Yadgir: ತಂದೆ ಸ್ಥಾನ ತುಂಬಿ ಪ್ರೀತಿಯಿಂದ ಬೆಳೆಸಿದ್ದ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮಂದಿರು..!

By Suvarna News  |  First Published Jul 2, 2022, 7:26 PM IST

* ಒಡಹುಟ್ಟಿದ ಅಣ್ಣನನ್ನು ಬರ್ಬರವಾಗಿ ಕೊಂದ ತಮ್ಮಂದಿರು..!
* ಹಣ, ಆಸ್ತಿ ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ಸಹೋದರರ ದ್ವೇಷ
* 10 ವರ್ಷದ ದ್ವೇಷಕ್ಕೆ ಬಿತ್ತು ಅಣ್ಣನ ಹೆಣ


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್.

ಯಾದಗಿರಿ, (ಜುಲೈ.02): ಆತ ಮೂವರು ತಮ್ಮಂದಿರ ಪಾಲಿಗೆ ತಂದೆ ಸ್ಥಾನ ತುಂಬಿದ್ದ. ಚಿಕ್ಕವನಾಗಿದ್ದಾಗ ತಂದೆಯನ್ನ ಕಳೆದುಕೊಂಡ ತಮ್ಮಂದಿರ ಜವಾಬ್ದಾರಿಯನ್ನ ಹೊತ್ತಿದ್ದ. ಸಾಲದ್ದಕ್ಕೆ ಒಳ್ಳೆ ಸ್ಥಾನಕ್ಕೆ ತಂದು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ತಮ್ಮಂದಿರಿಗೆ ಮಾಡಿದ್ದ. ಆದ್ರೆ ಇವತ್ತು ಅದೇ ಒಡ ಹುಟ್ಟಿದ್ದ ಇಬ್ಬರು ತಮ್ಮಂದಿರು ಅಣ್ಣನನ್ನು  ಕೊಚ್ಚಿ ಕೊಲೆ ಮಾಡಿದ್ದಾರೆ.

 ಹುಟ್ಟುತ್ತ ಸಹೋದರರು ಬೆಳೆಯುತ್ತ ದಾಯಾದಿಗಳು ಎಂಬ ಗಾದೆ ಮಾತಿನಂತೆ, ಅಣ್ಣ ಪಂಪಾಪತಿ ಮೂವರು ತಮ್ಮಂದಿರನ್ನು ಯಾವುದೇ ತೊಂದರೆ ಬರದ ರೀತಿಯಲ್ಲಿ ಬೆಳೆಸಿದ್ದ. ಈಗ ಒಡಹುಟ್ಟಿದ ಕಿರಾತಕ ಸಹೋದರರು ಸಾಕಿ ಬೆಳೆಸಿದ್ದ ಅಣ್ಣನನ್ನೇ ಕೊಂದಿದ್ದಾರೆ. ಅಣ್ಣನ ಹೆಂಡ್ತಿ ಮುಂದೆ ಗಂಡನ ನೆತ್ತರ ಹರಿಸಿ ದುಷ್ಕೃತ್ಯ ಮೆರೆದಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದ್ದು, ಈಡೀ ಸುರಪುರ ನಗರದಾದ್ಯಂತ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಕೊಲೆಯಾದ ವ್ಯಕ್ತಿ 45 ವರ್ಷದ ಪಂಪಾಪತಿ ಪತ್ತಾರ್. ಈ ಪಂಪಾಪತಿಯನ್ನ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಇದೆ ಪಂಪಾಪತಿಯ ತಮ್ಮಂದಿರಾದ ಗಂಗಾಧರ ಪತ್ತಾರ ಹಾಗೂ ಕಾಳಪ್ಪ ಪತ್ತಾರ್.  ಇದೇ ಇಬ್ಬರು ತಮ್ಮಂದಿರು ಒಡ ಹುಟ್ಟಿದ ಅಣ್ಣನನ್ನೇ ಕೊಚ್ಚಿ ಕೊಲೆ ಮಾಡಿದ್ದಾರೆ. ಮನೆಗೆ ನುಗ್ಗಿದ ಇಬ್ಬರು ಸಹೋದರರು ತಮ್ಮ ಅಣ್ಣನಿಗೆ ಮೆಚ್ಚಿನಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

