರೆನ್ಸಿಕ್ ವೈದ್ಯರು ಮಾಹಿತಿ ನೀಡಿದ್ದಾರೆ.
ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್ ಹಾಕಿ ಡಿಲೀಟ್ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!
ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯಾಗಳಾಗಿವೆ. ರಾಡು ಮತ್ತು ಕಟ್ಟಿಗೆಯಿಂದ, ಮರದ ಸಲಾಕೆಯಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ದರ್ಶನ್ ಸಹಿತ 10ಕ್ಕೂ ಹೆಚ್ಚು ಆರೋಪಿಗಳ ಮೆಡಿಕಲ್ ಟೆಸ್ಟ್ ಕೂಡ ಮಾಡಲಾಗಿದೆ.
ಜಿಮ್ ಮಾಡ್ತಿದ್ದ ನಟನಿಗೆ ಜೀಪು ಹತ್ತು ಎಂದ ಪೊಲೀಸ್, ಕಾರಲ್ಲಿ ಬರುವೆ ಎಂದಿದ್ಯಾಕೆ ದರ್ಶನ್?
ಇನ್ನು ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗಕ್ಕೆ ಮೃತದೇಹ ಕೊಂಡೊಯ್ಯಲು ಕುಟುಂಬ ನಿರ್ಧಾರ ಮಾಡಿದ್ದು, ಇಂದೇ ಶವ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