ಪ್ರೀತಿ, ಸುಳ್ಳು & ಕೊಲೆ; ಅಮಾಯಕ ಭಿಕ್ಷುಕನ ಸಾವಿಗೆ ಕಾರಣವಾಯ್ತು ಯುವತಿಯ ಪರಸಂಗದ ಪ್ರೇಮದಾಟ

Published : Oct 13, 2024, 04:14 PM ISTUpdated : Oct 13, 2024, 04:15 PM IST
ಪ್ರೀತಿ, ಸುಳ್ಳು & ಕೊಲೆ; ಅಮಾಯಕ ಭಿಕ್ಷುಕನ ಸಾವಿಗೆ ಕಾರಣವಾಯ್ತು ಯುವತಿಯ ಪರಸಂಗದ ಪ್ರೇಮದಾಟ

ಸಾರಾಂಶ

ಮನೆಯವರು ತನಗೆ ಮಾಡಿದ 2ನೇ ಮದುವೆಯ ಬಗ್ಗೆ ಆಕೆಗೆ ಅಸಮಾಧಾನವಿತ್ತು. ತನ್ನ ಲವರ್‌ ಜೊತೆ ಓಡಿ ಹೋಗುವ ಸಲುವಾಗಿ ಆಕೆ ಸುಳ್ಳು ಆತ್ಮಹತ್ಯೆಯ ನಾಟಕವಾಡಿದ್ದಳು.ಇದಕ್ಕಾಗಿ ಅಮಾಯಕ ಭಿಕ್ಷುಕನೊಬ್ಬನನ್ನು ಕೊಲೆ ಮಾಡಿದ್ದಲ್ಲದೆ, ತಮ್ಮ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಅನ್ನೋದನ್ನು ನಂಬಿಸಿದ್ದಳು. ಮಾಡಿದ ತಪ್ಪಿನ ಅರಿವಾಗಿ ತಂದೆಯ ಬಳಿ ಎಲ್ಲಾ ವಿಚಾರವನ್ನು ಯುವತಿ ಹೇಳಿಕೊಂಡಿದ್ದಾಳೆ. ಕೊನೆಗೆ ಆಕೆಯ ತಂದೆಯೇ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಜ್‌ಕೋಟ್‌ (ಅ.13):ತನ್ನ ಲವರ್‌ ಜೊತೆ ಓಡಿ ಹೋಗುವ ಸಲುವಾಗಿ ಆಕೆ ಮಾಡಿದ್ದು ಮಹಾ ನಾಟಕ. ಆತ್ಮಹತ್ಯೆಯ ನಾಟಕವಾಡಿ ಇಡೀ ಕುಟುಂಬಕ್ಕೆ ತಾನು ಸತ್ತಿದ್ದೇನೆ ಎಂದು ನಂಬಿಸಿದ್ದ ಯುವತಿ ಒಂದು ತಿಂಗಳ ಬಳಿಕ ಗುಜರಾತ್‌ನ ರಾಜ್‌ಕೋಟ್‌ನ ಕಚ್‌ನಲ್ಲಿರುವ ತನ್ನ ಸ್ವಂತ ಮನೆಗೆ ಬಂದಿದ್ದಾಳೆ. ಮಾಡಿದ್ದೆಲ್ಲವನ್ನೂ ತನ್ನ ತಂದೆಯ ಮುಂದೆ ಹೇಳೀಕೊಂಡಿದ್ದಾಳೆ. ಒಬ್ಬ ಅಮಾಯಕ ಭಿಕ್ಷುಕನನ್ನು ಕಿಡ್ನಾಪ್‌ ಮಾಡಿ, ಆತನನ್ನು ಕೊಂದು, ಅವನ ಮೃತದೇಹವನ್ನು ಬೆಂಕಿಗೆ ಇಟ್ಟ ಎಲ್ಲಾ ಸಂಗತಿಯನ್ನು ತಿಳಿಸಿದ್ದಾಳೆ. ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಎರಡು ಕುಟುಂಬಕ್ಕೆ ನಂಬಿಸಲು, ಯುವತಿ ಹಾಗೂ ಆಕೆಯ ಲವರ್‌ ಮಾಡಿದ ಮಹಾ ನಾಟಕ ಈಗ ಬಯಲಿಗೆ ಬಂದಿದೆ.

