Anekal News: ಚಿನ್ನಾಭರಣದ ಆಸೆಗೆ ವೃದ್ಧೆ ಕೊಲೆ ಮಾಡಿ ಶವ ವಾರ್ಡ್‌ರೋಬ್‌ನಲ್ಲಿಟ್ಟ ಪಾಪಿ ಮಹಿಳೆ..!

By BK Ashwin  |  First Published Dec 4, 2022, 5:38 PM IST

ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ರಾಷ್ಟ್ರ ರಾಜಧಾನಿಯ ಮಾದರಿಯಲ್ಲಿ ಕೊಲೆ ನಡೆದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಬಳಿಕ ವಾರ್ಡ್‌ರೋಬ್‌ನಲ್ಲಿ ಅಜ್ಜಿಯ ಮೃತದೇಹವನ್ನು ಸುತ್ತಿಟ್ಟು ಮಹಿಳೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.


ಬೆಂಗಳೂರು ಹೊರ ವಲಯದಲ್ಲಿ ಭೀಕರ ಕೊಲೆ ನಡೆದಿದ್ದು, ರಾಷ್ಟ್ರ ರಾಜಧಾನಿ ಶ್ರದ್ಧಾ ವಾಕರ್‌ ರೀತಿಯಲ್ಲಿ ಕೊಲೆ ಮಾಡಿ ಶವವನ್ನು ಪ್ಯಾಕ್‌ ಮಾಡಿ ವಾರ್ಡ್‌ರೋಬ್‌ನಲ್ಲಿಡಲಾಗಿತ್ತು ಎಂದು ತಿಳಿದುಬಂದಿದೆ. ಆನೇಕಲ್ ತಾಲೂಕಿನ ನೆರಳೂರು ಬಳಿ ಈ ಕೊಲೆ ನಡೆದಿದ್ದು, ಮುಸ್ಲಿಂ ಮಹಿಳೆಯೊಬ್ಬರು ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 80 ವರ್ಷ ವಯಸ್ಸಿನ ಪಾರ್ವತಮ್ಮ ತನ್ನ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಈ ಕೃತ್ಯವೆಸಗಿ ಆರೋಪಿ ಮಹಿಳೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ರಾಷ್ಟ್ರ ರಾಜಧಾನಿಯ ಮಾದರಿಯಲ್ಲಿ ಕೊಲೆ ನಡೆದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಬಳಿಕ ವಾರ್ಡ್‌ರೋಬ್‌ನಲ್ಲಿ ಅಜ್ಜಿಯ ಮೃತದೇಹವನ್ನು ಸುತ್ತಿಟ್ಟು ಮಹಿಳೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಅಜ್ಜಿ ಹಾಗೂ ಕುಟುಂಬ ವಾಸ ಇದ್ದರು ಹಾಗೂ ನಾಲ್ಕನೇ ಮಹಡಿಯಲ್ಲಿ ಮುಸ್ಲಿಂ ಮಹಿಳೆ ಬಾಡಿಗೆಗೆ ಇದ್ದರು. 

Tap to resize

Latest Videos

ಇದನ್ನು ಓದಿ: CHITRDURGA: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿರುವ ಶಂಕೆ

ಕಳೆದ 3 ದಿನಗಳ ಹಿಂದೆ ಅಜ್ಜಿಯನ್ನು ಮುಸ್ಲಿಂ ಮಹಿಳೆ ಮನೆಗೆ ಕರೆದಿದ್ದರು. ಬಳಿಕ ಅಜ್ಜಿಯನ್ನು ಹುಡುಕಾಡಿದ್ದರೂ ಸಹ ಮನೆಯವರಿಗೆ ಆಕೆ ಸಿಕ್ಕಿರಲಿಲ್ಲ. ಇನ್ನು, ಕೊಲೆ ಮಾಡಿ ಒಂದು ದಿನದ ಬಳಿಕ ಮುಸ್ಲಿಂ ಮಹಿಳೆ ಮನೆಯಿಂದ ಎಸ್ಕೇಪ್ ಆಗಿದ್ದು, ಅಜ್ಜಿ ಹಾಗೂ ಆರೋಪಿ ಮಹಿಳೆ ಇಬ್ಬರೂ ಕಾಣದ ಹಿನ್ನೆಲೆ ಅಜ್ಜಿಯ ಮನೆಯವರು ಮುಸ್ಲಿಂ ಮಹಿಳೆ ವಾಸವಿದ್ದ ಮನೆಯ ಬೀಗ ತೆಗೆಸಿದ್ದಾರೆ. 

ಆ ಮನೆಯ ಬೀಗ ತೆಗೆಸಿದಾಗ ಅಜ್ಜಿಯ ಮೃತದೇಹವನ್ನು ಪ್ಯಾಕ್ ಮಾಡಿ ವಾರ್ಡ್‌ರೋಬ್‌ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದ್ದು, ನಂತರ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ದೌಡಾಯಿಸಿದ್ದಾರೆ. 

