ಮಗಳ ಅತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ ಮಾಡಿದ ಪೊಲೀಸರು; ಬೇಸತ್ತ ದಲಿತ ರೈತನ ಆತ್ಮಹತ್ಯೆ

By BK AshwinFirst Published May 20, 2023, 3:50 PM IST
Highlights

ಅಪ್ರಾಪ್ತೆ ಮೇಲೆ ಅತ್ಯಾಚಾರ ದೂರು ದಾಖಲಿಸಿದರೂ, ತನಿಖೆ ಮಾಡದ ಪೊಲೀಸರು ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಬೇಸತ್ತ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಲಖನೌ (ಮೇ 20, 2023): ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ  ತನ್ನ 11 ವರ್ಷದ ಮಗಳನ್ನು ಪಕ್ಕದ ಹಳ್ಳಿಯ ಮೂವರು ವ್ಯಕ್ತಿಗಳು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ ನಂತರ 45 ವರ್ಷದ ದಲಿತ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮೇ 9 ರಂದು ತನ್ನ ತಂದೆಯನ್ನು ಮಗಳು ಜಮೀನಿನಲ್ಲಿ ಭೇಟಿಯಾಗಲು ಹೋಗುತ್ತಿದ್ದಾಗ ಸುಮಾರು 20ರ ಆಸುಪಾಸಿನ ಆರೋಪಿಗಳು ಬಾಲಕಿಯನ್ನು ಅಪಹರಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಬಾಲಕಿಯ ತಂದೆ ಮರುದಿನ ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು, ಎಫ್‌ಐಆರ್ ದಾಖಲಿಸುವ ಬದಲು, ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳ ನಡುವೆ “ರಾಜಿ ಮಾಡಿಕೊಳ್ಳಲು ಒತ್ತಾಯಿಸಿದ್ದಾರೆ. 

ಇದನ್ನು ಓದಿ: ಅಯ್ಯೋ ಪಾಪ.. ಮಹಿಳಾ ಐಎಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ: ಐಆರ್‌ಎಸ್‌ ಅಧಿಕಾರಿ ಬಂಧನ

ಅಲ್ಲದೆ, ಈ ರಾಜಿ ಸಂಧಾನದ ವೇಳೆ ಹುಡುಗಿಯ ಪೋಷಕರಿಗೆ ಕರೆ ಅಥವಾ ಮಾಹಿತಿ ನೀಡದೆ ಈ ವಿಷಯ ಮುಚ್ಚಿಟ್ಟಿದ್ದಾರೆ ಮತ್ತು ಅಮಾರಿಯಾದ SHO ಮುಖೇಶ್ ಶುಕ್ಲಾ ಅವರು ಶೀಘ್ರದಲ್ಲೇ ಈ ಕೇಸ್‌ ಅನ್ನು ಕ್ಲೋಸ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ಪೊಲೀಸರು ರಾಜಿಗೆ ಆಗ್ರಹಿಸಿದರು: ಸಂತ್ರಸ್ತೆಯ ಕುಟುಂಬ
ಕೇಸ್‌ ದಾಖಲಿಸಿಕೊಳ್ಳದೆ ಮಗಳಿಗೆ ಅನ್ಯಾಯವಾಗಿದ್ದನ್ನು ಸಹಿಸಿಕೊಳ್ಳದ ತಂದೆ ಹಾಗೂ ದಲಿತ ಸಮುದಾಯದ ರೈತ ಬುಧವಾರ ರಾತ್ರಿ ಅಮಾರಿಯಾದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಇನ್ನು, ಈ ಆತ್ಮಹತ್ಯೆಗೆ ಪೊಲೀಸರೇ ಕಾರಣ ಎಂದು ಅವರ ಕುಟುಂಬ ದೂಷಿಸಿದೆ. ಆತ್ಮಹತ್ಯೆಯ ನಂತರ ಎಚ್ಚೆತ್ತುಕೊಂಡ ಪೊಲೀಸರು,  ರೈತನ 20 ವರ್ಷದ ಮಗ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಕೊನೆಗೂ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ವಿವಾಹ ಸಮಾರಂಭದಲ್ಲೇ ಜಗಳವಾಡಿ ವಿಷ ಸೇವಿಸಿದ ವರ - ವಧು: ಮದುವೆ ಗಂಡು ಸಾವು, ಮಹಿಳೆ ಸ್ಥಿತಿ ಗಂಭೀರ

