
ಭುವನೇಶ್ವರ(ಫೆ. 14) ಆನ್ ಲೈನ್ (Online Class) ಕ್ಲಾಸ್ ಬಿಟ್ಟು ಆಫ್ ಲೈನ್ ಕ್ಲಾಸ್ ಗೆ ಹಾಜಾರಾಗಲು ಸೂಚಿಸಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಸುಸೈಡ್ (Suicide) ಮಾಡಿಕೊಂಡಿದ್ದಾಳೆ. ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊರೋನಾ ಕಾರಣಕ್ಕೆ ಶಾಲೆಗಳು ಬಂದ್ ಆಗಿದ್ದವು. ಈಗ ಶಾಲೆ ಮೊದಲಿನಂತೆ ತೆರೆದುಕೊಂಡಿದ್ದು ಆಕೆಯ ಪೋಷಕರು ಆಫ್‌ಲೈನ್ ತರಗತಿಗಳಿಗೆ ತೆರಳು ಎಂದು ಮಗಳಿಗೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿದ್ದಾಳೆ.
ಮಲ್ಕನಗಿರಿ ಜಿಲ್ಲೆಯ ಭೀಮರಂಗನಿಗುಡ ಗ್ರಾಮದ ಬಾಲಕಿ ತಾನು ಓದುತ್ತಿದ್ದ ಸತಿಗುಡಾದ ಸರ್ಕಾರಿ ವಸತಿ ಶಾಲೆಗೆ ತೆರಳು ಹೇಳಿದ್ದಾರೆ. ಜನವರಿ 7 ರಿಂದ ಮುಚ್ಚಲ್ಪಟ್ಟ ಶಾಲೆಗಳನ್ನು ಸರಿಯಾಗಿ ಒಂದು ತಿಂಗಳ ನಂತರ ಅಂದರೆ ಫೆ. 7 ರಂದು ಆರಂಭ ಮಾಡಲಾಗಿತ್ತು. ಪೋಷಕರು ಮಗಳಿಗೆ ಶಾಲೆಗೆ ತೆರಳಲು ತಿಳಿಸಿದ್ದಾರೆ. ಆದರೆ ಬಾಲಕಿ ದುಡುಕಿನ ನಿರ್ಧಾರ ಮಾಡಿದ್ದಾಳೆ.
ಕೊರೋನಾ ಶೈಕ್ಷಣಿಕ ವೇಳಾಪಟ್ಟಿ ಮೇಲೆ ಪರಿಣಾಮ ಬೀರಿದ್ದು ಪ್ರೌಢ ಶಿಕ್ಷಣ ಮಂಡಳಿಯು 9 ಮತ್ತು 10 ನೇ ತರಗತಿಗಳ ಪಠ್ಯಕ್ರಮವನ್ನು ಶೇಕಡಾ 33 ಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ಮತ್ತು 2021 ರ ಶೈಕ್ಷಣಿಕ ವರ್ಷಕ್ಕೆ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ಯೋಜನೆಯನ್ನು ಪರಿಚಯಿಸಲಾಗಿತ್ತು.
ಜೀವ ಕಳೆದುಕೊಂಡಿದ್ದ ವೈದ್ಯರ ಮಗ: ಐದಂತಸ್ತಿನ ಮಹಡಿಯಿಂದ ಬಿದ್ದು 16 ವರ್ಷದ ಬಾಲಕ ಸಾವನಪ್ಪಿದ್ದ . ಬಾಲಕ ಹೆಸರು ಆದಿತ್ಯ, ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡಿ ಗಾರ್ಡನ್ ನಲ್ಲಿನ ವಿಲ್ಲಾ ನಿವಾಸಿಯಾಗಿದ್ದ ಎಸ್ಎಸ್ಎಲ್ಸಿ ವ್ಯಾಸಾಂಗ ಮಾಡುತ್ತಿದ್ದ ಈ ಆದಿತ್ಯ, ತಂದೆ ತಾಯಿಯ ಮುದ್ದಿನ ಮಗನಾಗಿದ್ದ.. ಇನ್ನು ಆದಿತ್ಯನ ತಂದೆ ತಾಯಿ ಇಬ್ಬರು ಸಹ ವೈದ್ಯರು.. ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ಇರುವ ಸ್ಪರ್ಶ್ ಆಸ್ಪತ್ರೆಯ ವೈದ್ಯರಾಗಿರುವ ಶರಣು ಪಾಟೀಲ್ ಮತ್ತು ಮಮತಾ ಪಾಟೀಲ್ ರವರ ಮಗ ಈ ಆದಿತ್ಯ ಸುಸೈಡ್ ಮಾಡಿಕೊಂಡು ತಂದೆ ತಾಯಿಯನ್ನೇ ಅನಾಥರನ್ನಾಗಿ ಮಾಡಿ ಹೋಗಿದ್ದ.
Shivamogga : ಶಾಲೆ ಬಿಡುತ್ತೇವೆ ಆದ್ರೆ ಹಿಜಾಬ್ ತೆಗೆಯೊಲ್ಲ ಎಂದು ಪರೀಕ್ಷೆ ಬರೆಯದೆ ಹಿಂತಿರುಗಿದ ವಿದ್ಯಾರ್ಥಿನಿಯರು
ಬೆಳಗಾವಿ ಪ್ರಕರಣ: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಾಯೊಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹಿಂಡಲಗಾ ರಸ್ತೆಯಲ್ಲಿ ನಡೆದಿತ್ತು. ನಗರದ ಹಿಂಡಲಗಾ ರಸ್ತೆಯಲ್ಲಿರುವ ಕೆರೆಯಲ್ಲಿ ಶವಗಳು ಕಂಡು ಬಂದಿದ್ದವು. ಈ ವೇಳೆ ಕೃಷಾ ಹಾಗೂ ಭಾವೀರ ಎಂಬುವರ ಮೃತದೇಹವನ್ನ ಹೊರತೆಗೆಯಲಾಗಿತ್ತು.ಈಗ ನಾಪತ್ತೆಯಾಗಿದ್ದ ಮತ್ತೋರ್ವ ಬಾಲಕ ವೀರೇನ್(7) ಮೃತದೇಹ ಕೂಡ ಪತ್ತೆಯಾಗಿದೆ. ಎಸ್‌ಡಿಆರ್‌ಎಫ್ ಸಿಬ್ಬಂದಿ 7 ವರ್ಷದ ವೀರೇನ್ ಮೃತದೇಹ ಹೊರತಗೆದಿದ್ದಾರೆ.
ಮೃತದೇಹ ಕುರಿತು ಮಾಹಿತಿ ಪಡೆದ ಕ್ಯಾಂಪ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ ಧರ್ಮಟಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ ಕೃಷಾ ಹಾಗೂ ಭಾವೀರ ಎಂಬುವರ ಮೃತ ದೇಹ ಮಾತ್ರ ಪತ್ತೆಯಾಗಿತ್ತು. ಈಗ ಶಾಲಾ ಸಮವಸ್ತ್ರದಲ್ಲೇ ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