Tap to resize

Latest Videos

undefined

ಮಗಳ ಸಂಸಾರ ಸರಿ ಮಾಡಲು ಬಂದವರು ಹೆಣವಾದ್ರು, ಅದೊಂದು ಮನೆಗಾಗಿ ನಾಲ್ವರನ್ನ ಕೊಂದುಬಿಟ್ಟ

ಹಣ, ಆಸ್ತಿ ಸರಿಯಾಗಿ ಹಂಚಿಕೆಯಾಗಿಲ್ಲ ಎಂಬ ದ್ವೇಷ
ತಂದೆ ಸ್ಥಾನದಲ್ಲಿ ನಿಂತು ತಮ್ಮಂದಿರನ್ನು ಸಾಕಿ, ಸಲುಹಿದ ಪಂಪಾಪತಿಯ ಕೊಲೆ ಮಾಡಿದ್ದಾರೂ ಯಾಕೆ ಎಂಬುದಕ್ಕೆ ಮೂಲ ಕಾರಣ ಹಣ, ಆಸ್ತಿ ಹಂಚಿಕೆಯಲ್ಲಿ ಮಹಾ ಮೋಸ ಆಗಿದೆ ಗಂಗಾಧರ ಹಾಗೂ ಕಾಳಪ್ಪನಿಗಿರುವ ದ್ವೇಷ. ಪಂಪಾಪತಿ ಪತ್ನಿ ಗಾಯಿತ್ರಿ ಮನೆಯಲ್ಲಿ ಇದ್ದಾಗ ನುಗ್ಗಿದ ಗಂಗಾಧರ ಹಾಗೂ ಕಾಳಪ್ಪ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಪಂಪಾಪತಿ ಹೆಂಡ್ತಿಯ ಕಣ್ಣು ಮುಂದೆಯೇ ಪ್ರಾಣ ಬಿಟ್ಟಿದ್ದಾರೆ. ಕೊಲೆಗೆ ಕಾರಣವೇ ಆಸ್ತಿಯಲ್ಲಿ ಪಾಲಾಗಿದೆ. ಪಂಪಾಪತಿ ಮನೆಯ ಹಿರಿಯ ಮಗ ಕಳೆದ ಎಂಟು ವರ್ಷಗಳ ಹಿಂದೆ ಮೂವರು ಸಹೋದರರು ಆಸ್ತಿಯಲ್ಲಿ ಪಾಲು ಮಾಡಿಕೊಂಡಿದ್ದಾರೆ. ಆದ್ರೆ ಆಸ್ತಿಯಲ್ಲಿ ಅಣ್ಣ ಸರಿಯಾಗಿ ಪಾಲು‌ ಮಾಡಿಕೊಟ್ಟಿಲ್ಲ ಅಂತ ಇಬ್ಬರು‌ ಕಿರಿಯ ಸಹೋದರರು ಸೇರಿ ಹಿರಿಯ ಸಹೋದರನಿಗೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಬೆಳೆಸಿದ ಅಣ್ಣನನ್ನೇ ಕೊಚ್ಚಿ ಹಾಕಿದ ಪಾಪಿ ತಮ್ಮಂದಿರು
ಪಂಪಾಪತಿ ಮನೆಯ ಹಿರಿಯ ಮಗ ಆದ್ರೆ ನಾಲ್ಕು ಮಂದಿ ಸಹೋದರರು ಚಿಕ್ಕವರಿದ್ದಾಗ ತಂದೆ ಮೃತ ಪಟ್ಟಿದ್ದಾರೆ. ತಂದೆ‌ ಅಗಲಿದ‌ ಬಳಿಕ ಮೂವರು ಕಿರಿಯ ಸಹೋದರರಾದ ಗಂಗಾಧರ, ಕಾಳಪ್ಪ‌ ಹಾಗೂ ಇನ್ನೊಬ್ಬ ಸಹೋದರರಿಗೆ  ಪಂಪಾಪತಿಯೇ ತಂದೆಯ ಸ್ಥಾನವನ್ನ ತುಂಬಿದ. ಮೂವರು ಸಹೋದರರಿಗೆ ಪಂಪಾಪತಿಯೇ ಒಳ್ಳಯೇ ಶಿಕ್ಷಣ ಕೊಡಿಸಿದ್ದ. ತಂದೆಯ ಕಾಲದಿಂದ ಇದ್ದ ಬಂಗಾರದ ಅಂಗಡಿ ಕೂಡ ಪಂಪಾಪತಿ ಇಬ್ಬರು ಸಹೋದರರಾದ ಗಂಗಾಧರ ಹಾಗೂ ಕಾಳಪ್ಪಗೆ ಬಿಟ್ಟು ಕೊಟ್ಟಿದ್ದ. ಇಬ್ಬರು ಸಹೋದರರಿಗೆ ಬಂಗಾರದ ಅಂಗಡಿ ಬಿಟ್ಟು ಕೊಟ್ಟಿದ್ದ. ಈ ಸಹೋದರರು ಮೂಲತಃ ಸುರಪುರ ತಾಲೂಕಿನ ಪೇಟ ಅಮ್ಮಾಪುರ ಗ್ರಾಮದ ನಿವಾಸಿಗಳು. ಇನ್ನೊಬ್ಬ ತಮ್ಮ ಗ್ರಾಮದಲ್ಲೇ ಇರ್ತಾಯಿದ್ದ.ಹೀಗಾಗಿ ಪಂಪಾಪತಿ ಮನೆಯಲ್ಲಿಯೇ ಅಕ್ಕ ಸಾಲಿಗ ಕೆಲಸವನ್ನ ಮಾಡಿಕೊಂಡು ಜೀವನ ಮಾಡ್ತಾಯಿದ್ದ.

