
ನವದೆಹಲಿ (ಜು.11): ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 11ನೇ ತರಗತಿ ವಿದ್ಯಾರ್ಥಿನಿಯನ್ನು ನಟ್ಟ ನಡು ರಸ್ತೆಯಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಬುಧವಾರ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳಬೇಕಿದ್ದ ಆಕೆ, ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಫ್ರೆಂಡ್ ಜೊತೆ ಶಾಪಿಂಗ್ ಮುಗಿಸಿಕೊಂಡು ಆಕ್ಟೀವಾದಲ್ಲಿ ಬರುತ್ತಿದ್ದಳು. ಸಿಂಧಿ ಕಾಲೋನಿಯಲ್ಲಿ ಮುಖ್ಯರಸ್ತೆಯಲ್ಲಿ ಇವರಿಬ್ಬರು ಬರುತ್ತಿರುವಾಗ ಬೈಕ್‌ನಲ್ಲಿ ಬಂದ ಹಂತಕರು ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಒಬ್ಬಳು ಹುಡುಗಯ ಎದೆ ಹಾಗೂ ಕೈಗೆ ಗುಂಡು ತಗುಲಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದಾಳೆ. ಸಾವು ಕಂಡಾಕೆಯನ್ನು ಮಧ್ಯಪ್ರದೇಶದ ಮಾಜಿ ಡಿಜಿಪಿ ಸುರೇಂದ್ರ ಸಿಂಗ್ ಯಾದವ್ ಅವರ ಮೊಮ್ಮಗಳು ಅಕ್ಷಯಾ ಯಾದವ್ ಎಂದು ಹೇಳಲಾಗಿದೆ. ಬೈಕ್‌ನಲ್ಲಿ ಮೂರರಿಂದ ನಾಲ್ಕು ಮಂದಿ ಹಂತಕರು ಇದ್ದರು ಎಂದು ಹೇಳಲಾಗಿದೆ. ಕೆಲವೊಂದು ವರದಿಗಳ ಪ್ರಕಾರ, ದುಷ್ಕರ್ಮಿಗಳು ಅಕ್ಷಯಾ ಯಾದವ್‌ಳ ಜೊತೆಯಲ್ಲಿ ಇದ್ದ ಸ್ನೇಹಿತೆ ಸೋನಾಕ್ಷಿಯನ್ನು ಕೊಲ್ಲಲು ಬಯಸಿದ್ದರು. ಆದರೆ, ಗುಂಡು ಆಕೆಯ ಬದಲು ಅಕ್ಷಯಾ ಯಾದವ್‌ಳ ಎದೆಗೆ ಹೊಕ್ಕಿದೆ. ಇನ್ನು ಪೊಲೀಸರು ಸುಮಿತ್ ರಾವತ್ ಹಾಗೂ ಆತನ ಸಹಚರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದಿಂದಲೂ ಸುಮಿತ್ ಇಬ್ಬರಿಗೂ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ಅಕ್ಷಯಾ ಯಾದವ್ 19 ವರ್ಷದವಳಾಗಿದ್ದು, ಗ್ವಾಲಿಯರ್‌ನ ಮಧುಗಂಜ್ ಪ್ರದೇಶದ ನಿವಾಸಿ. ಪೊಲೀಸರ ಪ್ರಕಾರ ಮೂವರು ಯುವಕರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಒಂದೇ ಬೈಕ್‌ನಲ್ಲಿ ಬಂದಿದ್ದ ಈ ಮೂವರು ಶೂಟ್ ಮಾಡಿ ಪರಾರಿಯಾಗಿದ್ದಾರೆ. ಇದರಲ್ಲಿ ಒಬ್ಬ ಸುಮಿತ್ ರಾವತ್ ಆಗಿರಬಹುದು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಈತ ಸೋನಾಕ್ಷಿಯನ್ನು ಪೀಡಿಸುತ್ತಿದ್ದ. ಇಲ್ಲಿಯವರೆಗಿನ ತನಿಖೆಯ ಪ್ರಕಾರ ಆರೋಪಿಯಾಗಿರುವ ಸುಮಿತ್, ಸೋನಾಕ್ಷಿಯನ್ನು ಸಾಯಿಸಲು ಬಯಸಿದ್ದ. ಸೋನಾಕ್ಷಿ ಹಾಗೂ ಅಕ್ಷಯಾ ಇಬ್ಬರೂ ಆತ್ಮೀಯ ಗೆಳತಿಯರು. ಇಬ್ಬರೂ ಸೋಮವಾರ ರಾತ್ರಿ ಒಂದೇ ಸ್ಕೂಟರ್‌ನಲ್ಲಿ ಪ್ರಯಾಣ ಮಾಡುವ ವೇಳೆ, ಬೈಕ್‌ನಲ್ಲಿ ಬೆನ್ನಟ್ಟಿ ಬಂದ ಸುಮಿತ್ ರಾವತ್ ಗ್ಯಾಂಗ್, ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಅಕ್ಷಯಾ ಯಾದವ್‌ಳ ಎದೆ ಹಾಗೂ ಕೈಗೆ ಗುಂಡು ತಾಕಿದೆ.
ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಬೆನ್ನಲ್ಲಿಯೇ ಆರೋಪಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಕ್ಷಯಾಯಾ ಯಾದವ್‌ಳನ್ನು ಸ್ಥಳೀಯ ಜೈರೋಗ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆ ವೇಳೆಗಾಗಲೇ ಆಕೆ ಸಾವು ಕಂಡಿದ್ದರು. ಡಿಜಿಪಿಯ ಮೊಮ್ಮಗಳನ್ನೇ ಕೊಂದಿದ್ದಾರೆ ಎನ್ನುವ ಸುದ್ದಿ ಗೊತ್ತಾದ ಬೆನ್ನಲ್ಲಿಯೇ ಪೊಲೀಸರು ತಕ್ಷಣವೇ ತನಿಖೆ ಪ್ರಾರಂಭ ಮಾಡಿದ್ದಾರೆ. ಇಡೀ ಪ್ರದೇಶವನ್ನು ಸೀಲ್ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ. ಸೋನಾಕ್ಷಿಯ ಹೇಳಿಕೆಗಳನ್ನು ಪಡೆದು, ಪೊಲೀಸರು ಅಪರಾಧಿಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.
ಆಸ್ತಿಗಾಗಿ ಬಿಹಾರದಲ್ಲಿ ಭೀಕರ ಕ್ರೌರ್ಯ, ಮಹಿಳೆಯ ಸ್ತನಗಳ ಕೊಯ್ದು, ಕಣ್ಣು ಕಿತ್ತು ಕೊಲೆ!
ಜುಲೈ 12ರಂದು ತನ್ನ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಅಕ್ಷಯಾ ಯಾದವ್ ಅದಕ್ಕಾಗಿ ಶಾಪಿಂಗ್‌ಗೆ ಹೋಗಿದ್ದರು. ಮರಳಿ ಬರುವಾಗ ಈ ಘಟನೆ ನಡೆದಿದೆ. ಅವರ ಇಡೀ ಕುಡುಂಬ ಗ್ವಾಲಿಯರ್‌ನ ಸಿಕಂದರ್ ಕಂಪು ಪ್ರದೇಶದಲ್ಲಿ ನೆಲೆಸಿದೆ. ಅಕ್ಷಯಾ ಯಾದವ್ ತಂದೆ ಶೈಲೇಂದ್ರ ಸಿಂಗ್ ಯಾದವ್. ಇನ್ನು ಅಕ್ಷಯಾ ಗೆಳತಿಯಾಗಿರುವ ಸೋನಾಕ್ಷಿ ಶರ್ಮ ಕೂಡ ಪಕ್ಕದಲ್ಲಿಯೇ ವಾಸಿಸುತ್ತಿದ್ದಾರೆ. ಶಾಪಿಂಗ್ ಮಾಡಿ ವಾಪಾಸ್ ಬರುವಾಗ ಈ ಘಟನೆ ನಡೆದಿದೆ. ಅಕ್ಷಯಾ ಯಾದವ್ ಸ್ಕೂಟಿ ರೈಡ್ ಮಾಡುತ್ತಿದ್ದರೆ, ಸೋನಾಕ್ಷಿ ಹಿಂದೆ ಕುಳಿತಿದ್ದಳು.
ವಿಚಿತ್ರ ಪ್ರಕರಣ: ಅಪಘಾತದ ಪರಿಹಾರಕ್ಕಾಗಿ 2 ಟನ್ ಟೊಮೆಟೋ ಕಳವು!
ಇನ್ನು ಸುಮಿತ್ ರಾವತ್ ದೀರ್ಘಕಾಲದಿಂದ ಇವರನ್ನು ಹಿಂಬಾಲಿಸುತ್ತಿದ್ದ. ತಿಲಕ್ ನಗರ ಇಂಟರ್‌ಸೆಕ್ಷನ್ ಬಳಿ ಬಂದ ಬೆನ್ನಲ್ಲಿಯೇ ಇವರ ಮೇಲೆ ಶೂಟ್ ಮಾಡಿದ್ದಾರೆ. ಮೊದಲ ಗುಂಡು ಅಕ್ಷಯಾಳ ಕೈಗೆ ತಾಗಿದ್ದರೆ, 2ನೇ ಗುಂಡು ಎದೆಗೆ ನುಗ್ಗಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