ಮನೆಯಲ್ಲಿ ಮಕ್ಕಳು ಸರ್ಕಾರಿ ಹುದ್ದೆ ಸೇರದ್ದಕ್ಕೆ ಮನನೊಂದ ತಂದೆ; ಸಾಯೋದಾಗಿ ವಾಟ್ಸಪ್ ಸ್ಟೇಟಸ್ ಇಟ್ಟು ಆತ್ಮಹತ್ಯೆ!

By Kannadaprabha News  |  First Published Apr 20, 2023, 1:20 PM IST

ಮನೆಯಲ್ಲಿ ತನ್ನ ಇಬ್ಬರು ಮಕ್ಕಳು, ತನ್ನಸಹೋದರರ ಮಕ್ಕಳು ಯಾರೂ ಕೂಡ ಸರ್ಕಾರಿ ಹುದ್ದೆ ಸೇರಲಿಲ್ಲವೆಂದು ಮನನೊಂದು ಸಾಯುವುದಾಗಿ ವಾಟ್ಸಪ್ ಸ್ಟೇಟಸ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.


ಕಮಲಾಪುರ (ಏ.20) : ತಾಲೂಕಿನ ಕುರಿಕೋಟಾ ಬ್ರಿಡ್ಜ್ ಮೇಲಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚನ್ನಬಸಪ್ಪ ಮೇಲಕೇರಿ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಮೊಬೈಲ್‌ ಸ್ಟೇಟಸ್‌ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋ ವಿಚಾರ ಅಪ್‌ಲೋಡ್‌ ಮಾಡಿ ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಇತನು ಮೂಲತಃ ನಾಗೂರು ಗ್ರಾಮದವರು, ಕಲ್ಬುರ್ಗಿ ವಿವೇಕಾನಂದ ನಗರದಲ್ಲಿ ವಾಸವಿದ್ದು ಎಲ್ಲೈಸಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.

ಮನೆಯಲ್ಲಿ ತನ್ನ ಇಬ್ಬರು ಮಕ್ಕಳು, ತನ್ನಸಹೋದರರ ಮಕ್ಕಳು ಯಾರೂ ಕೂಡ ಸರ್ಕಾರಿ ಹುದ್ದೆ ಸೇರಲಿಲ್ಲವೆಂದು ಮನನೊಂದು. ಮಂಗಳವಾರ ಸಂಜೆ 7ಕ್ಕೆ ಕಲಬುರ್ಗಿಯ ವಿವೇಕಾನಂದ ನಗರ(Kalaburagi vivekananda nagar)ದ ಮನೆಯಿಂದ ತೆರಳಿದ ರಾತ್ರಿ 11 ಗಂಟೆ ಆದರೂ ಮನೆಗೆ ಬರಲಿಲ್ಲವೆಂದು ಪತ್ನಿ ಫೋನ್‌ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿರುವುದನ್ನು ತಿಳಿದು ಚನ್ನಬಸಪ್ಪ(Channabasappa melakeri) ಅವರ ಫೋನ್‌ ಸ್ಟೇಟಸ್‌ (whats app status)ನೋಡಿದಾಗ ಸ್ಟೇಟಸ್‌ನಲ್ಲಿ ನಾನು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತಿದ್ದೇನೆ ಎಂದು ಹಾಕಿಕೊಂಡಿದ್ದನ್ನು ಮನೆಯವರು ಗಮನಿಸಿದ್ದಾರೆ.

Latest Videos

undefined

ಮಾನಸಿಕ ಹಿಂಸೆ ಖಂಡಿಸಿ ಮೊಬೈಲ್‌ ಟವರ್‌ ಏರಿ ಪ್ರತಿಭಟನೆ!

ಇದರಿಂದ ಗಾಬರಿಗೊಂಡ ಪತ್ನಿ ಹಾಗೂ ಸೋದರರು ರಾತ್ರಿ ಪೂರ್ತಿ ಹುಡುಕಿದರೂ ಸಿಗಲಿಲ್ಲವೆಂದು ಬುಧವಾರ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುರಿಕೋಟ ಬ್ರಿಡ್ಜ್(Kurikota Bridge) ಬಳಿ ಬೈಕ್‌ ನಿಲ್ಲಿಸಿದ್ದನ್ನು ಗುರುತಿಸಿ 11ಗಂಟೆಗೆ ಮಹಾಗಾಂವ ಪೊಲೀಸ್‌ ಸಿಬ್ಬಂದಿ ಹಾಗೂ ಕಲ್ಬುರ್ಗಿಯ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವವನ್ನು ಪತ್ತೆ ಹಚ್ಚಿದ್ದಾರೆಂದು ಮಹಾಗಾವ್‌ ಪೊಲೀಸರು ತಿಳಿಸಿದ್ದಾರೆ.

ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ

ಮಾನಸಿಕ ಕಿರುಕುಳ: ಮಹಿಳೆ ಆತ್ಮಹತ್ಯೆ

ಕಂಪ್ಲಿ: ಕುಟುಂಬಸ್ಥರು ನೀಡುತ್ತಿದ್ದ ಮಾನಸಿಕ ಕಿರುಕುಳದಿಂದಾಗಿ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೀಡಾದ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಪರಿಣಿತಿ(ಅನಿತಾ)(26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 8 ತಿಂಗಳ ಹಿಂದೆ ಕಂಪ್ಲಿಯ ನಿವಾಸಿ ಸಂತೋಷ್‌ ಅಯೋದಿ ಜತೆ ಪರಿಣಿತಿಯವರ ವಿವಾಹ ಜರುಗಿತ್ತು. ವಿವಾಹವಾದಾಗಿನಿಂದ ಪರಿಣಿತಿ ಅವರಿಗೆ ತನ್ನ ಪತಿ ಹಾಗೂ ಕುಟುಂಬದ ಸದಸ್ಯರು ಮದುವೆ ಕಾರ್ಯಕ್ರಮ ಸರಿಯಾಗಿ ನಡೆಸಿಕೊಟ್ಟಿಲ್ಲ ಎಂಬ ವಿಚಾರ ಕುರಿತು ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದ್ದು. ಇದರಿಂದ ಮನನೊಂದ ಮಹಿಳೆ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ವಿಚಾರ ಕುರಿತು ಆತ್ಮಹತ್ಯೆಗೀಡಾದ ಮಹಿಳೆಯ ಪತಿ ಸಂತೋಷ್‌ ಅಯೋದಿ, ಕುಟುಂಬಸ್ಥರಾದ ಉಮಾದೇವಿ, ರಾಘವೇಂದ್ರ ಅಯೋದಿ, ಅನಿತಾ ಸೇರಿ ಒಟ್ಟು 4 ಜನರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!