Bengaluru Crime News: ಮಹಿಳೆ ಬೆದರಿಸಿ ಸರಗಳ್ಳತನ ಮಾಡಿದ್ದ ಗ್ಯಾಂಗ್ ಅರೆಸ್ಟ್

Published : Jul 02, 2022, 08:28 PM IST
Bengaluru Crime News: ಮಹಿಳೆ ಬೆದರಿಸಿ ಸರಗಳ್ಳತನ ಮಾಡಿದ್ದ ಗ್ಯಾಂಗ್ ಅರೆಸ್ಟ್

ಸಾರಾಂಶ

Bengaluru Crime News: ಅಮೃತಹಳ್ಳಿಯಲ್ಲಿ ಮಹಿಳೆಗೆ ಲಾಂಗ್ ತೋರಿಸಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವರದಿ: ಕಿರಣ್.ಕೆ.ಎನ್, ಬೆಂಗಳೂರು

ಬೆಂಗಳೂರು (ಜು. 02): ಅಮೃತಹಳ್ಳಿಯಲ್ಲಿ ಮಹಿಳೆಗೆ ಲಾಂಗ್ ತೋರಿಸಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜನಸಾಮಾನ್ಯರಿಗೆ ಉಪಟಳ ಕೊಟ್ಟು ಸೈ ಅನಿಸಿಕೊಳ್ಳೋಕೆ ಹೋದ ಗ್ಯಾಂಗ್ ಇದೀಗ ಬಾಣವಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಸಾದಿಕ್ ಅಲಿಯಾಸ್ ಕಾಲು,  ರಿಜ್ವಾನ್ ಮತ್ತೊಬ್ಬ ರೂಹಿಲ್ ಬಂಧಿತರು.

ನಗರದ ಬಾಣಸವಾಡಿ ಇನ್ಸ್ ಪೆಕ್ಟರ್ ಸಂತೋಷ್ ಅಂಡ್ ಟೀಮ್ ನೈಟ್ ನಾಕಾಬಂಧಿ ಹಾಕಿಕೊಂಡು ಎಚ್.ಆರ್.ಬಿ.ಆರ್ ಲೇಔಟ್ ಬಳಿ ಕಾಯುತ್ತಾ ಕೂತಿದ್ದರು. ಪ್ರತಿಯೊಂದು ವಾಹನವನ್ನ ತಪಾಸಣೆ ಮಾಡುತ್ತಿದ್ದ ವೇಳೆ  ಆರೋಪಿ ಸಾದಿಕ್ ಸಿಕ್ಕಿ ಬಿದಿದ್ದ. ಆರೋಪಿ ವಾಹನವನ್ನು ತಪಾಸಣೆ ಮಾಡುವ ವೇಳೆ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. 

ಈ ಬೆನ್ನಲ್ಲೇ  ಠಾಣೆಗೆ ಕರೆದೊಯ್ದು ರೈಟು ಲೆಫ್ಟ್ ತೆಗೆದುಕೊಳ್ತಿದ್ದಂತೆ ಸಾದಿಕ್ ತಾನು ಮಾಡಿದ ಅಪರಾಧ ಕೃತ್ಯವನ್ನ ಬಾಯ್ಬಿಡೋಕೆ ಶುರುಮಾಡಿದ್ದ. ಅಮೃತಹಳ್ಳಿ, ಯಲಹಂಕ, ಕೊಡಿಗೆಹಳ್ಳಿ ಸೇರಿದಂತೆ ನಾನಾ ಭಾಗದಲ್ಲಿ ಸರಗಳ್ಳತನ ಮಾಡಿರೋದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬಂದವ್ನು ಹೆಣವಾದ: ಸಣ್ಣಪುಟ್ಟ ಕಳ್ಳತನವೇ ಕೊಲೆಗೆ ಕಾರಣವಾಗಿಬಿಡ್ತಾ..?