ಶನಿವಾರ ರಾಜ್‌ಕೋಟ್‌ ಪೊಲೀಸರು 27 ವರ್ಷದ ರಮಿ ಕೇಸರಿಯಾ ಹಾಗೂ ಆಕೆಯ ಲವರ್‌ ಅನಿಲ್‌ ಗಂಗಾಲ್‌ (ಮದುವೆಯಾಗಿರುವ ವ್ಯಕ್ತಿ) ಎನ್ನುವ ವ್ಯಕ್ತಿಯನ್ನು ಕೊಲೆ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ. ಜುಲೈ 5 ರಂದು ಖಾರಿ ಗ್ರಾಮದಲ್ಲಿರುವ ಯುವತಿಯ ಅತ್ತೆಯ ಮನೆಯ ಬಳಿ ಅಪರಿಚಿತ ವ್ಯಕ್ತಿಯನ್ನು ಕೊಂದು ಅವನ ದೇಹವನ್ನು ಚಿತೆಯಲ್ಲಿಟ್ಟು ಸುಟ್ಟು ಹಾಕಿದ್ದನ್ನು ಇವರು ಒಪ್ಪಿಕೊಂಡಿದ್ದರು. ರಮಿ ತನ್ನ ಮೊಬೈಲ್‌ ಫೋನ್‌ ಹಾಗೂ ಚಪ್ಪಲಿಗಳು ಚಿತೆಯ ಬಳಿ ಬಿಟ್ಟು ಹೋಗಿದ್ದಳು. ಇದರಿಂದ ಆಕೆಯ ಪೋಷಕರು ಮತ್ತು ಅತ್ತೆಯ ಮನೆಯವರು ರಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ನಂಬಿದ್ದರು. ಈ ಬಗ್ಗೆ ಯಾವುದೇ ಅನುಮಾನ ಹೊಂದಿಲ್ಲದ ಆಕೆಯ ಕುಟುಂಬ ಹಾಗೂ ಗಂಡನ ಮನೆಯವರು ಸುಟ್ಟ ದೇಹದ ಭಾಗಗಳು ರಮಿ ಕೇಸರಿಯಾ ಅವರದ್ದೇ ಎಂದು ನಂಬಿ ಅಂತ್ಯಕ್ರಿಯೆಯನ್ನು ಪೂರ್ಣ ಮಾಡಿದ್ದರು.

ಈ ಪ್ಲ್ಯಾನ್‌ ಮಾಡಲು ಕಾರಣವೇನು: ಸ್ವತಃ ಪೊಲೀಸರ ಎರಡು ಆರೋಪಿಗಳೇ ತಪ್ಪೊಪ್ಪಿಕೊಂಡಿದ್ದು, ಅದರ ವಿವರಗಳನ್ನು ಪೊಲೀಸರು ತಿಳಿಸಿದ್ದಾರೆ. 27 ವರ್ಷದ ರಮಿ ಕಸರಿಯಾಗೆ 2ನೇ ಮದುವೆಯಾಗಿತ್ತು. ಇದು ಆಕೆಗೆ ಇಷ್ಟವಿದ್ದಿರಲಿಲ್ಲ. ಆಕೆ ಅನಿಲ್‌ ಎನ್ನುವ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಅನಿಲ್‌ ಜೊತೆ ಬದುಕಲು ಕುಟುಂಬ ಬಿಡುತ್ತಿಲ್ಲ. ಆತನನ್ನು ಸೇರುವ ಏಕೈಕ ಮಾರ್ಗ ಏನೆಂದರೆ, ತಾನಿ ಸತ್ತಂತೆ ನಟಿಸುವುದು.  ವಿವಾಹವಾಗಿರುವ ರಾಮಿ ಮತ್ತು ಗಂಗಲ್ ಅವರ ವಿವಾಹವು ಸಾಮಾಜಿಕ ಮತ್ತು ಸಮುದಾಯದ ನಿಯಮಗಳಿಂದ ಸಾಧ್ಯವಾಗಲಿಲ್ಲ.

