ಅಫೇರ್‌ ಮುಚ್ಚಿಡಲು ಪತ್ನಿ ಕೊಲೆ ಮಾಡಿ ಆಕಸ್ಮಿಕ ಸಾವೆಂದು ಬಿಂಬಿಸಿದ ಐಷಾರಾಮಿ ಹೋಟೆಲ್‌ ಮ್ಯಾನೇಜರ್!

Published : Jan 21, 2024, 11:57 AM IST
ಅಫೇರ್‌ ಮುಚ್ಚಿಡಲು ಪತ್ನಿ ಕೊಲೆ ಮಾಡಿ ಆಕಸ್ಮಿಕ ಸಾವೆಂದು ಬಿಂಬಿಸಿದ ಐಷಾರಾಮಿ ಹೋಟೆಲ್‌ ಮ್ಯಾನೇಜರ್!

ಸಾರಾಂಶ

ತನ್ನ ವಿವಾಹೇತರ ಸಂಬಂಧದ ಬಗ್ಗೆ ಆಕೆ ತಿಳಿದಿದ್ದರಿಂದ ಕಟಿಯಾರ್ ತನ್ನ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗೋವಾ / ದೆಹಲಿ (ಜನವರಿ 21, 2024): ಹೋಟೆಲ್ ಮ್ಯಾನೇಜರ್ ತನ್ನ ಲವ್‌ ಅಫೇರ್‌ ಅನ್ನು ಮರೆಮಾಚಲು ಹೆಂಡತಿಯನ್ನು ಕೊಲೆ ಮಾಡಿ, ಅದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿರುವ ಘಟನೆ ಗೋವಾದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಗೋವಾದ ಐಷಾರಾಮಿ ಹೊಟೇಲ್‌ನ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

29 ವರ್ಷದ ಗೌರವ್ ಕಟಿಯಾರ್ ಕೊಲೆಯನ್ನು ಆಕಸ್ಮಿಕ ಸಾವು ಎಂದು ಮುಚ್ಚಿಡಲು ಪ್ರಯತ್ನಿಸಿದ್ದು, ತಾನಿಲ್ಲದಿದ್ದಾಗ ತನ್ನ ಹೆಂಡತಿ ಸಮುದ್ರದಲ್ಲಿ ಮುಳುಗಿದ್ದಾಳೆ ಎಂದು ಹೇಳಿದ್ದಾನೆ. ಗೌರವ್ ಕಟಿಯಾರ್ ದಕ್ಷಿಣ ಗೋವಾದ ಕೊಲ್ವಾದಲ್ಲಿ ಮ್ಯಾರಿಯಟ್ ಇಂಟರ್ನ್ಯಾಷನಲ್ ನಿರ್ವಹಿಸುತ್ತಿರುವ ಐಷಾರಾಮಿ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗೋವಾದಲ್ಲಿ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗ್ತಿದ್ದ ತಾಯಿ: ಸುಚನಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದೀಗೆ ನೋಡಿ..

ಲಖನೌ ಮೂಲದ ಗೌರವ್ ಕಟಿಯಾರ್ ಸುಮಾರು 1 ವರ್ಷದ ಹಿಂದೆ ದೀಕ್ಷಾ ಗಂಗ್ವಾರ್ ರನ್ನು ವಿವಾಹವಾಗಿದ್ದು, ಅವರಿಬ್ಬರ ನಡುವಿನ ಸಂಬಂಧವು ಹದಗೆಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ, ತನ್ನ ವಿವಾಹೇತರ ಸಂಬಂಧದ ಬಗ್ಗೆ ಆಕೆ ತಿಳಿದಿದ್ದರಿಂದ ಕಟಿಯಾರ್ ತನ್ನ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗೌರವ್ ತನ್ನ ಪತ್ನಿಯನ್ನು ದಕ್ಷಿಣ ಗೋವಾದ ಕಡಲತೀರಕ್ಕೆ ವಿಹಾರಕ್ಕೆ ಕರೆದೊಯ್ದನು, ಅಲ್ಲಿ ಅವನು ಅವಳನ್ನು ಮುಳುಗಿಸಿದನು. ಈ ಘಟನೆ ಶುಕ್ರವಾರ ಮಧ್ಯಾಹ್ನ 3.45 ರ ಸುಮಾರಿಗೆ ಕಾಬೋ ಡಿ ರಾಮಾ ಬೀಚ್‌ನಲ್ಲಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ ಏಕಾಂಗಿಯಾಗಿ ಬೀಚ್‌ನಿಂದ ವಾಪಸ್‌ ಬರುತ್ತಿರುವುದನ್ನು ಕಂಡ ಕೆಲ ಪ್ರವಾಸಿಗರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!

ಗೌರವ್ ಮತ್ತು ದೀಕ್ಷಾ ನೀರಿಗೆ ಹೋಗುತ್ತಿರುವುದನ್ನು ತಾವು ನೋಡಿದ್ದೇವೆ. ಆದರೆ, ವ್ಯಕ್ತಿ ಹಿಂತಿರುಗಿದಾಗ ಮಹಿಳೆ ಎಲ್ಲಿಯೂ ಕಾಣಿಸಲಿಲ್ಲ ಎಂದು ಕೆಲ ಪ್ರವಾಸಿಗರು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದ, ಅದನ್ನು ಅಪಘಾತ ಎಂದು ಕಟಿಯಾರ್‌ ಬಿಂಬಿಸಲು ಹೋದ. ಆದರೆ, ಪ್ರವಾಸಿಗರೊಬ್ಬರು ಚಿತ್ರೀಕರಿಸಿದ ವಿಡಿಯೋವೊಂದರ ಮೂಲಕ ಆತನ ಆರೋಪ ಸುಳ್ಳು ಎಂಬುದು ಪ್ರೂವ್‌ ಆಗಿದೆ.

ವಿಡಿಯೋದಲ್ಲಿ ಆತ ಏಕಾಂಗಿಯಾಗಿ ಬೀಚ್‌ನಿಂದ ನಡೆದುಕೊಂಡು ಬಂದಿದ್ದು, ನಂತರ ತನ್ನ ಪತ್ನಿ ಸತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಸಮುದ್ರಕ್ಕೆ ಹಿಂತಿರುಗುತ್ತಿರುವುದನ್ನು ತೋರಿಸಿದೆ. ಹಾಗೂ, ಮಹಿಳೆಯ ಮೃತ ದೇಹವು ಗಾಯದ ಗುರುತುಗಳನ್ನು ಹೊಂದಿದ್ದು, ಹೋರಾಟದ ಚಿಹ್ನೆಗಳನ್ನು ಸೂಚಿಸುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