ಇದನ್ನೂ ಓದಿ: Belagavi: ಪತ್ನಿಯೊಂದಿಗೆ ಅಕ್ರಮ ಸಂಬಂಧ ಸಂಶಯಕ್ಕೆ ಅಣ್ಣನನ್ನೇ ಕೊಂದ ತಮ್ಮ

ಘಟನೆಯ ವಿವರ:

ಡಿಸೆಂಬರ್ 2 ರಂದು 80 ವರ್ಷದ ಪಾರ್ವತಮ್ಮ ಕಾಣೆಯಾಗಿದ್ದರು. 9 ತಿಂಗಳಿಂದ ಅಜ್ಜಿಯ ಕುಟುಂಬವು ಅದೇ ಮನೆಯಲ್ಲಿ ವಾಸವಾಗಿತ್ತು. ಮೂಲತಃ ತುಮಕೂರು ಜಿಲ್ಲೆಯ ಶಿರಾ ಮೂಲದ ಅಜ್ಜಿ ಪಾರ್ವತಮ್ಮ ತನ್ನ ಮಗ ರಮೇಶ್ ಹಾಗೂ ಸೊಸೆ ಜ್ಯೋತಿ ಜತೆಗೆ ಆನೇಕಲ್‌ ಬಳಿಯ ನೆರಳೂರಿಗೆ ಬಾಡಿಗೆಗೆ ಬಂದಿದ್ದರು.

ಶುಕ್ರವಾರ ಟ್ಯೂಷನ್‌ನಿಂದ ಮಕ್ಕಳನ್ನು ಕರೆದುಕೊಂಡು ಬರಲು ಸೊಸೆ ಜ್ಯೋತಿ ಹೊರಗೆ ಹೋಗಿದ್ದರು. ನಂತರ ಅವರು ಹೊರಗೆ ಹೋಗುವುದನ್ನು ನೋಡಿದ ಮುಸ್ಲಿಂ ಮಹಿಳೆ ಅಜ್ಜಿಯನ್ನು ತನ್ನ ಮನೆಗೆ ಕರೆದು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಜ್ಜಿ ಮೈ ಮೇಲೆ ಸಾಕಷ್ಟು ಚಿನ್ನ ಇರುವುದಾಗಿ ಮಾಹಿತಿ ಇದ್ದು, ಈ ಹಿನ್ನೆಲೆ ಪಾರ್ವತಮ್ಮನವರನ್ನು ಕೊಲೆ ಮಾಡಿ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇನ್ನು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. 

ಇದನ್ನೂ ಓದಿ: Vijayapura: ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಬ್ಬರು ಸಾವು

ಈ ಘಟನೆ ಬಗ್ಗೆ ಮನೆ ಮಾಲೀಕ ಅಂಬರೀಶ್‌ ಸಹ ಮಾಹಿತಿ ನೀಡಿದ್ದು, ನಾನು ಆರೋಪಿ ಮುಸ್ಲಿಂ ಮಹಿಳೆ ಪಾಯಲ್‌ ಖಾನ್‌ ಅವರನ್ನು 3 - 4 ಬಾರಿ ನೋಡಿದ್ದೆ. ಅವರು 8 ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದರು. ಅವರು ಕೆಳಗಡೆಯ ಮನೆಯ ಮೂಲಕವೇ ಬಾಡಿಗೆಯನ್ನು ನೀಡುತ್ತಿದ್ದರು ಹಾಗೂ ಒಬ್ಬರೇ ವಾಸವಾಗಿದ್ದರು.

ಆದರೆ, ಕಳೆದ ತಿಂಗಳು ಅಣ್ಣನಿಗೆ ಅಪಘಾತವಾಗಿದೆ, ಈ ತಿಂಗಳ ಬಾಡಿಗೆಯನ್ನು ಮುಂದಿನ ತಿಂಗಳು ಸೇರಿಸಿ ಕೊಡುತ್ತೇನೆ ಎಂದಿದ್ದರು. ಇನ್ನೊಂದೆಡೆ, ಅಜ್ಜಿಯ ಕುಟುಂಬದವರು ಸಹ 10 ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದರು. ಅಜ್ಜಿ ಕೊಲೆಯಾಗಿರುವ ಬಗ್ಗೆ ಇವತ್ತು ಮಾಹಿತಿ ತಿಳಿದುಬಂದಿದೆ. ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿತ್ತು ಎಂದು ಮನೆಯ ಮಾಲೀಕ ಅಂಬರೀಶ್‌ ಹೇಳಿದ್ದಾರೆ. 

ಇದನ್ನೂ ಓದಿ: ಆಸ್ತಿ ಮತ್ತು ಪ್ರೇಮಿಗಾಗಿ ಗಂಡನಿಗೆ ಸ್ಲೋ ಪಾಯಿಸನ್ ಹಾಕಿ ಕೊಂದ ಪತ್ನಿ ಅರೆಸ್ಟ್!

click me!