ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿ ಮಹಿಳಾ ಕಂಡಕ್ಟರ್‌ನನ್ನು ಅಜ್ಜಿ ಟಿಕೆಟ್ ಕೊಡಿ ಎಂದು ಕೇಳಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಭಾರತೀನಗರ (ಜ.11) : ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿ ಮಹಿಳಾ ಕಂಡಕ್ಟರ್‌ನನ್ನು ಅಜ್ಜಿ ಟಿಕೆಟ್ ಕೊಡಿ ಎಂದು ಕೇಳಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಮಂಡ್ಯ ಡಿಪೋದ ಕೆಎ-40, ಎಫ್-1195 ಸಾರಿಗೆ ಬಸ್ ಭಾರತೀನಗರದಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ವೇಳೆ 15 ವರ್ಷದ ವಿದ್ಯಾರ್ಥಿನಿ ಕಾವ್ಯಶ್ರೀ ಕಂಡಕ್ಟರ್ ಸೌಭಾಗ್ಯಮ್ಮರನ್ನು ಟಿಕೆಟ್ ಕೊಡಿ ಅಜ್ಜಿ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳಾ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಡಿ.ಕೆ.ಲತಾ ತಿಳಿಸಿದ್ದಾರೆ.
ನಂತರ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಎದುರು ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಕಂಡಕ್ಟರ್ ಸೌಭಾಗ್ಯ ವಿರುದ್ಧ ಪ್ರತಿಭಟಿಸಿ ಎಫ್‌ಐಆರ್ ದಾಖಲು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Chikkamagaluru: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್
ಕಸಾಪ ತಾಲೂಕು ಅಧ್ಯಕ್ಷೆ ಟಿ.ಸಿ.ವಸಂತಮ್ಮ ಮಾತನಾಡಿ, ವಿದ್ಯಾರ್ಥಿನಿ ಮೇಲೆ ಕೈ ಮಾಡಿರುವುದು ಅಕ್ಷಮ್ಯ ಅಪರಾಧ. ಹಲ್ಲೆಯಿಂದ ವಿದ್ಯಾರ್ಥಿನಿ ಎಡಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ಆಸ್ಪತ್ರೆ ದಾಖಲಾತಿ ಪ್ರಕಾರ ಎಡಕಿವಿ ಶೇ.60 ರಷ್ಟು ಸಮಸ್ಯೆ ಇದೆ. ಹಾಗಾಗಿ ಆಕೆಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮಂಡ್ಯ ಡಿಪೋದಿಂದ ಬರುವ ಸಾರಿಗೆ ಬಸ್‌ಗಳನ್ನು ಕೆ.ಎಂ.ದೊಡ್ಡಿಯಲ್ಲಿ ಅಡ್ಡಗಟ್ಟಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಬ್ಬಬ್ಬಾ ಈ 73ರ ಅಜ್ಜಿ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿದಾ
ಈ ವೇಳೆ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ರವಿ, ವಕ್ರತುಂಡ ವೆಂಕಟೇಶ್, ಕೆ.ಸಿ.ಪದ್ಮಾ, ಚಂದ್ರಕಲಾ, ಭಾಗ್ಯವತಿ, ಜೈಶೀಲ, ರವಿಪ್ರಸಾದ್, ಸುರೇಶ್, ಚಿಕ್ಕಸ್ವಾಮಿ, ರುದ್ರಯ್ಯ ಇತರರಿದ್ದರು.