ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಗರದ 1,500ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಅವರ ಮನೆಯಲ್ಲಿದ್ದ ಮಾರಕಾಸ್ತ್ರಗಳನ್ನು ಹಾಗೂ ರೌಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು (ಏ.20): ರಾಜ್ಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಗರದ 1,500ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಅವರ ಮನೆಯಲ್ಲಿದ್ದ ಮಾರಕಾಸ್ತ್ರಗಳನ್ನು ಹಾಗೂ ರೌಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ, ಯಾವುದೇ ರೌಡಿಗಳು ತಮ್ಮ ಪುಂಡಾಟಿಕೆ ತೋರಿಸದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿನ ಪಶ್ಚಿಮ ಹಾಗೂ ದಕ್ಷಿಣ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳ ಮನೆಯ ಮೇಲೆ ಪೊಲಿಸರು ದಾಳಿ ಮಾಡಿದ್ದಾರೆ. ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ನಗರದ ಐದು ನೂರಕ್ಕು ಹೆಚ್ಚು ರೌಡಿಗಳ ಮನೆಗಳನ್ನು ಶೋಧನೆ ಮಾಡಿದ್ದಾರೆ. ಇನ್ನು ಪೊಲೀಸರ ದಾಳಿ ವೇಳೆ, ಮಚ್ಚು ಲಾಂಗುಗಳು ಪತ್ತೆಯಾಗಿವೆ. ವಾರಂಟ್ ಪೆಂಡಿಂಗ್ ಇದ್ದ ಕೆಲ ರೌಡಿಗಳು ಮನೆಯಲ್ಲಿ ಪತ್ತೆಯಾಗಿದ್ದು, ಮಾರಕಾಸ್ತ್ರಗಳನ್ನು ಹಾಗೂ ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬರ್ತಡೇ ಸ್ಟೇಟಸ್ ಹಾಕಿಲ್ಲವೆಂದು ಅವಾಜ್ ಹಾಕಿದ್ದಕ್ಕೆ, ಕೊಲೆಯಾದ ಕುಖ್ಯಾತ ರೌಡಿ ಕಾರ್ತಿಕ್!
ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ದಾಳಿ: ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಬೆಂಗಳೂರು ಪಶ್ಚಿಮ ವಲಯದದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಕೇಂದ್ರ ವಿಭಾಗ, ದಕ್ಷಿಣ ವಿಭಾಗ , ಪಶ್ಚಿಮ ವಿಭಾಗ ಮತ್ತು ಉತ್ತರ ವಿಭಾಗದಲ್ಲಿ ರೌಡಿ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಸುಮಾರು ಐದು ನೂರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಮಾರಕಾಸ್ತ್ರಗಳು ಲಭ್ಯವಾಗದ ರೌಡಿಗಳಿಗೆ ಚುನಾವಣಾ ಸಮಯದಲ್ಲಿ ಯಾವ ಪಕ್ಷದ ಪರ ಹೋಗಿ ಗಲಾಟೆ ಮಾಡಬಾರದು. ಜೊತೆಗೆ, ರೌಡಿಸಂ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
20ಕ್ಕೂ ಅಧಿಕ ರೌಡಿಗಳ ಬಂಧನ: ಇನ್ನು ರಾಜ್ಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ದಾಳಿ ವೇಳೆ, ಕೆಲವರು ವಾರೆಂಟ್ ನೀಡಿದ್ದರೂ ಪೊಲೀಸ್ ಠಾಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ, ವಾರೆಂಟ್ ಜಾರಿಯಲ್ಲಿದ್ದ 20ಕ್ಕೂ ಅಧಿಕ ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ. ಹಲವು ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಕೆಲವು ಸರಗಳ್ಳರನ್ನು ಕೂಡ ಪೊಲೀಸರು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ. ಈಗಾಗಲೇ ಕೆಲವು ರೌಡಿಶೀಟರ್‌ಗಳಿಗೆ ಗಡಿಪಾರು ಮಾಡಲಾಗಿದ್ದು, ಈಗ ಬಾಕಿ ಇರುವ ವಾರ್ನಿಂಗ್ ನೀಡಲಾಗಿದೆ ಎಂದು ಸೂಚಿಸಿದರು.
ಆಟವಾಡುತ್ತಿದ್ದ ಮಕ್ಕಳ ದಾರುಣ ಸಾವು! ಬೇಸಿಗೆ ರಜೆಯಲ್ಲಿ ಮಕ್ಕಳ ಬಗ್ಗೆ ಕಾಳಜಿಯಿರಲಿ
ಗಡಿಪಾರು ಮಾಡಿದ್ದ ರೌಡಿಶೀಟರ್ ಮಂಜ ಅಲಿಯಾಸ್ ಮೊಲ ಪ್ರತ್ಯಕ್ಷ: ಚುನಾವಣೆ ಹಿನ್ನಲೆ ನಗರದ ಎಲ್ಲಾ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು ಗಡಿಪಾರು ಮಾಡಿರೋ ರೌಡಿಗಳ ಮೇಲೆಯೇ ತೀವ್ರ ನಿಗಾವಹಿಸಿದ್ದಾರೆ. ಆದರೆ ಗಡಿಪಾರಾಗಿ ಆಗಿರೋ ರೌಡಿಶೀಟರ್ ಮಂಜ ಅಲಿಯಾಸ್ ಮೊಲಾ ನಗರದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಗಡಿಪಾರು ಆದ ರೌಡಿ ನಗರದಲ್ಲೇ ರಾಜಾರೋಷವಾಗಿ ರೌಡಿಸಂ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 2022 ರಲ್ಲಿ ಈಶಾನ್ಯ ವಿಭಾಗದ ಪೊಲೀಸರು ರೌಡಿ ಮಂಜನನ್ನು ಗಡಿಪಾರು ಮಾಡಿದ್ದರು. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗ್ತಿದ್ದ ಹಿನ್ನಲೆ ಮೋಲಾನನ್ನ ಗಡಿಪಾರು ಮಾಡಲಾಗಿತ್ತು. ಪೊಲೀಸರ ಗಡಿಪಾರಿಗೆ ಡೋಂಟ್ ಕೇರ್ ಎಂಬಂತೆ ಮತ್ತೆ ನಗರಕ್ಕೆ ಬಂದು ಕೊಲೆಯತ್ನ ನಡೆಸಿದ್ದಾನೆ.
ದೂರು ಕೊಟ್ಟವರ ಮೇಲೆ ಹಲ್ಲೆ ಮಾಡಿದ ಮೊಲ: ಕಳೆದ ವಾರ ಅಮೃತಹಳ್ಳಿಯಲ್ಲಿ ತೇಜಸ್ ಹಾಗೂ ಅವರ ತಾಯಿ ಶೋಭ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. 2019 ರಲ್ಲಿ ಮಂಜು @ಮೊಲ ವಿರುದ್ಧ ತೇಜಸ್ ತಾಯಿ ಶೋಭ ದೂರು ನೀಡಿದ್ದರು. ಗಣೇಶ ವಿಸರ್ಜನೆ ವೇಳೆ ಶೋಭರ ಪತಿ ಆಟೋವನ್ನು ಮಂಜು & ಗ್ಯಾಂಗ್ ದ್ವಂಸ ಮಾಡಿದ್ದರು. ಇದಾದ ಬಳಿಕ ಜೈಲಿಗೂ ಕಳುಹಿಸಿದ್ದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದೇ ಗಡಿಪಾರು ಮಾಡಲಾಗಿತ್ತು. ಆದರೆ, ಕಳೆದ ವಾರ ಮನೆ ಮುಂದೆ ನಿಂತಿರುವಾಗ ತೇಜಸ್ ಹಾಗೂ ಶೋಭ ಮೇಲೆ ಹಲ್ಲೆ ಮಾಡಿದ್ದಾನೆ.