ಆದರೆ, ಸೆಪ್ಟೆಂಬರ್‌ 29 ರಂದು ಭುಜ್‌ ತಾಲೂಕಿನ ಖಾರಿ ಗ್ರಾಮದಲ್ಲಿರುವ ತನ್ನ ತಂದೆಯ ಮನೆಗೆ ಬಂದ ರಮಿಯನ್ನು ಕಂಡು ಪಾಲಕರು ಅಚ್ಚರು ಪಟ್ಟಿದ್ದಾರೆ. ಸತ್ತು ಹೋಗಿದ್ದಾಳೆ ಎಂದು ನಂಬಿದ್ದ ಮಗಳನ್ನು ಮನೆಯಲ್ಲಿ ಕಂಡು ಅವರಿಗೆ ಅಚ್ಚರಿಯಾಗಿದೆ. ಆ ಬಳಿಕ ಇಡೀ ಕಥೆಯನ್ನು ತಂದೆಗೆ ತಿಳಿಸಿದ್ದಾಳೆ. ಈ ಬಗ್ಗೆ ಖಾವ್ಡಾ ಪೊಲೀಸರಿಗೆ ತಿಳಿಸುವಂತೆ ರಮಿಗೆ ಹೇಳಿದ್ದರೂ ಒಪ್ಪಿರಲಿಲ್ಲ. ಬಳಿಕ ಸ್ವತಃ ತಂದೆಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಎರಡು ದಿನಗಳ ಹಿಂದೆ ರಮಿ ಮತ್ತು ಅನಿಲ್ ಅವರನ್ನು ರಾಪರ್ ಪಟ್ಟಣದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಖಾವ್ಡಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಎಂಬಿ ಚಾವ್ಡಾ ಈ ಬಗ್ಗೆ ಮಾಹಿತಿ ನೀಡಿದ್ದು, 'ತಮ್ಮ ಮನೆಯ ಅಕ್ಕಪಕ್ಕದ ಬಳಿ ಭಿಕ್ಷುಕ ಅಥಾ ಮೃತದೇಹವನ್ನ ಆತ ಹುಡುಕುತ್ತಿದ್ದ. ಭುಜ್‌ನ ಹಮೀರ್‌ಸಾರ್‌ ಸರೋವರದ ಬಳಿ ಫುಟ್‌ಪಾತ್‌ನಲ್ಲಿ ಮಲಗಿದ್ದ ಭಿಕ್ಷುಕನೊಬ್ಬನನ್ನು ಕಂಡಿದ್ದಾನೆ.ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಭಿಕ್ಷುಕನನ್ನು ಆತ ಸಾಯಿಸಿದ್ದಾನೆ' ಎಂದು ತಿಳಿಸಿದ್ದಾರೆ.

