
ಭರೂಚ್ (ಮೇ 20, 2023): ರಜೆಯ ಸಮಯದಲ್ಲಿ ಅಥವಾ ಉದ್ಯೋಗದ ಟೆನ್ಷನ್‌ನಿಂದ ಹೊರಬರಲು ಹಾಗೂ ಮೋಜು ಮಾಡಲು ಜನರು ಟ್ರಿಪ್ ಅಥವಾ ಪಿಕ್ನಿಕ್ ಹೋಗೋದು ಸಾಮಾನ್ಯ. ಆದರೆ, ಬೇಸರ ಕಳೆಯಲೆಂದು ಹೋದ ಪಿಕ್ನಿಕ್ ಜೀವಕ್ಕೇ ಮುಳುವಾದರೆ ಹೇಗೆ..
ನದಿಯಲ್ಲಿ ಈಜಾಡಲು ಹೋಗಿ ಹಲವರು ಸಾಯುವ ಘಟನೆಗಳನ್ನು ಕೇಳಿರುತ್ತೀರಿ. ಆದರೆ, ಈ ಪ್ರಕರಣದಲ್ಲಿ ಒಂದೇ ಕುಟುಂಬದ ಆರು ಮಂದಿ ಸಮುದ್ರದಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ. ಗುಜರಾತ್‌ನ ಭರೂಚ್ ನಗರದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮುಲ್ಲರ್ ಗ್ರಾಮದ ಕುಟುಂಬವೊಂದು ವಿಹಾರಕ್ಕೆಂದು ತೆರಳಿದ್ದ ವೇಳೆ ಭರೂಚ್‌ನ ದಾಜೆಜ್ ಬೀಚ್‌ನಲ್ಲಿ ಈ ಘಟನೆ ನಡೆದಿದೆ ಎಂದೂ ವರದಿಯಾಗಿದೆ.
ಇದನ್ನು ಓದಿ: ಮಗಳ ಅತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ ಮಾಡಿದ ಪೊಲೀಸರು; ಬೇಸತ್ತ ದಲಿತ ರೈತನ ಆತ್ಮಹತ್ಯೆ
ಪಿಕ್ನಿಕ್‌ಗೆ ತೆರಳಿದ್ದ ತಂಡದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸೇರಿದ್ದರು. ಈ ಪೈಕಿ 6 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇನ್ನು, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಭರೂಚ್ ಡಿಎಸ್ಪಿ ಲೀನಾ ಪಾಟೀಲ್, “ದಹೇಜ್ ಬೀಚ್‌ಗೆ ಭೇಟಿ ನೀಡಲು ಬಂದ ಮುಲ್ಲರ್ ಗ್ರಾಮದ ಒಂದೇ ಕುಟುಂಬದ 8 ಜನರಲ್ಲಿ 6 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನು, 2 ಜನರನ್ನು ರಕ್ಷಿಸಲಾಗಿದೆ. ಮುಂದಿನ ಕ್ರಮ ಪ್ರಗತಿಯಲ್ಲಿದೆ’’ ಎಂದೂ ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಗೋಹಿಲ್ ಕುಟುಂಬದ 6 ಸದಸ್ಯರಾದ ರಾಜೇಶ್ (33), ಯೋಗೇಶ್ (19), ತುಳಸಿಬೆನ್ (20), ಜಾನ್ವಿ (3), ಆರ್ಯ (2) ಮತ್ತು ರಿಂಕಲ್ (15) ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಅಯ್ಯೋ ಪಾಪ.. ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ಐಆರ್‌ಎಸ್ ಅಧಿಕಾರಿ ಬಂಧನ
ಘಟನೆ ನಡೆದಿದ್ದು ಹೇಗೆ?
ಸಂತ್ರಸ್ತರು ದಡದ ಬಳಿ ಕುಳಿತಿದ್ದರು, ಉಬ್ಬರವಿಳಿತದ ಕಾರಣ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಾಯಿತು ಮತ್ತು ಅವರನ್ನು ಬಚಾವ್ ಮಾಡಲು ಸಾಧ್ಯವಾಗುವ ಮೊದಲೇ ಸಮುದ್ರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂತದ್ದೇ ಘಟನೆ ನಡೆದಿತ್ತು
ಕಾಲೇಜಿನಿಂದ ಒಂದು ದಿನದ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಗಳ ಗುಂಪು ತುಂಗಾ ನದಿಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಒಬ್ಬ ಮುಳುಗುವುದನ್ನು ರಕ್ಷಣೆ ಮಾಡಲು ಹೋಗಿದ್ದವನು ಸೇರಿ ಒಟ್ಟು ಇಬ್ಬರು ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ವಿವಾಹ ಸಮಾರಂಭದಲ್ಲೇ ಜಗಳವಾಡಿ ವಿಷ ಸೇವಿಸಿದ ವರ - ವಧು: ಮದುವೆ ಗಂಡು ಸಾವು, ಮಹಿಳೆ ಸ್ಥಿತಿ ಗಂಭೀರ
ಮೃತ ವಿದ್ಯಾರ್ಥಿಗಳನ್ನು ಹರಿಹರಪುರದ ರಕ್ಷಿತ್ (20) ಹಾಗೂ ಶೃಂಗೇರಿ ಸುಂಕದ ಮಕ್ಕಿಯ ಪ್ರಜ್ವಲ್ (21) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಳಿಯ ನೆಮ್ಮಾರು ಸಮೀಪದ ತುಂಗಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಈಜಲು ತೆರಳಿದ್ದ ರಕ್ಷಿತ್ ಹಾಗೂ ಪ್ರಜ್ವಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