ಬಾಲಕಿ ಮೇಲೆ ಗ್ಯಾಂಗ್‌ರೇಪ್‌ ಮಾಡಿ ಸುಟ್ಟು ಕೊಂದ ಪಾಪಿಗಳು: ಮನನೊಂದ ತಂದೆ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನ

By BK Ashwin  |  First Published Aug 7, 2023, 6:25 PM IST

ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಲ್ಲಲಾಗಿದೆ. ಇದರಿಂದ ಮನನೊಂದ ತಂದೆ ಮಗಳ ಉರಿಯುತ್ತಿರುವ ಚಿತೆಗೆ ಹಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 


ಜೈಪುರ (ಆಗಸ್ಟ್ 7, 2023): ರಾಜಸ್ಥಾನದ ಭಿಲ್ವಾರದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ. ಈ ಹಿನ್ನೆಲೆ ಇದರಿಂದ ಮನನೊಂದ ತಂದೆಯೂ ತನ್ನ ಮಗಳ ಉರಿಯುತ್ತಿರುವ ಚಿತೆಗೆ ಜಿಗಿಯಲು ಯತ್ನಿಸಿದ್ದಾರೆ. ಆಗಸ್ಟ್ 2 ರಂದು ನಾಪತ್ತೆಯಾದ ನಂತರ ಅಪ್ರಾಪ್ತ ಬಾಲಕಿಯ ಸುಟ್ಟ ಅವಶೇಷಗಳು ಕೆಲ ದಿನಗಳ ಹಿಂದೆ ಕಲ್ಲಿದ್ದಲು ಕುಲುಮೆಯಲ್ಲಿ ಪತ್ತೆಯಾಗಿತ್ತು. 

ಇನ್ನು, ಉರಿಯುತ್ತಿದ್ದ ಮಗಳ ಚಿತೆಯ ಮೇಲೆ ಹಾರಲು ಯತ್ನಿಸಿದ ತಂದೆ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಯ ನಿರ್ದೇಶಕ ಡಾ. ಅರುಣ್ ಗೌರ್ ಸಂತ್ರಸ್ತ ಬಾಲಕಿಯ ತಂದೆಯ ಸ್ಥಿತಿ ಈಗ ಅಪಾಯದಿಂದ ಪಾರಾಗಿದೆ ಎಂದು ತಿಳಿಸಿದ್ದಾರೆ. ಅವರ ನಿಯತಾಂಕಗಳು ಸಾಮಾನ್ಯವಾಗಿದೆ ಎಂದೂ ಅವರು ಹೇಳಿದರು.

Tap to resize

Latest Videos

ಇದನ್ನು ಓದಿ: ಬಾಲಕಿ ರೇಪ್‌ ಮಾಡಿ ಸಾಕ್ಷ್ಯ ನಾಶ ಮಾಡಲು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಂದ ಪಾಪಿಗಳು!

ಈ ಮಧ್ಯೆ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸಂಬಂಧ ಈವರೆಗೆ ಐವರನ್ನು ಬಂಧಿಸಲಾಗಿದೆ. ಹಾಗೂ, ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಭಿಲ್ವಾರದ ಕೊಟ್ರಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರನ್ನು ಅಮಾನತುಗೊಳಿಸಲಾಗಿದೆ.

ಏನಿದು ಪ್ರಕರಣ?
ಅಪ್ರಾಪ್ತ ಬಾಲಕಿಯನ್ನು ಕೊಲೆಗೈದು ನಂತರ ಭಿಲ್ವಾರಾ ಜಿಲ್ಲೆಯ ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹಾಕಲಾಗಿದೆ ಮತ್ತು ಸ್ಥಳೀಯರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗಿದೆ. ಶೋಧ ಕಾರ್ಯಾಚರಣೆಯ ನಂತರ ಮೃತ ಬಾಲಕಿಯದ್ದು ಎನ್ನಲಾದ ಅರ್ಧ ಸುಟ್ಟ ದೇಹದ ಭಾಗಗಳನ್ನು ಆಗಸ್ಟ್ 4 ರಂದು ಗ್ರಾಮದ ಕೊಳದಿಂದ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಫಿಗೆ ವಿಷ ಹಾಕಿ ಯೋಧನನ್ನು ಕೊಲ್ಲಲು ಯತ್ನಿಸಿದ ಪಾಪಿ ಮಹಿಳೆ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಅಪ್ರಾಪ್ತ ಬಾಲಕಿ ದನ ಮೇಯಿಸಲು ಹೋದಾಗ ನಾಪತ್ತೆಯಾಗಿದ್ದಳು. ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅದೇ ರಾತ್ರಿ ಆಕೆಯ ದೇಹವನ್ನು ಸುಟ್ಟು ಹಾಕಿದ್ದರು. ಅಪ್ರಾಪ್ತರ ದೇಹದ ಕೆಲವು ಭಾಗಗಳನ್ನು ಕುಲುಮೆಯಲ್ಲಿ ಸುಟ್ಟು ಹಾಕಲಾಗಿದೆ ಮತ್ತು ಇತರ ಭಾಗಗಳನ್ನು ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲು ಹತ್ತಿರದ ಕೊಳದಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಇದನ್ನು "ಅಪರೂಪದ ಅಪರೂಪದ ಪ್ರಕರಣ" ಎಂದು ಕರೆದ ಭಿಲ್ವಾರಾ ಎಸ್ಪಿ ಆದರ್ಶ್ ಸಿಧು, ಆರೋಪಿಗಳಿಗೆ ಮರಣದಂಡನೆ ವಿಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದೂ ಹೇಳಿದರು. “ನಾವು ತ್ವರಿತ ನ್ಯಾಯಾಲಯದ ಮೂಲಕ ಎಲ್ಲಾ ಆರೋಪಿಗಳಿಗೆ ಮರಣದಂಡನೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಅಪರೂಪದ ಅಪರಾಧಗಳಲ್ಲಿ ಅಪರೂಪವಾಗಿದೆ ಎಂದು ಸೂರಿಟೆಂಡೆಂಟ್‌ ಆಫ್‌ ಪೊಲೀಸ್‌ ಹೇಳಿದರು. ಹಾಗೂ, ಈ ಪ್ರಕರಣದಲ್ಲಿ "ಆರು ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿದ್ದಾರೆ" ಎಂದೂ ಅವರು ಹೇಳಿದರು.

ಇದನ್ನೂ ಓದಿ: ಇಷ್ಟೇ ಸಿಖ್ಖರು ಸತ್ತಿದ್ದಾ ಎಂದಿದ್ರಂತೆ ಕಾಂಗ್ರೆಸ್‌ನ ಜಗದೀಶ್ ಟೈಟ್ಲರ್: ಸಿಬಿಐ ಸ್ಪೋಟಕ ಚಾರ್ಜ್‌ಶೀಟ್‌

click me!