28ರ ಹರೆಯದ ದುಶ್ಯಂತ್ ಶರ್ಮಾ ಟಿಂಡರ್‌ನಲ್ಲಿ ಪ್ರಿಯಾ ಸೇಠ್ ಎಂಬುವರೊಂದಿಗೆ ಟಿಂಡರ್‌ನಲ್ಲಿ ಡೇಟಿಂಗ್ ಮಾಡುತ್ತಿದ್ದ. ಆಕೆ ಅತನನ್ನು ಮೀಟ್ ಮಾಡುವ ನೆಪ ಹೇಳಿ ಕೊಲೆ ಮಾಡಿದ್ದಾಳೆ. ಈಗ ಆಕೆಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.
ಹೊಸದಿಲ್ಲಿ (ನವೆಂಬರ್ 25, 2023): ಆನ್‌ಲೈನ್ ಡೇಟಿಂಗ್‌ಗೆ ಈಗಲೂ ಸಹ ಜನ ಮುಗಿಬೀಳುತ್ತಾರೆ. ಅದ್ರಲ್ಲೂ, ಟಿಂಡರ್ ಸಿಕ್ಕಾಪಟ್ಟೆ ಫೇಮಸ್. ಆದ್ರೆ, ಇದರಿಂದ ಅನೇಕ ದುರ್ಬಳಕೆ ನಡೆಯುತ್ತೆ ಅನ್ನೋದನ್ನು ಮರೆಯಬಾರದು. ಯುವಕನೊಬ್ಬ ಇದೇ ರೀತಿ ಡೇಟಿಂಗ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
28ರ ಹರೆಯದ ದುಶ್ಯಂತ್ ಶರ್ಮಾ ಟಿಂಡರ್‌ನಲ್ಲಿ ಪ್ರಿಯಾ ಸೇಠ್ ಎಂಬುವರೊಂದಿಗೆ ಟಿಂಡರ್‌ನಲ್ಲಿ ಮ್ಯಾಚ್ ಅದ ಬಳಿಕ ತುಂಬಾ ಖುಷಿಯಲ್ಲಿದ್ದ. 3 ತಿಂಗಳ ಕಾಲ ಆ್ಯಪ್‌ನಲ್ಲಿ ಮಾತನಾಡಿದ ನಂತರ, ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದರು. 27 ವರ್ಷ ವಯಸ್ಸಿನ ಯುವತಿ ಆತನನ್ನು ಮನೆಯೊಂದಕ್ಕೆ ಕರೆದಳು, ಈ ಪ್ರಸ್ತಾಪವನ್ನು ದುಶ್ಯಂತ್ ತಕ್ಷಣವೇ ಒಪ್ಪಿಕೊಂಡನು.
ಇದನ್ನು ಓದಿ: ದುಬೈಗೆ ಕರ್ಕೊಂಡು ಹೋಗ್ಲಿಲ್ಲ ಅಂತ ಗಂಡನ ಮೂಗಿಗೆ ಗುದ್ದಿದ ಹೆಂಡ್ತಿ: ಉದ್ಯಮಿ ಪ್ರಾಣ ಪಕ್ಷಿಯೇ ಹಾರಿ ಹೋಯ್ತು!
ಆದರೆ ಫೆಬ್ರವರಿ 2018 ರಲ್ಲಿ ಪ್ರಾರಂಭವಾದ ಸಂಬಂಧವು ಎರಡು ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿತು ಮತ್ತು ಪ್ರಾರಂಭದಿಂದಲೂ ಅವನತಿ ಹೊಂದಿತ್ತು. ವಿವಾಹಿತರಾದ ದುಶ್ಯಂತ್ ತಾನು ದೆಹಲಿಯ ಶ್ರೀಮಂತ ಉದ್ಯಮಿ ವಿವಾನ್ ಕೊಹ್ಲಿ ಎಂದು ಹೇಳಿದ್ದ. ಮತ್ತೊಂದೆಡೆ ಪ್ರಿಯಾ, ಆತನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಮಾತುಕತೆ ನಡೆಸಿದ್ದಳು.
ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಸಹಾಯದಿಂದ ದುಶ್ಯಂತ್ ಮನೆಗೆ ಕಾಲಿಟ್ಟ ತಕ್ಷಣ ಪ್ರಿಯಾ ಅವರನ್ನು ಅಪಹರಿಸಿದ್ದಾರೆ. ಹಣಕ್ಕೆ ಕರೆ ಮಾಡಿದ ನಂತರ 'ದೆಹಲಿ ಉದ್ಯಮಿ' ತಾನು ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂದು ಅವರು ಅರಿತುಕೊಂಡರು. ದುಶ್ಯಂತ್ ಕುಟುಂಬವು 10 ಲಕ್ಷ ರೂ. ಪಾವತಿಸಲು ವಿಫಲವಾದ ನಂತರ, ಆರೋಪಿ ಅನೇಕ ಬಾರಿ ಚೂರಿಯಿಂದ ಇರಿದು ಮತ್ತು ತಲೆದಿಂಬಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!
ದುಶ್ಯಂತ್ ಅಕೌಂಟ್‌ಗೆ 10 ಲಕ್ಷ ಹಾಕುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ, ತಂದೆ 3 ಲಕ್ಷ ರೂ. ಹಾಕಿದ್ದಾರೆ. ಈ ಪೈಕಿ 20,000 ರೂ. ಡ್ರಾ ಮಾಡಲು ಕಾರ್ಡ್ ಬಳಸಿದ್ದರು. ತಮ್ಮ ಅಪರಾಧ ಬೆಳಕಿಗೆ ಬರಬಹುದೆಂಬ ಭಯದಿಂದ ಮೂವರು ಆರೋಪಿಗಳು ದುಷ್ಯಂತ್‌ನನ್ನು ಕೊಂದಿದ್ದಾರೆ. ಬಳಿಕ ಆತನ ಮೃತದೇಹ ಮೇ 4, 2018 ರಂದು ಜೈಪುರದ ಹೊರಗಿನ ಹಳ್ಳಿಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ.
ಅಪರಾಧಿ ಎಂದು ಸಾಬೀತಾದ ನಂತರ ಪ್ರಿಯಾ ಸೇಠ್ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ನಾನು ದೀಕ್ಷಾಂತ್ ಜೊತೆ ಲಿವ್-ಇನ್ ಸಂಬಂಧ ಹೊಂದಿದ್ದೇನೆ ಮತ್ತು ಅವನಿಗೆ 21 ಲಕ್ಷ ರೂ. ಸಾಲವಿದೆ. ಆ ಹಣವನ್ನು ಯಾರಿಂದಾದರೂ ಪಡೆಯಲು ಹುಡುಕುತ್ತಿದ್ದೆವು. ಆದ್ದರಿಂದ ನಾವು ಯಾರನ್ನಾದರೂ ಅಪಹರಿಸಿ, ಹಣ ಪಡೆದು ಮತ್ತು ಆತನನ್ನು ಕೊಲ್ಲಲು ಒಟ್ಟಾಗಿ ಈ ಪ್ಲ್ಯಾನ್ ಮಾಡಿದ್ದೆವು ಎಂದಿದ್ದಾಳೆ.
ಇದನ್ನು ಓದಿ: ಕಾಮುಕ ಪ್ರಿನ್ಸಿಪಾಲ್ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!
ದುಶ್ಯಂತ್ ಶರ್ಮಾ ಹತ್ಯೆಯ ಮೂವರು ಆರೋಪಿಗಳಿಗೆ ಜೈಪುರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಷನ್ ಸತ್ಯಗಳನ್ನು ದೃಢೀಕರಿಸಲು ಸಾಕಷ್ಟು ಪುರಾವೆಗಳನ್ನು ಪ್ರಸ್ತುತಪಡಿಸಿದೆ ಎಂದು ತಮ್ಮ ಆದೇಶದಲ್ಲಿ, ಸೆಷನ್ಸ್ ನ್ಯಾಯಾಧೀಶ ಹೇಳಿದ್ದಾರೆ.
ಇದನ್ನು ಓದಿ: ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್ ದಾಖಲು