ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ಸೋಗಲ್ಲಿ ಕರೆ; ₹1.81 ಲಕ್ಷ ಎಗರಿಸಿದ ಖದೀಮರು!

By Ravi JanekalFirst Published Apr 23, 2023, 10:42 AM IST
Highlights

ಆನ್‌ಲೈನ್ ವಂಚನೆ ಕುರಿತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಗ್ರಾಹಕರು ದಿನನಿತ್ಯ ಮೋಸಹೋಗುತ್ತಲೇ ಇದ್ದಾರೆ ಎಂಬುದಕ್ಕೆ ಮತ್ತೊಂದು ವಂಚನೆ ಪ್ರಕರಣ ಸಾಕ್ಷಿಯಾಗಿದೆ.

ಶಿವಮೊಗ್ಗ (ಏ.23) : ಆನ್‌ಲೈನ್ ವಂಚನೆ ಕುರಿತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಗ್ರಾಹಕರು ದಿನನಿತ್ಯ ಮೋಸಹೋಗುತ್ತಲೇ ಇದ್ದಾರೆ ಎಂಬುದಕ್ಕೆ ಮತ್ತೊಂದು ವಂಚನೆ ಪ್ರಕರಣ ಸಾಕ್ಷಿಯಾಗಿದೆ.

ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಕರೆ ಮಾಡಿ 1.81 ಲಕ್ಷ ರೂ. ದೋಚಿರುವ ಘಟನೆ ಹೊಸನಗರದಲ್ಲಿ ನಡೆದಿದೆ.

ಗ್ರಾಹಕನಿಗೆ ಕರೆ ಮಾಡಿರುವ ಖದೀಮರು, ಬ್ಯಾಂಕ್‌ನ ಉಳಿತಾಯ ಖಾತೆಗೆ 24 ಗಂಟೆಯೊಳಗೆ ದಾಖಲೆ ಅಪ್‌ಲೋಡ್ ಮಾಡದಿದ್ದರೆ ಖಾತೆ ನಿಷ್ಕ್ರಿಯವಾಗಲಿದೆ ಎಂಬ ಮೊಬೈಲ್ ಸಂದೇಶವನ್ನೂ ಕಳಿಸಿದ್ದಾರೆ.  ಮೊಬೈಲ್‌ ಗೆ ಬಂದ ಸಂದೇಶ ಇದನ್ನು ನೋಡಿದ ಹೊಸನಗರದ ವ್ಯಕ್ತಿಯೊಬ್ಬರು ಮೆಸೇಜ್‌ನೊಂದಿಗೆ ಕಳಿಸಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ.

ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ 

ಅತ್ತಕಡೆಯಿಂದ ಕರೆ ಸ್ವೀಕರಿಸಿದ ಖದೀಮ ತಾನು ಕೆನರಾ ಬ್ಯಾಂಕ್‌ ಮ್ಯಾನೇಜರ್ ಇದ್ದು ಕೆವೈಸಿ ಅಪ್‌ಡೇಟ್ ಮಾಡುವಂತೆ ಹೇಳಿದ್ದಾನೆ. ಇದನ್ನು ನಂಬಿದ ಹೊಸನಗರದ ವ್ಯಕ್ತಿ,  ಖದೀಮರಿಗೆ ಬ್ಯಾಂಕ್ ಖಾತೆ ವಿವರ, ಕಸ್ಟಮರ್ ಐಡಿ, ಎಂಟಿಎಂ ಕಾರ್ಡ್‌ ನಂಬರ್‌ ನೀಡಿದ್ದಾನೆ. ಬಳಿಕ ಒಟಿಪಿ ಪಡೆದು 95,800, 50 ಸಾವಿರ ಮತ್ತ 32,600 ರೂ. ಹಂತ ಹಂತವಾಗಿ ಡ್ರಾ ಮಾಡಿಕೊಂಡಿರುವ ಖದೀಮರು. 

ಈ ಬಗ್ಗೆ ಅನುಮಾನಗೊಂಡು ಪರಿಚಯಸ್ಥರ ಬಳಿ ವಿಚಾರಿಸಿದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ.  ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ

ಇನ್‌ಸ್ಟಾಗ್ರಾಂ ಮೂಲಕ ಬಟ್ಟೆಆರ್ಡರ್‌: ಹೊಸ ವಂಚನೆ ದೂರು

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಬಟ್ಟೆಆರ್ಡರ್‌ ಮಾಡಿದ ವ್ಯಕ್ತಿಯೊಬ್ಬರ ಖಾತೆಯಿಂದ 80,560 ರು.ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಕೇಸ್‌: ಫ್ರೀಡಂ ಆ್ಯಪ್‌ ಸಿಇಒ ಸುಧೀರ್‌ ಬಂಧನ

ದೂರುದಾರ ವ್ಯಕ್ತಿ ಮಾ.22ರಂದು ಇನ್‌ಸ್ಟಾಗ್ರಾಂ ಖಾತೆ(Instagram account)ಯಲ್ಲಿ ಬಟ್ಟೆಯೊಂದನ್ನು ಆರ್ಡರ್‌ ಮಾಡಿದ್ದರು. ಹಲವು ದಿನ ಕಳೆದರೂ ಪಾರ್ಸೆಲ್‌ ಮನೆಗೆ ಬಂದಿರಲಿಲ್ಲ. ಏ.18ರಂದು ಬೆಳಗ್ಗೆ 10ಕ್ಕೆ ಮೊಬೈಲ್‌ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪಾರ್ಸೆಲ್‌ ಬರುತ್ತದೆ ಎಂದು ತಿಳಿಸಿದ್ದ. ಮರುದಿನ ಬೆಳಗ್ಗೆ ದೂರುದಾರ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪಾರ್ಸೆಲ್‌ ಟ್ರ್ಯಾಕ್‌ ಕಳುಹಿಸುವುದಾಗಿ ಹೇಳಿ ಲಿಂಕ್‌ ಕಳುಹಿಸಿದ್ದ. ದೂರುದಾರ ವ್ಯಕ್ತಿ ಅದನ್ನು ಕ್ಲಿಕ್‌ ಮಾಡಿದ್ದರು. ಅಂದು ಸಂಜೆ ಅವರ ಖಾತೆಯಿಂದ ಹಂತ ಹಂತವಾಗಿ 50 ಸಾವಿರ ರು. ಮತ್ತು 30,560 ರು. ಸೇರಿದಂತೆ ಒಟ್ಟು 80,560 ರು. ಕಡಿತವಾಗಿದೆ. ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಅಪರಿಚಿತರು ಮೋಸದಿಂದ ಹಣ ವರ್ಗಾಯಿಸಿರುವುದು ಗೊತ್ತಾಗಿದೆ.

click me!