ಚಹಾ ಪ್ರಿಯರೇ ಎಚ್ಚರ: ನಕಲಿ ಟೀ ಪುಡಿ ಜಾಲ ಪತ್ತೆ, ಖದೀಮರ ಐಡಿಯಾಗೆ ದಂಗಾದ ಪೊಲೀಸರು..!

By Girish Goudar  |  First Published Jan 11, 2024, 11:27 AM IST

ನಕಲಿ 3ರೋಜಸ್ ಟೀ ಪುಡಿ ಜಾಲ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.  ಬ್ರಾಂಡೆಂಡ್ ಪ್ಯಾಕ್‌ನಲ್ಲಿ ಖದೀಮರು ನಕಲಿ ಟೀ ಪುಡಿ ತುಂಬುತ್ತಿದ್ದಾರೆ. ನಲಮಂಗಲ ನಗರದ ಹೊರವಲಯದಲ್ಲಿ ನಡೀತ್ತಿದ್ದ ಅಕ್ರಮದ ಅಡ್ಡೆ ಪತ್ತೆಯಾಗಿದೆ. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. 

ನೆಲಮಂಗಲ(ಜ.11): ಟೀ ಕುಡಿಯುವ ಜನರು ನೋಡಲೇಬೇಕಾದ ಸುದ್ದಿ ಇದು. ಬ್ರಾಂಡೆಂಟ್ ಟೀ ಕುಡಿದ್ರು ಬಾಯಿಗೆ ರುಚಿ ಸಿಕ್ತಿಲ್ವಾ?. ರಿನ್, ಸರ್ಫೆಕ್ಸಲ್ ಪೌಡರ್ ಹಾಕಿದ್ರು ಬಟ್ಟೆಯಲ್ಲಿ ಕೊಳೆ ಹೋಗ್ತಿಲ್ವಾ?. ಹಾಗಿದ್ರೆ ನೀವ್ ಯೂಸ್ ಮಾಡ್ತಿರೋ ಟೀ ಪುಡಿ‌ ಮತ್ತು ಡಿಟರ್ಜೆಂಟ್ ಅಸಲಿ ಅಲ್ಲ ಎಲ್ಲವೂ ನಕಲಿ. ಹೌದು,  ಬ್ರಾಂಡೆಡ್ ಆಹಾರ ಪದಾರ್ಥಗಳ‌ ನಕಲಿ ಜಾಲ‌ವೊಂದು ಪತ್ತೆಯಾಗಿದೆ.

ನಕಲಿ 3ರೋಜಸ್ ಟೀ ಪುಡಿ ಜಾಲ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.  ಬ್ರಾಂಡೆಂಡ್ ಪ್ಯಾಕ್‌ನಲ್ಲಿ ಖದೀಮರು ನಕಲಿ ಟೀ ಪುಡಿ ತುಂಬುತ್ತಿದ್ದಾರೆ. ನಲಮಂಗಲ ನಗರದ ಹೊರವಲಯದಲ್ಲಿ ನಡೀತ್ತಿದ್ದ ಅಕ್ರಮದ ಅಡ್ಡೆ ಪತ್ತೆಯಾಗಿದೆ. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. 

Latest Videos

undefined

12ರ ಹರೆಯದ ಬಾಲಕಿಯ ಮದುವೆಯಾಗಿ ಗರ್ಭಿಣಿ ಮಾಡಿದ್ದ 29 ವರ್ಷದ ವ್ಯಕ್ತಿಯ ಬಂಧನ!

ಮಾದನಾಯಕನಹಳ್ಳಿ ಪೊಲೀಸರು ನಕಲಿ ಟೀ ಪುಡಿ ಮತ್ತು ಸರ್ಫ್ ಎಕ್ಸೆಲ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ. ನಕಲಿ ಬ್ರಾಂಡ್‌ಗಳನ್ನ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ , ರಾಮನಗರ, ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆರೋಪಿಗಳು ನಕಲಿ ಟೀ ಪುಡಿಯನ್ನ ಸಣ್ಣ ಸಣ್ಣ ಪ್ಯಾಕ್ ಮಾಡುತ್ತಿದ್ದರು. 

ಪ್ಯಾಕಿಂಗ್ ಮಷಿನ್ ಮಿಕ್ಸಿಂಗ್ ಮಷಿನ್‌ಗಳನ್ನ ಸೀಜ್ ಮಾಡಲಾಗಿದೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಟೀ ಪುಡಿ ಮತ್ತು ಡಿಟರ್ಜೆಂಟ್ ಪೌಡರ್ ವಶಪಡಿಸಿಕೊಳ್ಳಲಾಗಿದೆ. ನಕಲಿ ಫ್ಯಾಕ್ಟರಿ ನಡೆಸ್ತಿದ್ದ ಬೂಮರಾಮ್, ಮಾಧು ಸಿಂಗ್, ವಿಕ್ರಮ್ ಸಿಂಗ್ ಮತ್ತು ಶಿವಕುಮಾರನನ್ನ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!