ಬೆಂಗಳೂರಿನಿಂದ ರಾಮನಗರಕ್ಕೆ ಪ್ರಿಯಕರನೊಂದಿಗೆ ಓಡಿಹೋದ ತಾಯಿಯೊಬ್ಬಳು ತನ್ನ ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆಂದು ಎಂದು ಭಾವಿಸಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸ್ಮಶಾನದ ಸಿಬ್ಬಂದಿಯ ದೂರಿನ ಮೇರೆಗೆ ಪೊಲೀಸರು ತಾಯಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ.
ರಾಮನಗರ (ಅ.13): ಬೆಂಗಳೂರಿನಲ್ಲಿ ವಾಸವಿದ್ದ ಗಂಡನನ್ನು ಬಿಟ್ಟು ಎರಡು ಮಕ್ಕಳೊಂದಿಗೆ ಪ್ರಿಯಕರನೊಂದಿಗೆ ಓಡಿ ಹೋಗಿ ರಾಮನಗರದಲ್ಲಿ ವಾಸವಾಗಿದ್ದ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಈ ಮಕ್ಕಳು ಅಡ್ಡಿಯಾಗುತ್ತವೆ ಎಂದು ತಲೆದಿಂಬಿನಿಂದ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಹೆತ್ತ ತಾಯಿಯೇ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ಇಬ್ಬರು ಪುಟ್ಟ ಕಂದಮ್ಮಗಳನ್ನು ಸಾಯಿಸಿದ್ದಾಳೆ. ಈ ಮಕ್ಕಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ, ಎಂದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಹೀಗೆ ಕೊಲೆ ಮಾಡಿದ ಮಹಿಳೆಯ ಹೆಸರು ಸ್ವೀಟಿ (24). ತಾಯಿಯಿಂದಲೇ ಕೊಲೆಯಾದ ಮಕ್ಕಳು ಕಬೀಲಾ (2) ಹಾಗೂ ಕಬೀಲನ್ (11) ಆಗಿದ್ದಾರೆ. ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ರಾಮನಗರದ ಸ್ಮಶಾನದಲ್ಲಿ ದಫನ್ ಮಾಡಿ ಬಂದಿದ್ದಾರೆ. ಈ ಘಟನೆ ತಾಯಿ ಕುಲಕ್ಕೆ ಅವಮಾನ ಮಾಡಿದ ಕೃತ್ಯವಾಗಿದೆ ಎಂದು ಸ್ಥಳೀಯರು ಆ ತಾಯಿಗೆ ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ: ಹಗರಿಬೊಮ್ಮನಹಳ್ಳಿ: ಬೇರೊಬ್ಬರ ಹೆಂಡ್ತಿ ಜತೆ ಅಕ್ರಮ ಸಂಬಂಧ, ವಿಜಯದಶಮಿ ಹಬ್ಬದ ದಿನವೇ ಬಿತ್ತು ಯುವಕನ ಹೆಣ!
ಈಕೆ ಮೂಲತಃ ಬೆಂಗಳೂರು ನಗರದ ಎ.ಕೆ. ಕಾಲೋನಿ ನಿವಾಸಿಯಾಗಿದ್ದಳು. ಆದರೆ, ಪ್ರಿಯಕರನ ಮೋಹಕ್ಕೆ ಒಳಗಾಗಿದ್ದ ಈಕೆ ಗಂಡನನ್ನು ಬಿಟ್ಟು ತನ್ನ ಎರಡು ಮಕ್ಕಳೊಂದಿಗೆ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ (27) ನೊಂದಿಗೆ ರಾಮನಗರಕ್ಕೆ ಬಂದು ಮಂಜುನಾಥ ನಗರದಲ್ಲಿ ವಾಸವಿದ್ದರು. ಇಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಆದರೆ, ದಿನ ಕಳೆಯುತ್ತಿದ್ದಂತೆ ಬೇರೆಯವನ ಮಕ್ಕಳನ್ನು ಪ್ರೀತಿಯಿಂದ ಕಾಣದೇ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ ಮಕ್ಕಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರ ಮದ್ಯದಲ್ಲಿ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಅವುಗಳನ್ನು ಕಾಳಜಿ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾದರೆ ನಾವಿಬ್ಬರೂ ಅಕ್ರಮ ಸಂಬಂಧಕ್ಕಾಗಿ ಊರು ಬಿಟ್ಟು ಬಂದರೂ ಏನೂ ಫಲಬವಿಲ್ಲ ಎಂದು ಮೊದಲು ದೊಡ್ಡ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಮಗುವನ್ನು ರಾಮನಗರದ ಸ್ಮಶಾನದಲ್ಲಿ ಹೋಗಿ ದಫನ್ ಮಾಡಿ ಬಂದಿದ್ದಾರೆ.