ಈ ಮಧ್ಯೆ, "ಪೊಲೀಸ್ ನಿರ್ಲಕ್ಷ್ಯ" ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಸ್‌ಎಚ್‌ಒ  ಮುಖೇಶ್ ಶುಕ್ಲಾ,  "ಮೂವರು ಪುರುಷರು - ರಾಹುಲ್, ದಿನೇಶ್ ಮತ್ತು ರೋಹಿತ್  - ಐಪಿಸಿ ಸೆಕ್ಷನ್ 363 (ಅಪಹರಣ) 376 (ಅತ್ಯಾಚಾರ), 342 (ತಪ್ಪಾದ ಕನ್‌ಫೈನ್‌ಮೆಂಟ್‌) , 120-ಬಿ (ಕ್ರಿಮಿನಲ್ ಪಿತೂರಿ), 306 (ಆತ್ಮಹತ್ಯೆಗೆ ಪ್ರಚೋದನೆ), ಮತ್ತು ಪೋಕ್ಸೋ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಗಳ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ; ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ‘’ ಎಂದು ಗುರುವಾರ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಇನ್ನು, "ಅಮಾರಿಯಾ ಪೊಲೀಸ್ ಠಾಣೆಯ ಭಾಗದಲ್ಲಿ ಕೆಲವು ಲೋಪದೋಷಗಳನ್ನು" ಒಪ್ಪಿಕೊಂಡ ಎಸ್ಪಿ (ಪಿಲಿಭಿಟ್‌) ಅತುಲ್ ಶರ್ಮಾ, "ನಾನು ಎಎಸ್ಪಿ, ಅನಿಲ್ ಕುಮಾರ್ ಯಾದವ್ ಅವರಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ ಮತ್ತು ಮುಂದಿನ ಎರಡು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿದ್ದೇನೆ. ." ಎಂದೂ ಹೇಳಿದರು.

ಇದನ್ನೂ ಓದಿ: Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ

ತನ್ನ ಸಹೋದರಿಯನ್ನು ಉತ್ತರಾಖಂಡ್‌ನ ಕಿಚ್ಚ ಎಂಬಲ್ಲಿಗೆ ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದು ಅಲ್ಲಿ ಕೋಣೆಯಲ್ಲಿ ಕೂಡಿಹಾಕಿ ರಾತ್ರಿಯಿಡೀ ಅತ್ಯಾಚಾರ ಎಸಗಿದ್ದನ್ನು ದಲಿತ ರೈತನ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಆಘಾತಕ್ಕೊಳಗಾದ ಹುಡುಗಿಯನ್ನು ಪೊಲೀಸರಿಗೆ ಈ ಬಗ್ಗೆ ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪುರುಷರು ಬೆದರಿಕೆ ಹಾಕಿದರು ಎಂದೂ ತಿಳಿದುಬಂದಿದೆ.

"ಅಪ್ರಾಪ್ತ ಬಾಲಕಿಯೊಂದಿಗಿನ ಅತ್ಯಾಚಾರದ ಪ್ರಕರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು". ‘ಇಂತಹ ಅಪರಾಧ ಸಮಾಜದ ವಿರುದ್ಧದ ಅಪರಾಧ’ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಹೇಳಿದೆ. 

ಇದನ್ನೂ ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!
 
ಇನ್ನೊಂದೆಡೆ,  "ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಕ್ಕಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ವಿರುದ್ಧ ಐಪಿಸಿ ಸೆಕ್ಷನ್ 166-ಎ (ಸಾರ್ವಜನಿಕ ಸೇವಕ ಕಾನೂನನ್ನು ಉಲ್ಲಂಘಿಸುವ, ಯಾವುದೇ ವ್ಯಕ್ತಿಗೆ ಹಾನಿಯಾಗುವ ಉದ್ದೇಶದಿಂದ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಲ್ಲಿ ಸಂತ್ರಸ್ತೆ ಅಪ್ರಾಪ್ತೆ ಎಂದೂ ವಕೀಲರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಉನ್ನಾವೋ ಗ್ಯಾಂಗ್‌ರೇಪ್‌ ಕೇಸ್‌ ಆರೋಪಿಗಳಿಗೆ ಜಾಮೀನು: ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

click me!