ಜುಲೈ 3 ರಂದು ಅನಿಲ್‌ ಹಾಗೂ ರಮಿ ವ್ಯಾನ್‌ನಲ್ಲಿ ಹೋಗಿ ಭಿಕ್ಷುಕನ್ನು ಕಿಡ್ನಾಪ್‌ ಮಾಡಿದ್ದಾರೆ. ಬಳಿಕ ಆತನನ್ನು ವ್ಯಾನ್‌ನಲ್ಲಿಯೇ ಹತ್ಯೆ ಮಾಡಿದ್ದು, ಇಡೀ ದೇಹವನ್ನು ಗೋಣಿಚೀಲದಲ್ಲಿ ಹಾಕಿದ್ದಾರೆ. ಮರುದಿನ ಈತನ ಮೃತದೇಹವನ್ನು ಊರ ಹೊರಗೆ ಜನರು ಓಡಾಟ ಮಾಡದ ಪ್ರದೇಶದ ಕೊಟ್ಟಿಗೆಯೊಂದರಲ್ಲಿ ಇರಿಸಿದ್ದರು.  ಜುಲೈ 5 ರಂದು ಅನಿಲ್‌ 20 ಲೀಟರ್‌ ಡೀಸೆಲ್‌, ಕಟ್ಟಿಗೆಯ ತುಂಡುಗಳನ್ನು ತಂದು ದೇಹವನ್ನು ಸುಟ್ಟಿದ್ದಾರೆ. ಇನ್ನೊಂದೆಡೆ, ರಮಿ ತನ್ನ ತಂದೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ವಿಡಿಯೋವನ್ನು ಕಳಿಸಿದ್ದಾಳೆ.

ಅದೇ ದಿನ ರಮಿಯ ಮಾವ ಈ ಬೆಂಕಿಯನ್ನು ನೋಡಿದ್ದು, ಸುಟ್ಟು ಕರಕಲಾಗಿರುವ ಮೃತದೇಹವನ್ನೂ ಕಂಡಿದ್ದಾರೆ.ಅದೇ ಸ್ಥಳದಲ್ಲಿ ರಮಿಯ ಮೊಬೈಲ್‌ ಹಾಗೂ ಚಪ್ಪಲಿ ಕೂಡ ಇದ್ದಿದ್ದರಿಂದ ರಮಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿರ್ಧಾರ ಮಾಡಿದ್ದರು. 'ಆದರೆ ಆಕೆಗೆ ತಾನು ತಪ್ಪು ಮಾಡಿದ್ದೇನೆ ಎನ್ನುವ ಪಶ್ಚಾತ್ತಾಪ ಭಾವನೆ ಕಾಡುತ್ತಿತ್ತು.ಅದಕ್ಕಾಗಿ ತಂದೆಯ ಬಳಿ ಬಂದು ಮಾಡಿದ ತಪ್ಪನ್ನೆಲ್ಲವೂ ಒಪ್ಪಿಕೊಂಡಿದ್ದಳು.ಆದರೆ, ಇದನ್ನು ಪೊಲೀಸರ ಬಳಿಗೆ ತಲುಪಿಸುವ ಉದ್ದೇಶ ಆಕೆಗೆ ಇದ್ದಿರಲಿಲ್ಲ.ರಮಿ ಬದುಕಿದ್ದಾಳೆ ಎನ್ನುವ ಮಾಹಿತಿ ಸಿಕ್ಕ ಬಳಿಕ ನಾವು ತನಿಖೆಯನ್ನು ಆರಂಭ ಮಾಡಿದ್ದೆವು' ಎಂದು ಕಚ್‌ ಪಶ್ಚಿಮದ ಪೊಲೀಸ್‌ ವರಿಷ್ಠಾಧಿಕಾರಿ ವಿಕಾಸ್‌ ಸುಂಡಾ ತಿಳಿಸಿದ್ದಾರೆ.