ಇದಾದ ನಂತರ ತನ್ನ ಕರುಳಬಳ್ಳಿಯ ರಕ್ತ ಹಂಚಿಕೊಂಡು ಹುಟ್ಟಿದ ಮಗುವನ್ನು ಕೊಲೆ ಮಾಡಿದ್ದೇನೆ ಎಂಬ ಕಿಂಚಿತ್ತೂ ಕನಿಕರಪಟ್ಟುಕೊಳ್ಳದೇ ಪ್ರಿಯಕರನೊಂದಿಗೆ ಸಂತಸದಿಂದಿದ್ದಾಳೆ. ಇದಾದ ನಂತರ ಇವರ ಸಂಬಂಧಕ್ಕೆ 2 ವರ್ಷದ ಮಗು ಅಳವುದು ಹಾಗೂ ಹಠ ಮಾಡುವುದು ಅಡ್ಡಿಯಾಗಿದೆ. ಆಗ ಒಂದು ಮಗುವನ್ನು ಕೊಲೆ ಮಾಡಿದ ಇವರಿಗೆ ಈ ಮಗುವನ್ನು ಕೊಲೆ ಮಾಡಿದರೆ ತಾವು ಕೂಡ ಪ್ರಣಯ ಪಕ್ಷಿಗಳಾಗಿ ಹೊಸ ಜೀವನ ಆರಂಭಿಸಬಹುದು ಎಂದು ಯೋಜನೆ ರೂಪಿಸಿದ್ದಾರೆ. ಅದರಂತೆ, ಇನ್ನೊಂದು ಚಿಕ್ಕ ಮಗುವನ್ನು ಕೂಡ ಅದೇ ರೀತಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಸ್ಮಶಾನದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಹೇಳಿ ದಫನ್ ಮಾಡಿ ಬಂದಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ: ಗಾಂಜಾ ಕೇಸಲ್ಲಿ ಪ್ರಿಯತಮೆ ಪತಿಯ ಸಿಲುಕಿಸಲು ಯತ್ನಿಸಿ ತಾನೇ ಸಿಕ್ಕಿಬಿದ್ದ!
ಆದರೆ, 15 ದಿನಗಳ ಅಂತರದಲ್ಲಿ ಎರಡು ಮಕ್ಕಳು ಸಾವನ್ನಪ್ಪಿದ್ದು, ಅದೇ ತಂದೆ ತಾಯಿ ಬಂದು ಮಕ್ಕಳನ್ನು ದಫನ್ ಮಾಡಿದ್ದ ಬಗ್ಗೆ ಸ್ಮಶಾನದ ಸಿಬ್ಬಂದಿಗೆ ಅನುಮಾನ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಮಶಾನದ ಕಾವಲುಗಾರನ ದೂರನ್ನು ಆಧರಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮಕ್ಕಳನ್ನು ದಫನ್ ಮಾಡಿಹೋದ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ನಂತರ, ಮಕ್ಕಳ ಸಾವಿನ ಬಗ್ಗೆ ವಿಚಾರಣೆ ಮಾಡಿದಾಗ, ಅನಾರೋಗ್ಯದಿಂದ ಸಾವು ಎಂದು ಹೇಳಿದ್ದಾರೆ. ಪೊಲೀಸರ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದಾಗ ಸತ್ಯವನ್ನು ಒಪ್ಪಿಕೊಂಡು ತಾನೇ ತನ್ನಿಬ್ಬರು ಮಕ್ಕಳನ್ನು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.