ಕುಡಿದ ನಶೆಯಲ್ಲಿ ಕುಡುಕರಿಬ್ಬರ ಗಲಾಟೆ; ಕೊಲೆಯಲ್ಲಿ ಅಂತ್ಯ!

By Ravi Janekal  |  First Published Nov 25, 2023, 4:46 PM IST

ಕುಡಿದ ನಶೆಯಲ್ಲಿ ಯುವಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಯ್ಯನದೊಡ್ಡಿ ಗ್ರಾಮದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.


ಮಂಡ್ಯ (ನ.25): ಕುಡಿದ ನಶೆಯಲ್ಲಿ ಯುವಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಯ್ಯನದೊಡ್ಡಿ ಗ್ರಾಮದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಚಂದನ್ (23) ಮೃತ‌ ದುರ್ದೈವಿ. ನಾಗರಾಜ್ (26) ಕೊಲೆ ಮಾಡಿರುವ ಆರೋಪಿ

Tap to resize

Latest Videos

ಬಾರ್ ನಲ್ಲಿ ಯುವಕರ ಪರಸ್ಪರ ಹೊಡೆದಾಟದ ಸಿಸಿ ಟಿವಿಯಲ್ಲಿ ದೃಶ್ಯ ಸೆರೆ. ಕೊಲೆಯಾದ ಚಂದನ್ ಗೊಲ್ಲರಹಳ್ಳಿಯವನಾಗಿದ್ದು, ಆರೋಪಿ ನಾಗರಾಜ್ ಬೆಳ್ತೂರು ಗ್ರಾಮದವನಾಗಿದ್ದಾನೆ. ಕುಡಿಯಲು ರೇಣುಕಾ ಬಾರ್‌ ಗೆ ಬಂದಿದ್ದ ಇಬ್ಬರು. ಈ ವೇಳೆ ಕುಡಿದ ನೆಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಬಾರ್‌ನೊಳಗೆ ಜಗಳ ಮಾಡುವಾಗ ತಡೆದಿರುವ ಜನರು. ಬಳಿಕ ಇಬ್ಬರು ಹೊರಗಡೆ ಬಂದಿದ್ದಾರೆ. ಈ ವೇಳೆ ಆರೋಪಿ ನಾಗರಾಜ್ ಚಂದನ್‌ಗೆ ದೊಣ್ಣೆಯಿಂದ ಹೊಡೆದು ತಲೆಮೇಲೆ ಕಲ್ಲು ಎತ್ತಿಹಾಕಿ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. 

ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!

ಹತ್ಯೆ ಮಾಡಿದ ನಂತರ ಮೃತದೇಹವನ್ನ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ ಆರೋಪಿ ನಾಗರಾಜ್. ಆರೋಪಿ ನಾಗರಾಜ್ ನನ್ನ ಬಂಧಿಸಿ ಜೈಲಿಗೆ ಹಾಕಿದ ಪೊಲೀಸರು. ಕೊಲೆ ಪ್ರಕರಣ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!