ಯಾರನ್ನು ಕಿಡ್ನಾಪ್‌ ಮಾಡಿದ್ದೇವೆ ಅನ್ನೋದೇ ಗೊತ್ತಿರಲಿಲ್ಲ: ರಮಿ ಹಾಗೂ ಅನಿಲ್‌ಗೆ ತಾವು ಕಿಡ್ನಾಪ್‌ ಮಾಡಿದ ವ್ಯಕ್ತಿ ಯಾರು ಅನ್ನೋದೇ ಗೊತ್ತಿರಲಿಲ್ಲ.ಭುಜ್‌ನ ಹಮೀರ್‌ಸಾರ್‌ ಸರೋವರದ ಬಳಿ ಪೊಲೀಸರು ತನಿಖೆ ಆರಂಭ ಮಾಡಿದಾಗ ಅಲ್ಲಿಯೇ ಇದ್ದ ಇನ್ನೊಬ್ಬ ಭಿಕ್ಷುಕ, ಫುಟ್‌ಪಾತ್‌ನಲ್ಲಿ ಬಹಳ ವರ್ಷಗಳಿಂದ ಮಲಗ್ತಾ ಇದ್ದ ವ್ಯಕ್ತಿ ತುಂಬಾ ದಿನದಿಂದ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.ಈ ವೇಳೆ ಪೊಲೀಸರು ಆತನ ಸ್ಕೆಚ್‌ ಬಿಡಿಸಿದ್ದಾರೆ. ಕೊನೆಗೆ ಅನಿಲ್‌ ಹಾಗೂ ರಮಿಯಿಂದ ಕೊಲೆಯಾದ ವ್ಯಕ್ತಿಯನ್ನು ಭರತ್‌ ಭತಿಯಾ ಎಂದು ಗೊತ್ತಾಗಿದೆ. ಭುಜ್‌ನಲ್ಲಿ ನೆಲೆಸಿರುವ ಆತನ ಸಹೋದರ ಭರತ್‌ನ ಗುರುತು ಹಿಡಿದಿದ್ದಾನೆ.

ತಾಜ್‌ಮಹಲ್‌ ಎದುರು ಮುಮ್ತಾಜ್‌ ಆದ ವರ್ಷಾ ಕಾವೇರಿ, ಷಹಜಹಾನ್‌ ಸಿಕ್ಕಿರೋ ಸೂಚನೆ ನೀಡಿದ್ರಾ?

ರಮಿಯ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿದ್ದ ಅನಿಲ್‌: ಈ ಘಟನೆ ನಡೆದ ಬಳಿಕ ಅನಿಲ್‌ ಹಾಗೂ ರಮಿ, ಭುಜ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ್ದರು.ಸಂಶಯ ಬರದೇ ಇರಲಿ ಎನ್ನುವ ಕಾರಣಕ್ಕೆ, ರಮಿಯ ಶ್ರದ್ಧಾಂಜಲಿ ಸಭೆಯಲ್ಲೂ ಅನಿಲ್‌ ಭಾಗವಹಿಸಿದ್ದ. 'ತನ್ನ ಪತ್ನಿ ಕೂಡ ಸಂಶಯ ಪಡಬಾರದು ಎನ್ನುವ ಕಾರಣಕ್ಕೆ ಪತ್ನಿಯೊಂದಿಗೆ ಊರಿನಲ್ಲಿ ಭುಜ್‌ನಲ್ಲಿ ರಮಿಯೊಂದಿಗೆ ವಾಸ ಮಾಡುತ್ತಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.

ದಸರಾ ಸ್ತಬ್ದಚಿತ್ರಗಳಲ್ಲಿ ಪೆರಿಯಾರ್‌ ಫೋಟೋ, ಆಸ್ತಿಕರ ಭಾವನೆಗೆ ಧಕ್ಕೆ: ಯತ್ನಾಳ್‌ ಆರೋಪ

ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ಮೃತದೇಹ ಸುಟ್ಟ ಪ್ರದೇಶದಿಂದ ಮೂಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಗ್ರಾಮಗಳಲ್ಲಿ ಶವಸಂಸ್ಕಾರ ಆದ ಬಳಿಕ ಬೂದಿಯನ್ನು ಒಟ್ಟುಮಾಡುತ್ತಾರೆ. ಮೂಳೆಗಳು ಅದರ ಪಕ್ಕದಲ್ಲಿ ಇಡುತ್ತಾರೆ. ಈ ಮೂಳೆಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆಗೆ ಕಳಿಸಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು