ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿ ಜೀವ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿ ಬಂದಿದೆ.
ಬೆಂಗಳೂರು (ನ.18): ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿ ಜೀವ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿ ಬಂದಿದೆ. ನಗರದ 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಸಂಸದನ ಪುತ್ರನಾಗಿರುವ ಮೈಸೂರು ಮಹಾರಾಜ ಕಾಲೇಜಿನ ಉಪನ್ಯಾಸಕ ವೈ.ಡಿ.ರಂಗನಾಥ್ (42) ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಐಪಿಎಸಿ ಸೆಕ್ಷನ್ 417 (ಮೋಸ), ಐಪಿಸಿ ಸೆಕ್ಷನ್ 420 (ವಂಚನೆ) ಹಾಗೂ ಐಪಿಸಿ ಸೆಕ್ಷನ್ 506 ( ಜೀವ ಬೆದರಿಕೆ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿ ರಂಗನಾಥ್‌ಗೆ ನೋಟಿಸ್ ನೀಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2022ರಲ್ಲಿ ಸ್ನೇಹಿತರ ಮೂಲಕ ರಂಗನಾಥ್ ಪರಿಚಯವಾಗಿದ್ದರು. ಬಳಿಕ ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದರು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಾನು ಮೈಸೂರಿನಲ್ಲಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಕೈತುಂಬಾ ಸಂಬಳ ಬರುತ್ತಿದೆ. ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುವೆ ಎಂದು ನಂಬಿಸಿದ್ದರು. ಬಳಿಕ ನನ್ನನ್ನು ಹೋಟೆಲ್‌ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದರು. ಈಗ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ.
undefined
ವಿದ್ಯುತ್ ಕಳವು: 68526 ರು. ದಂಡ ಕಟ್ಟಿ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದ ಎಚ್‌ಡಿಕೆ
ನನ್ನನ್ನು ಮದುವೆ ಆಗು ಎಂದು ಕೇಳಿದರೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ. ‘ಬಳಿಕ ರಂಗನಾಥ್ ಅವರು 2023 ಜ.23ರಂದು ನನಗೆ ಕರೆ ಮಾಡಿ, ಕೆಲಸದ ನಿಮಿತ್ತ ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಹೇಳಿದ್ದರು. ಜ.24ರಂದು ಬೆಂಗಳೂರಿನ ಕೊಡಿಗೇಹಳ್ಳಿಯ ಸ್ವಾತಿ ಹೋಟೆಲ್‌ಗೆ ಬಂದು ನನ್ನನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಬಳಿಕ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಈಗ ನಿನ್ನನ್ನು ನನ್ನ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಇಂದು ಹೋಟೆಲ್‌ನಲ್ಲಿಯೇ ಮಲಗಿ ಬೆಳಗ್ಗೆ ನಮ್ಮ ಮನೆಗೆ ಹೋಗೋಣ ಎಂದು ಹೇಳಿದ್ದರು’.
‘ಅಂದು ರಾತ್ರಿ ನಾನು ಹೋಟೆಲ್‌ನಲ್ಲಿ ಇರುವಾಗ ರಂಗನಾಥ್ ಮದ್ಯ ಸೇವನೆ ಮಾಡಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರು. ಮರುದಿನ ನನ್ನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಇತ್ತೀಚೆಗೆ ರಂಗನಾಥ್ ಮೊದಲಿನ ಹಾಗೆ ನನ್ನೊಂದಿಗೆ ಮಾತನಾಡದೆ ನಿರ್ಲಕ್ಷ್ಯಿಸುತ್ತಿದ್ದಾರೆ. ಈಗ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ನನ್ನನ್ನು ಮದುವೆ ಆಗು ಎಂದು ಕೇಳಿದರೆ, ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಂಗನಾಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರಿಗೂ ನೋಟಿಸ್ ಜಾರಿ: ಸಂತ್ರಸ್ತೆ ನ.6ರಂದು ಉಪನ್ಯಾಸಕ ವೈ.ಡಿ.ರಂಗನಾಥ್ ವಿರುದ್ದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಆರೋಪಿಯ ವಿಳಾಸ ಸೇರಿದಂತೆ ಯಾವುದೇ ದಾಖಲೆ ನೀಡಿಲ್ಲ. ಎರಡು ದಿನಗಳ ಬಳಿಕ ಆರೋಪಿಯ ಆಧಾರ್ ಕಾರ್ಡ್ ವಿವರ ನೀಡಿದ್ದರು. ನ.8ರಂದು ಆರೋಪಿ ರಂಗನಾಥ್ ಮನೆ ವಿಳಾಸ ಹಾಗೂ ಇ-ಮೇಲ್‌ಗೆ ನೋಟಿಸ್ ಕಳುಹಿಸಲಾಗಿದೆ. ಅಂತೆಯೆ ಸಂತ್ರಸ್ತೆಗೂ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಡಿಎಸ್‌ನ ಜಿಟಿಡಿ ಜತೆ ಡಿ.ಕೆ.ಶಿವಕುಮಾರ್ ರಹಸ್ಯ ಮಾತುಕತೆ ಸಂಚಲನ
ಪತ್ನಿಯಾಗಿ ಸ್ವೀಕರಿಸಲಿ, ಸಂತ್ರಸ್ತೆ: ಸಂತ್ರಸ್ತೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಂಗನಾಥ್ ಈ ಹಿಂದೆ ಮದುವೆಯಾಗಿರುವ ವಿಚಾರ ನನಗೆ ಗೊತ್ತಿರಲಿಲ್ಲ. ಒಂದು ತಿಂಗಳ ನಂತರ ಅನುಮಾನ ಬಂದಿತು. ಆತ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಬಳಸಿಕೊಂಡಿದ್ದಾರೆ. ಒಟ್ಟಿಗೆ ಇರುವುದಾಗಿ ಹೇಳಿ ದೈಹಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದಾನೆ. ಅವರ ಜಾತಿಯನ್ನು ಪ್ರಸ್ತಾಪಿಸಿ ನಾನು ಎಲ್ಲಿಯೂ ಬೈದಿಲ್ಲ. ಹಣಕ್ಕಾಗಿ ಬೇಡಿಕೆ ಇರಿಸಿಲ್ಲ. ಆತ ನನ್ನನ್ನು ಪತ್ನಿಯಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.