ಚಾಮರಾಜನಗರ: ಪ್ರೀತಿಗೆ ಮನಸೋತ ವಧು, ತಂದೆ ಆತ್ಮಹತ್ಯೆ

By Kannadaprabha News  |  First Published Nov 19, 2023, 3:00 AM IST

ಮಧು ಮಗಳು ಮದುವೆ ಚಪ್ಪರದ ಹಿಂದಿನ ದಿನ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಓಡಿ ಹೋದಳು, ಅವಮಾನವಾಯಿತು ಎಂದು ವಧುವಿನ ತಂದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. 


ಗುಂಡ್ಲುಪೇಟೆ(ನ.19):  ಮದುವೆ ನಿಗದಿಯಾಗಿದ್ದರೂ ಪ್ರೀತಿಗೆ ಮನಸೋತ ಮಧು ಮಗಳು ಮದುವೆ ಚಪ್ಪರದ ಹಿಂದಿನ ದಿನ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಓಡಿ ಹೋದಳು, ಅವಮಾನವಾಯಿತು ಎಂದು ವಧುವಿನ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ತಾಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಹೂರದಹಳ್ಳಿ ಗ್ರಾಮದ ಪುಟ್ಟೇಗೌಡ (೫೫) ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ.

ಏನಿದು ಪ್ರಸಂಗ?

Tap to resize

Latest Videos

ಹೂರದಹಳ್ಳಿ ಗ್ರಾಮದ ಮೃತ ಪುಟ್ಟೇಗೌಡರ ಪುತ್ರಿ ಸುಚಿತ್ರಾಗೆ ನ.೧೮ ಮತ್ತು ೧೯ ರಂದು ಗುಂಡ್ಲುಪೇಟೆಯ ರಾಮಮಂದಿರದಲ್ಲಿ ಮದುವೆ ನಿಗದಿಯಾಗಿತ್ತು. ನ.೧೭ ರಂದು ಮಗಳು (ಸುಚಿತ್ರ) ಓಡಿ ಹೋದ್ದರಿಂದ ಬೇಸರಗೊಂಡ ಪುಟ್ಟೇಗೌಡ ಶನಿವಾರ ಬೆಳಗಿನ ಜಾವ ಜಮೀನಿಗೆ ಹೋಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತನ ಬಾವಮೈದ ಪುಟ್ಟಬುದ್ಧಿ ತೆರಕಣಾಂಬಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಡೆತ್‌ನೋಟ್ ಬರೆದಿಟ್ಟು ಬ್ರಹ್ಮಕುಮಾರಿ ಆಶ್ರಮದಲ್ಲಿ ಸಾವಿಗೆ ಶರಣಾದ ಸೋದರಿಯರು

ಘಟನೆ ವಿವರ:

ನ.೧೭ ರಂದು ಪುಟ್ಟೇಗೌಡ, ಪುಟ್ಟೇಗೌಡ ಸಹೋದರ ಶಿವೇಗೌಡ, ಸುಚಿತ್ರಳ ಸೋದರ ಮಾವ ಪುಟ್ಟಬುದ್ಧಿ ಲಗ್ನ ಕಟ್ಟಿಸಲು ನವ ವಧು ಸುಚಿತ್ರಳ ಜೊತೆ ಗುಂಡ್ಲುಪೇಟೆ ಹೋಗಿದ್ದರು. ಪುಟ್ಟೇಗೌಡ, ಶಿವೇಗೌಡ, ಪುಟ್ಟಬುದ್ಧಿ ಲಗ್ನ ಕಟ್ಟಿಸಲು ಪುರೋಹಿತರ ಮನೆಗೆ ತೆರಳುವುದಕ್ಕೂ ಮುಂಚೆ ಸುಚಿತ್ರ ಬ್ಯೂಟಿ ಪಾರ್ಲರ್‌ಗೆ ಮೇಕಪ್‌ ಮಾಡಿಸುತ್ತೇನೆ ಎಂದು ಹೋಗಿದ್ದಾರೆ.

ಸುಚಿತ್ರಳ ಪ್ರಿಯಕರ ಹೂರದಹಳ್ಳಿ ಗ್ರಾಮದ ಅನ್ಯ ಕೋಮಿನ ಮಲ್ಲೇಶ್‌ ಬ್ಯೂಟಿ ಪಾರ್ಲರ್‌ಗೆ ಬಂದು ಕೆಲ ಕಾಲ ಮಾತನಾಡಿ ನಂತರ ಬೈಕ್‌ನಲ್ಲಿ ಪರಾರಿಯಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅವಳಿಗಾಗಿ ಅವನು ಕಳೆದುಕೊಂಡಿದ್ದು ಲಕ್ಷ ಲಕ್ಷ..! ಸಾಯೋದಕ್ಕೂ ಮೊದಲು ಹನಿಟ್ರ್ಯಾಪ್ ಕಥೆ ಹೇಳಿದ..!

ಸುಚಿತ್ರ ಪ್ರಿಯಕರನ ಜೊತೆ ಪರಾರಿಯಾದ ಹಿನ್ನೆಲೆ ಪುಟ್ಟೇಗೌಡ, ಶಿವೇಗೌಡ, ಪುಟ್ಟಬುದ್ಧಿ ಹೂರದಹಳ್ಳಿಗೆ ವಾಪಸ್‌ ತೆರಳಿದರು. ನಂತರ ಮಲ್ಲೇಶ ಮನೆಗೆ ಪುಟ್ಟೇಗೌಡ, ಪುಟ್ಟಬುದ್ದಿ, ತಾಯಮ್ಮನ ಜೊತೆ ಮಲ್ಲೇಶ ಮನೆಗೆ ತೆರಳಿ ಮಲ್ಲೇಶ್‌ ತಂದೆ ನಂಜುಂಡಪ್ಪ, ತಾಯಿ ರೇವಮ್ಮನ ವಿಚಾರಿಸಿದಾಗ ಗಲಾಟೆ ಮಾಡಿ ಕಳುಹಿಸಿದರು. ಮಗಳ ಬಗ್ಗೆ ಬೈದಾಡಿ ನೇಣು ಹಾಕಿಕೊಂಡ ಸಾಯುವಂತೆ ತೆಗಳಿದ್ದಾರೆ ಎಂದು ದೂರಿದ್ದಾರೆ.

ಪುಟ್ಟಬುದ್ಧಿ ದೂರಿನ ಆಧಾರದ ಮೇಲೆ ಆರೋಪಿಗಳಾದ ಹೂರದಹಳ್ಳಿ ಗ್ರಾಮದ ನಂಜುಂಡಪ್ಪ, ಮಲ್ಲೇಶ್‌, ರೇವಮ್ಮನ ಮೇಲೆ ಐಪಿಸಿ ೩೦೬ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

click me!