ದಾವಣಗೆರೆ: ಈಗ ಎಲ್ಲವೂ ಡಿಜಿಟಲ್‌, ಫೋನ್ ಪೇ ಮೂಲಕ ಲಂಚ ತಗೊಂಡು ತಗ್ಲಾಕೊಂಡ ಪೊಲೀಸಪ್ಪ..!

By Girish GoudarFirst Published Apr 22, 2023, 8:10 PM IST
Highlights

ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಶಿವನಗೌಡ ಹಾಗೂ ಲಿಂಗರಾಜ ನಾಯ್ಕ ಸಿಪಿಸಿ-289 ಲಂಚದ ಹಣವನ್ನ ಫೋನ್ ಪೇ ಮೂಲಕ ಸ್ವೀಕರಿಸಿ ಲೋಕಾಯುಕ್ತರಿಂದ ಬಂಧನವಾಗಿದ್ದಾರೆ.

ವರದಿ: ವರದರಾಜ್ 

ದಾವಣಗೆರೆ(ಏ.22): ಒಂದು ಕಾಲದಲ್ಲಿ ಟೇಬಲ್ ಕೆಳಗೆ ಲಂಚ ಕೇಳುವುದು ಸಾಮಾನ್ಯವಾಗಿತ್ತು. ಇದೀಗ ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವ ವಿಧಾನ ಬದಲಾಗಿದೆ. ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ ತೆಗೆದುಕೊಂಡು ಪೊಲೀಸ್ ಸಬ್ ಇನ್ಸಪೆಕ್ಟರ್ ಲೋಕಾಯುಕ್ತರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಶಿವನಗೌಡ ಹಾಗೂ ಲಿಂಗರಾಜ ನಾಯ್ಕ ಸಿಪಿಸಿ-289 ಲಂಚದ ಹಣವನ್ನ ಫೋನ್ ಪೇ ಮೂಲಕ ಸ್ವೀಕರಿಸಿ ಲೋಕಾಯುಕ್ತರಿಂದ ಬಂಧನವಾಗಿದ್ದಾರೆ.
ರಂಗಸ್ವಾಮಿ ತಂದೆ ಲೇಟ್ ಕೃಷ್ಣಮೂರ್ತಿ ವಾಸ.ತಾಳೆ ಕಟ್ಟೆ ಗ್ರಾಮ, ಹೊಳಲ್ಕೆರೆ ತಾಲೂಕಿನ ಚಿತ್ರದುರ್ಗ ಜಿಲ್ಲಾ ಇವರಿಗೆ ಮಹಿಳೆ ಕಾಣೆ ಪ್ರಕರಣದಲ್ಲಿ ಸಹಾಯ ಮಾಡಿ ಕಾಣೆಯಾದ ಮಹಿಳೆಯನ್ನು ದೂರುದಾರನ ಜೊತೆಗೆ ಕಳಿಸಿಕೊಡಲು ಪಿಎಸ್‌ಐ ರೂ.50,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. 

ಗದಗ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಏಜೆಂಟ್‌, ಕಂದಾಯ ನಿರೀಕ್ಷಕ ಪರಾರಿ..!

ಕೆ.ರಂಗಸ್ವಾಮಿ ತಂದೆ ಲೇಟ್ ಕೃಷ್ಣಮೂರ್ತಿ ರವರು ಲಂಚದ ಹಣ ನೀಡಲಾಗದೆ ದಾವಣಗೆರೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಲಂಚದ ಹಣವನ್ನು ನೀಡಲು ಇಷ್ಟ ಇಲ್ಲದೆ ದಾವಣಗೆರೆ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ನಂತರ ಆರೋಪಿತರು ಲಂಚದ ಹಣವನ್ನು ಸ್ವೀಕರಿಸದೇ ಫೊನ್ ಪೇ ಮಾಡುವಂತೆ ಹೇಳಿ ತನ್ನ ಮೊಬೈಲ್ ನಂಬರ ಕೊಟ್ಟು ಈ ನಂಬರ್‌ಗೆ ಫೋನ್ ಪೇ ಮಾಡುವಂತೆ ಹೇಳಿದ್ದಾರೆ. ದೂರುದಾರ ನನ್ನ ಹತ್ತಿರ ಫೋನ್ ಪೇ ಇಲ್ಲ ನಮ್ಮ ಸಾಹುಕಾರ ಕಡೆಯಿಂದ ಫೋನ್ ಫೇ ಮಾಡಿಸುತ್ತೇನೆ ಅಂತಾ ಹೇಳಿ ಇಂದು ದಿನಾಂಕ :- 22/04/2013 ರಂದು ಬೆಳಿಗ್ಗೆ ಇಬ್ಬರಿಗೂ ಫೋನ್ ಪೇ ಮಾಡಿದ್ದು ಅದನ್ನು ಇಬ್ಬರೂ ಸ್ವೀಕರಿಸಿದ್ದಾರೆ. ಫೋನ್ ಪೇ ಮೂಲಕ 50,000/- ಲಂಚದ ಹಣ ಪಡೆದಿದ್ದು ಈ ಬಗ್ಗೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ ಕೌಲಾಪುರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ತನಿಖೆ ಮುಂದುವರೆದಿದೆ.

click me!