Mobile Snatching : ಪ್ರಿಯಾಂಕ್ ಖರ್ಗೆ ಪತ್ನಿ ಐಪೋನ್ ಕದ್ದಿದ್ದ ಮೊಹೀನ್ ತಾಜ್ ಗ್ಯಾಂಗ್ ಸೆರೆ

Published : Feb 14, 2022, 06:14 PM ISTUpdated : Feb 14, 2022, 06:16 PM IST
Mobile Snatching : ಪ್ರಿಯಾಂಕ್ ಖರ್ಗೆ ಪತ್ನಿ ಐಪೋನ್ ಕದ್ದಿದ್ದ ಮೊಹೀನ್ ತಾಜ್ ಗ್ಯಾಂಗ್ ಸೆರೆ

ಸಾರಾಂಶ

* ಇದು ಖತರ್‌ ನಾಕ್ ಮೊಬೈಲ್ ಕಳ್ಳರ ಗ್ಯಾಂಗ್ * ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಯ  ಮೊಬೈಲ್ ಕಸಿದು ಪರಾರಿಯಾಗಿದ್ದವರು * ಕದ್ದ ಬೈಕ್ ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದರು

ಬೆಂಗಳೂರು( ಫೆ. 14)  ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಮೊಬೈಲ್ ಕಿತ್ತು ಪರಾರಿಯಾಗಿದ್ದ ಕಳ್ಳರು (mobile snatchers) ಕೊನೆಗೂ ಸಿಕ್ಕಿಬಿದ್ದಿದ್ದಾರೆ.  ಶ್ರುತಿ ವಾಕಿಂಗ್ ಗೆ ತೆರಳಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದರು.

ಕಾಂಗ್ರೆಸ್ ಶಾಸಕ  ಪ್ರಿಯಾಂಕ್ ಖರ್ಗೆ (Priyank Kharge )ಪತ್ನಿ ಶ್ರುತಿ ಖರ್ಗೆ ಮೊಬೈಲ್ ಕಿತ್ತುಕೊಂಡಿದ್ದರು.  ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ (Bengaluru Police) ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಗ್ಯಾಂಗ್ ನ ಕಿಂಗ್ ಪಿನ್ ಮೊಹೀನ್ ತಾಜ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜಬೀ ,ಅಸ್ಲಾಂ ,ಮೊಹೀನ್, ಶೇಕ್ ಇಲಿಯಾಸ್  ಎಂಬುವರನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ವೇಳೆ ಎಚ್.ಆರ್.ಎಸ್ ಲೇಔಟ್ .ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಇವರು ಚಾಲಾಕಿತನ ಮಾತ್ರ  ಮೂಗಿನ ಮೇಲೆ ಬೆರಳು ಇಡುವಂಥದ್ದು. ಕದ್ದ ಬೈಕ್‌ ನಲ್ಲಿ ಸಮಯ ಸಾಧಿಸ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಫೆ. 12  ರಂದು ದರೋಡೆಗೆ ಗ್ಯಾಂಗ್ ಪ್ಲಾನ್ ಮಾಡಿತ್ತು.  ಸ್ಕೆಚ್ ಹಾಕಿ ದರೋಡೆ ಯತ್ನಿಸುತ್ತಿದ್ದ ವೇಳೆ ಖಾಕಿ ಕೈಗೆ ಸಿಕ್ಕಿಬಿದ್ದಿತ್ತು. ಗ್ಯಾಂಗ್ ನ ಕಿಂಗ್ ಪಿನ್ ಮೊಹೀನ್ ತಾಜ್ ಮೇಲೆ 30 ಪ್ರಕರಣಗಳಿವೆ. 

ಮಗಳ ವಾಟ್ಸಪ್ ಕಿತ್ತಾಟ,  ಅಕ್ಕ-ಪಕ್ಕದ ಮನೆ ಗಲಾಟೆಯಲ್ಲಿ ತಾಯಿ ಹತ್ಯೆ!

ಕೈಯಲ್ಲಿ ಮೊಬೈಲ್ ಹಿಡಿದು ನಡೆದು ಹೋಗೋರೆ ಇವರ ಟಾರ್ಗೆಟ್:  ಕ್ಷಣಮಾತ್ರದಲ್ಲಿ ಕೈಯಿಂದ ಮೊಬೈಲ್ ಕಿತ್ತು ಎಸ್ಕೇಪ್ ಆಗುತ್ತಿದ್ದ ಕಿಲಾಡಿಗಳ ಕತೆ ಇದು. ಕಾಸ್ಟ್ಲಿ ಮೊಬೈಲ್ ನನ್ನೆ ಟಾರ್ಗೆಟ್ ಮಾಡುತ್ತಿದ್ದ ಕಳ್ಳರುಕ್ಷಣಮಾತ್ರದಲ್ಲಿ ಮಾಯವಾಗುತ್ತಿದ್ದರು. ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ದರು.  ಬಂಧಿತರಿಂದ 13 ಲಕ್ಷ 60 ಸಾವಿರ ಮೌಲ್ಯದ 80 ಮೊಬೈಲ್ ಫೋನ್,  ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದರು. ಮುಜಾಹಿದ್, ಮುಬಾರಕ್ ಪಾಷಾ, ಖಾಸಿಫ್ ಖಾನ್  ಎಂಬುವರನ್ನು ಬಂಧಿಸಿದಾಗ ಅನೇಕ ಪ್ರಕರಣ ಬಹಿರಂಗ ಆಗಿತ್ತು.

ಮಸಾಜ್ ಆಸೆ: ಮಸಾಜ್ ಪಾರ್ಲರ್ ಗೆ  ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ರಾಯಲ್ ಲೈಫ್ ಎಂಜಾಯ್ ಮಾಡುತ್ತ ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದ ಖದೀಮರ ಬಂಧನವಾಗಿತ್ತು.

ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು.

ಜಾನ್ ಮೆಲ್ವಿನ್ ಮತ್ತು ಮಂಜುನಾಥ್  ಮಸಾಜ್ ಪಾರ್ಲರ್ ಗೆ ಹೋಗಿ  ಟಿಪ್ಸ್ ಕೊಟ್ಟು ಬರುತ್ತಿದ್ದರು. ಮಸಾಜ್ ಪಾರ್ಲರ್ ಹೋಗಿ 10 ರಿಂದ 15 ಸಾವಿರ ಟಿಪ್ಸ್ ಕೊಟ್ಟು ಬರುತ್ತಿದ್ದವರ ಬಂಧಿಸಿ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!