ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ರಕ್ತ ಮಾರ್ತಿದ್ದ ತಂದೆ: ದುಡ್ಡು ಹೊಂದಿಸಲಾಗದೆ ಆತ್ಮಹತ್ಯೆ ಮಾಡ್ಕೊಂಡ್ರು!

By BK Ashwin  |  First Published Apr 20, 2023, 3:55 PM IST

ರಸ್ತೆ ಅಪಘಾತದಲ್ಲಿ ಮಗಳು ಅನುಷ್ಕಾ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಆಕೆ ಹಾಸಿಗೆ ಹಿಡಿದಿದ್ದಾಳೆ. ಈ ಹಿನ್ನೆಲೆ ಆಕೆಯ ಚಿಕಿತ್ಸೆಗೆ ಮತ್ತು ಕುಟುಂಬ ನಿರ್ವಹಣೆ ಮಾಡಲು ಅಪ್ಪ ಪ್ರಮೋದ್‌ ಅವರ ಹೆಸರಲ್ಲಿದ್ದ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ ಎಂದು ಅನುಷ್ಕಾ ಗುಪ್ತಾ ಅಳುತ್ತಾ ಹೇಳಿಕೊಂಡಿದ್ದಾಳೆ.


ಭೋಪಾಲ್ (ಏಪ್ರಿಲ್ 20, 2023): ಮಧ್ಯಪ್ರದೇಶದ ಸತ್ನಾದಲ್ಲಿ ವ್ಯಕ್ತಿಯೊಬ್ಬರು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗೆ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ನಡೆದಾಡಲು ಸಾಧ್ಯವಾಗದ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಅವರು ಅತೃಪ್ತರಾಗಿದ್ದರು ಎಂದು ಕುಟುಂಬ ತಿಳಿಸಿದೆ. ಈ ಹಿನ್ನೆಲೆ ಖಿನ್ನತೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ರಸ್ತೆ ಅಪಘಾತದಲ್ಲಿ ಮಗಳು ಅನುಷ್ಕಾ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಆಕೆ ಹಾಸಿಗೆ ಹಿಡಿದಿದ್ದಾಳೆ. ಈ ಹಿನ್ನೆಲೆ ಆಕೆಯ ಚಿಕಿತ್ಸೆಗೆ ಮತ್ತು ಕುಟುಂಬ ನಿರ್ವಹಣೆ ಮಾಡಲು ಅಪ್ಪ ಪ್ರಮೋದ್‌ ಅವರ ಹೆಸರಲ್ಲಿದ್ದ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ ಎಂದು ಅನುಷ್ಕಾ ಗುಪ್ತಾ ಅಳುತ್ತಾ ಹೇಳಿಕೊಂಡಿದ್ದಾಳೆ.

Tap to resize

Latest Videos

ಇದನ್ನು ಓದಿ: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕಿ

ಗ್ಯಾಸ್ ಸಿಲಿಂಡರ್ ಮತ್ತು ಊಟಕ್ಕಾಗಿ ಪ್ರಮೋದ್ ಕೆಲವೊಮ್ಮೆ ರಕ್ತದಾನ ಮಾಡಿದರು ಎಂದು ಕುಟುಂಬದವರು ಹೇಳುತ್ತಾರೆ. ತನ್ನ ತಂದೆ ರಕ್ತ ಮಾರಿದ ನಂತರ ಅನಾರೋಗ್ಯಕ್ಕೆ ಒಳಗಾದರು ಮತ್ತು ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ ಎಂದೂ ಮಗಳು ಹೇಳುತ್ತಾರೆ.

ಇನ್ನು, ಆಕೆ ಹಾಸಿಗೆಯಲ್ಲಿ ಮಲಗಿದ್ದರೂ, 17 ವರ್ಷ ವಯಸ್ಸಿನ ಅನುಷ್ಕಾ ಉತ್ತಮವಾಗೇ ಓದುತ್ತಿದ್ದಾಳೆ. ರೈಟರ್‌ ಸಹಾಯದಿಂದ ಬೋರ್ಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಆಕೆಯನ್ನು ಗೌರವಿಸಲಾಗಿದೆಯಂತೆ. ಆದರೆ, ಅಧಿಕಾರಿಗಳು ಅಥವಾ ಕುಟುಂಬದವರು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ ಎಂದು ಅನುಷ್ಕಾ ಬೇಸರ ವ್ಯಕ್ತಪಡಿಸಿಕೊಂಡಿದ್ದಾಳೆ."ಸಂಬಂಧಿತ ಯೋಜನೆಗಳ ಅಡಿಯಲ್ಲಿ ಅಧಿಕಾರಿಗಳು ನಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ನನ್ನ ತಂದೆ ಹಲವಾರು ಬಾರಿ ಕಚೇರಿಗಳಿಗೆ ತೆರಳಿದರೂ ಕಳೆದ 1 ವರ್ಷದಲ್ಲಿ ಏನೂ ಆಗಲಿಲ್ಲ" ಎಂದು ಆಕೆ ಹೇಳಿದ್ದಾಳೆ. 

ಇದನ್ನೂ ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
 
"ನಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನನ್ನ ತಂದೆ ತನ್ನ ರಕ್ತವನ್ನು ಸಹ ಮಾರಾಟ ಮಾಡಿದರು. ಅವರು ಚಿಕಿತ್ಸೆಗೆ ಹಣ ಪಾವತಿಸಲು ಸಾಧ್ಯವಾಗದ ಕಾರಣ ಖಿನ್ನತೆಗೆ ಒಳಗಾಗಿದ್ದರು ಮತ್ತು ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡರು," ಎಂದು ಮಗಳು ಹೇಳಿದ್ದಾಳೆ. 

ಬೆಳಗಿನ ಜಾವ 4 ಗಂಟೆಗೆ ಮನೆಯಿಂದ ಅಂಗಡಿಗೆ ತೆರಳಿದ ಪ್ರಮೋದ್ ಗುಪ್ತಾ ನಾಪತ್ತೆಯಾಗಿದ್ದರು. ಒಂದೆರಡು ಗಂಟೆಗಳ ಕಾಲ ಆತನನ್ನು ಹುಡುಕಲು ಸಾಧ್ಯವಾಗದಿದ್ದಾಗ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ದಾಖಲಿಸಿದ್ದರು. ಮಂಗಳವಾರ ಸತ್ನಾದ ರೈಲ್ವೆ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇನ್ನು, ಈ ಸಂಬಂಧ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ ಎಂದು ಸತ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಮಿಶ್ರಾ ಹೇಳುತ್ತಾರೆ.

ಇದನ್ನೂ ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ

click me!