ಗರ್ಲ್‌ಫ್ರೆಂಡ್ ಶಾಪಿಂಗ್ ಖರ್ಚಿಗಾಗಿ ಕಾರು ಬಿಡಿಭಾಗ ಕಳ್ಳತನ, ಗೆಳತಿ ಜೊತೆಗಿರುವಾಗಲೇ ಬಂಧನ!

Published : Jul 11, 2023, 05:16 PM IST
ಗರ್ಲ್‌ಫ್ರೆಂಡ್ ಶಾಪಿಂಗ್ ಖರ್ಚಿಗಾಗಿ ಕಾರು ಬಿಡಿಭಾಗ ಕಳ್ಳತನ, ಗೆಳತಿ ಜೊತೆಗಿರುವಾಗಲೇ ಬಂಧನ!

ಸಾರಾಂಶ

ಹೆಸರು ಮೊಹ್ಸಿನ್ ಮೆಹಬೂಬ್ ಶೇಕ್. ರಾಯಲ್ ಮನೆಯ ಹುಡುಗಿಯನ್ನೇ ಪಟಾಯಿಸಿದ್ದ ಮೆಹಬೂಬ್ ಆಕೆ ಬಳಿ ತಾನು ಬ್ಯೂಸಿನೆಸ್ ಮ್ಯಾನ್ ಎಂದಿದ್ದ. ಇತ್ತ ಗರ್ಲ್‌ಫ್ರೆಂಡ್‌ಗೆ ಶಾಪಿಂಗ್ ಅಂದರೆ ಪಂಚ ಪ್ರಾಣ. ನೆಟ್ಟಗೆ ಸಂಪಾದಿಸಿದ ಒಂದೂ ರೂಪಾಯಿ ಈತನ ಬಳಿ ಇಲ್ಲ. ಆದರೆ ಗೆಳತಿಯ ದುಬಾರಿ ಲೈಫ್‌ಸ್ಟೈಲ್‌ಗೆ ಈತನ ಕಳ್ಳತನ ಕೂಡ ದುಪ್ಪಟ್ಟಾಗಿದೆ. ಪರಿಣಾಮ ಗೆಳತಿ ಪಕ್ಕದಲ್ಲಿರುವಾಗಲೇ ಅರೆಸ್ಟ್ ಆಗಿದ್ದಾನೆ.  

ಮುಂಬೈ(ಜು.11)  ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡುವುದು, ಶಾಪಿಂಗ್, ಪಾರ್ಲರ್‌ನಲ್ಲಿ ಹರಟೆ ಹೊಡೆಯುವುದು ಹೊಸದೇನಲ್ಲ. ಹಲವು ಬಾರಿ ಹದ್ದು ಮೀರಿ ಎಡವಟ್ಟಾದ ಉದಾಹರಣೆಗಳು ಇದೆ. ಇನ್ನೂ ಕೆಲವರು ಗೆಳತಿಗಾಗಿ ಕಳ್ಳತನಕ್ಕೆ ಇಳಿದ ಘಟನೆಗಳು ಸಾಕಷ್ಟಿದೆ. ಇದೀಗ ಮುಂಬೈನ ಪೂರ್ವ ಮಲಾಡ್‌ನ 28ರ ಹರೆಯಗ ಮೊಹ್ಸಿನ್ ಮೆಹಬೂಬ್ ಶೇಕ್ ಇದೇ ರೀತಿ ಗೆಳತಿಯ ದುಬಾರಿ ಲೈಫ್‌ಸ್ಟೈಲ್, ಶಾಪಿಂಗ್‌ಗಾಗಿ ಕಾರಿನ ಬಿಡಿ ಭಾಗ ಕಳ್ಳತನಕ್ಕೆ ಇಳಿದು ಪೊಲೀಸರ ಅತಿಥಿಯಾಗಿದ್ದಾನೆ. ಈತ ಗೆಳತಿ ಜೊತೆ ಸುತ್ತಾಡುತ್ತಿರುವಾಗಲೇ ಮೆಹಬೂಬ್ ಬಂಧನವಾಗಿದೆ.

ಮೊಹ್ಸಿನ್ ಮೆಹಬೂಬ್ ಶೇಕ್‌ ತಾನೊಬ್ಬ ಯುವ ಉದ್ಯಮಿ ಎಂದು ಫೋಸ್ ಕೊಟ್ಟು ಹುಡುಗಿಯನ್ನು ಪಟಾಯಿಸಿದ್ದ. ಆಕೆಗೆ ಶಾಪಿಂಗ್ ಎಂದರೆ ಪಂಚಪ್ರಾಣ. ಜೊತೆಗೆ ಜಾಲಿ ರೈಡ್, ಸುತ್ತಾಟ, ಹೊಟೆಲ್‌ನಲ್ಲಿ ವಿಶೇಷ ಖಾದ್ಯ ಸವಿಯುವುದೇ ಹೆಚ್ಚು ಇಷ್ಟ. ಆದರೆ ಮೆಹಬೂಬ್ ಶೇಕ್ ಬಳಿ ಒಂದು ರೂಪಾಯಿಯೂ ಇಲ್ಲ. ಮೊದಲೇ ಸಣ್ಣ ಪುಟ್ಟ ಕಳ್ಳತನ ಮಾಡಿ ಶೋಕಿ ಜೀವನ ನಡೆಸುತ್ತಿದ್ದ. ಇದೀಗ ಗೆಳೆತಿಯ ಶಾಪಿಂಗ್ ಖರ್ಚು ನೋಡುವುದು ಸವಾಲಾಗಿತ್ತು.

ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ: ಬೈಕ್‌ ಸವಾರರ ಪೀಕಲಾಟ..!

ಹೀಗಾಗಿ ನಿಲ್ಲಿಸಿದ್ದ ಕಾರುಗಳ ಬಿಡಿ ಭಾಗಗಳ ಕದಿಯುವುದು ಕಾಯಕ ಮಾಡಿಕೊಂಡ. ಕಾರಿನ ಎಲೆಕ್ಟ್ರಾನಿಕ್ ಕಂಟ್ರೋಲ್ ಮಾಡ್ಯುಲ್ಸ್ (ECM), ಎಂಜಿನ್ ಕಂಟ್ರೋಲ್ ಯುನಿಟ್,ಇಸಿಯು ಇಂಜೆಕ್ಟರ್ ಸೇರಿದಂತೆ ಹಲವು ಪ್ರಮುಖ ಹಾಗೂ ಬೆಲೆಬಾಳುವ ಬಿಡಿಭಾಗಗಳನ್ನು ಕದಿಯುತ್ತಿದ್ದ. ಬಳಿಕ ಕಡಿಮೆ ಬೆಲೆ ಈತನ ಪರಚಿಯಸ್ಥ ಶಾಪ್‌ಗೆ ಮಾರಾಟ ಮಾಡುತ್ತಿದೆ. ಇದರಿಂದ ಪ್ರತಿ ದಿನ 20 ರಿಂದ 40 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ.

ಈ ಹಣದಲ್ಲಿ ತನ್ನ ಗೆಳತಿಯೊಂದಿಗೆ ಜಾಲಿ ರೈಡ್ ಮಾಡುತ್ತಿದ್ದ. ಶಾಪಿಂಗ್, ಹೊಟೆಲ್, ಪಾರ್ಲರ್ ಸೇರಿದಂತೆ ಎಲ್ಲೆಡೆ ಸುತ್ತಾಟ ನಡೆಸುತ್ತಿದ್ದ. ಗರ್ಲ್‌ಫ್ರೆಂಡ್ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದ. ಇತ್ತ ಗೆಳತಿಗೂ ತಾನೊಬ್ಬ ದೊಡ್ಡ ಉದ್ಯಮಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೇನೆ ಅನ್ನೋ ಖುಷಿ. ಪ್ರತಿ ದಿನ ಈಕೆಯ ಬೇಡಿಕೆ ಹೆಚ್ಚಾಗುತ್ತಲೇ ಹೋಗಿದೆ. ಇತ್ತ ಮೆಹಬೂಬ್ ಕೂಡ ಪ್ರತಿ ದಿನ ಕಳ್ಳತನದ ಪ್ರಮಾಣವನ್ನೂ ಹೆಚ್ಚಿಸಿದ್ದ.

ನಾರಾಯಣನಗರದಲ್ಲಿ 40 ವರ್ಷದ ಗೋರಖ್‌ನಾಥ್ ಜಾದವ್ ಅವರ ನಿಲ್ಲಿಸಿದ್ದ ಕಾರಿನ ಬಿಡಿಬಾಗಗಳು ಕಾಣೆಯಾಗಿತ್ತು. ಇದೇ ವೇಳೆ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದವರ ಕಾರುಗಳ ಬಿಡಿ ಭಾಗಗಳು ಕಾಣೆಯಾಗಿತ್ತು. ಹೀಗಾಗಿ ಜಾದವ್ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಗಳಲ್ಲಿ ಈತನ ಚಿತ್ರಣ ಸಿಗಲಿಲ್ಲ. ಹೀಗಾಗಿ ಪೊಲೀಸರು ಬಿಡಿ ಬಾಗಗಳು ಸಿಗುವ ಶಾಪ್‌ಗಳ ಮೇಲೆ ಗಮನಹರಿಸಿದರು. ಈ ವೇಳೆ ಮಲಾಡ್‌ನಲ್ಲಿ ಗ್ಯಾರೇಜ್ ಒಂದರಲ್ಲಿ ಹಳೇ ಬಿಡಿ ಭಾಗಗಳು ಕಡಿಮೆ ಬೆಲೆಗೆ ಮಾರಾಟವಾತ್ತಿರುವುದು ಪತ್ತೆಯಾಗಿದೆ. ಮಾಲೀಕನ ವಿಚಾರಣೆ ನಡೆಸಿದಾಗ ಮೊಹ್ಸಿನ್ ಮೆಹಬೂಬ್ ಶೇಕ್ ಹೆಸರು ಬಾಯ್ಬಿಟ್ಟಿದ್ದಾನೆ.

 

ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ಕೋರ್ಟ್!

ಸರಿಸುಮಾರು 7 ತಿಂಗಳ ಕಾರ್ಯಾಚರಣೆ ಬಳಿ ಮೊಹ್ಸಿನ್ ಮೆಹಬೂಬ್ ಆರೋಪಿ ಅನ್ನೋದು ಖಚಿತವಾಗಿದೆ. ಇತ್ತ ಗೆಳತಿ ಜೊತೆಗ ಶಾಪಿಂಗ್ ಮಾಡುತ್ತಿದ್ದ ವೇಳೆಯೆ ಪೊಲೀಸರು ಮೊಹ್ಸಿನ್ ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