ಸದ್ಯ ಆರೋಪಿಗಳನ್ನ ಬಂಧಿಸಿರೋ ಬಾಣಸವಾಡಿ ಪೊಲೀಸರು ಬಂಧಿತರಿಂದ 20 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನಾಭರಣ, 40 ಗ್ರಾಂ ಎಂಡಿಎಂಎ ಡ್ರಗ್ಸ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಸ್ಕೂಟರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಜನರ ಪಾಲಿಗೆ ದುಸ್ವಪ್ನವಾಗಿ ಕಾಡ್ತಿದ್ದ ಕಳ್ಳರು  ಜೈಲು ಸೇರಿದ್ದು ಬಾಣಸವಾಡಿ ಇನ್ಸ್ ಪೆಕ್ಟರ್ ಸಂತೋಷ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

ಒಂಟಿ ವೃದ್ದೆಯ ಬರ್ಬರ ಹತ್ಯೆ: ಚಿನ್ನಾಭರಣ ಕಳವು: ಇನ್ನು ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸ್ತಿರೋ ವೃದ್ದೆಯೊಬ್ಬಳ ಮನೆಗೆ ನುಗ್ಗಿದ್ದ ಹಂತಕರು ಮಾರಕಾಸ್ತ್ರಗಳಿಂದ ಆಕೆಯನ್ನ ಕೊಂದು ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಕದ್ದೊಯ್ದ ಘಟನೆ ಸಿ.ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ನ ವಿನಾಯಕ ನಗರದಲ್ಲಿ ನಡೆದಿದೆ. 75 ವರ್ಷದ ಯಶೋದಮ್ಮ ಎಂಬಾಕೆಯನ್ನ ಬರ್ಬರವಾಗಿ ಹತ್ಯೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.

ಹಲವು ವರ್ಷಗಳಿಂದ ವಿನಾಯಕನಗರದಲ್ಲಿ ವಾಸಿಸ್ತಿದ್ದ ಯಶೋದಮ್ಮಗೆ ಒಬ್ಬ ಮಗ ಮತ್ತು ಒಬ್ಬ ಮೊಮ್ಮಗ ಇದ್ದಾರೆ. ಅವರಿಬ್ರೂ ಬೇರೆಡೆ ವಾಸವಿದ್ರೆ ಈ ನಾಲ್ಕು ಫ್ಲೋರ್ ಬಿಲ್ಡಿಂಗ್ ಕೆಳಮಹಡಿಯಲ್ಲಿ ವೃದ್ದೆ ವಾಸಿಸುತ್ತಿದ್ದಾರೆ. ಹೀಗಿರೋವಾಗ ನಿನ್ನೆ ರಾತ್ರಿ  ಸರಿಸುಮಾರು 11.30ರ ಸುಮಾರಿಗೆ ಮನೆಗೆ ನುಗ್ಗಿದ್ದ ಹಂತಕರು ವೃದ್ದೆಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿಮದುವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಐನಾತಿ ಕಳ್ಳ ಅರೆಸ್ಟ್..!

ವೃದ್ಧೆ ಮೈಮೇಲಿದ್ದ ಚಿನ್ನದ ಸರ, ಚಿನ್ನದ ಬಳೆಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ರಾತ್ರಿ ಆಗಿರೋದ್ರಿಂದ ಯಾರಿಗೂ ಈ ಘಟನೆ ಅರಿವಿಗೆ ಬಂದಿಲ್ಲ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೇಲಿನ ಮಹಡಿಯಲ್ಲಿ ಬಾಡಿಗೆಯಿದ್ದ ವ್ಯಕ್ತಿ  ವೃದ್ದೆಯ ಶವ ನೋಡಿ ಶಾಕ್ ಆಗಿದ್ದು, ಕೂಡಲೆ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮನೆಯಲ್ಲಿ ಮತ್ತಷ್ಟು ಚಿನ್ನಾಭರಣ, ಹಣ ದೋಚಿಕೊಂಡು ಹೋಗಿರೋ ಶಂಕೆಯಿದೆ. ಸದ್ಯ ಸಿ.ಕೆ ಅಚ್ಚುಕಟ್ಟು ಪೊಲೀಸರು ತನಿಖೆ ಶುರು ಮಾಡಿದ್ದು ಹಂತಕರ ಪತ್ತೆಗೆ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