ಇನ್ನು ಸಾಲದ್ದಕ್ಕೆ ಪಂಪಾಪತಿ ಪಂಚಾಯತಿಯಲ್ಲಿ ಕಾಂಟ್ರಾಕ್ಟರ್ ಕೆಲಸ ಕೂಡ ಮಾಡ್ತಾಯಿದ್ದ. ಆದ್ರೆ ಎಂಟು ವರ್ಷಗಳ ಹಿಂದೆ ನಾಲ್ಕು ಮಂದಿ ಸಹೋದರರು ಆಸ್ತಿಯಲ್ಲಿ ಪಾಲು ಕೂಡ ಆಗಿದ್ರು. ಆದ್ರೆ ಎಂಟು ವರ್ಷಗಳಿಂದ ಇಬ್ಬರು ಕಿರಿಯ ಸಹೋದರರು ಹಿರಿಯ ಅಣ್ಣನ ಮೇಲೆ ಸಿಟ್ಟು ಇಟ್ಟುಕೊಂಡಿದ್ರು. ಇದ್ದಕ್ಕೆ ಕಾರಣ ಅಂದ್ರೆ ತಂದೆಯ ಕಾಲದಿಂದ ಇದ್ದ ಮೂರ್ನಾಲ್ಕು ಎಕರೆ ಜಮೀನು ಸರಿಯಾಗಿ ಪಾಲು ಮಾಡಿರಲಿಲ್ವಂತೆ. ಇದೇ ಕಾರಣಕ್ಕೆ ಇಬ್ಬರು ಕಿರಿಯ ಸಹೋದರರು ಹಿರಿಯ ಅಣ್ಣನ ಮೇಲೆ ಕೊತ ಕೊತ ಕುದಿಯುತ್ತಿದ್ರು. ಎಂಟು ವರ್ಷಗಳಿಂದ ಇಬ್ಬರು ಸಹೋದರರು ಅಣ್ಣನ ಜೊತೆ ಜಗಳ ಮಾಡ್ತಾಯಿದ್ರು. ಆದ್ರೆ ಇವತ್ತು ಪಕ್ಕಾ ನಿರ್ಧಾರ ಮಾಡಿಯೇ ಅಣ್ಣನ ಕಥೆ ಮುಗಿಸಿದ್ದಾರೆ. ಅಣ್ಣನನ್ನ ಕೊಚ್ಚಿ ಕೊಲೆ ಮಾಡಿ ಇಬ್ಬರು ಪಾಪಿ ಸಹೋದರರು ಸ್ಥಳದಿಂದ ಪರಾರಿಯಾಗಿದ್ದಾರೆ. 

ಆರೋಪಿಗಳಿಗಾಗಿ ಬಲೆ ಬೀಸಿದ ಪೋಲಿಸ್ರು
ಕೊಲೆ ನಡೆದ ಸ್ಥಳಕ್ಕೆ ಬಂದ ಸುರಪುರ ಪಿಐ ಸುನೀಲ್ ಮೂಲಿಮನಿ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಸಿಕೊಂಡಿದ್ದಾರೆ. ಇನ್ನು ಕೊಲೆ ಮಾಡಿ ಪರಾರಿಯಾಗಿರುವ ಇಬ್ಬರು ಆರೋಪಿಗಳಾಗಿ ಶೋಧ ನಡೆಸಿದ್ದು, ಪೊಲೀಸರು ಇಬ್ಬರು ಪಾಪಿಗಳನ್ನ ಅರೆಸ್ಟ್ ಮಾಡಿ ತಕ್ಕ ಶಿಕ್ಷೆ ಕೊಡಿಸಬೇಕಾಗಿದೆ.

click me!