ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿಯೊಬ್ಬ ತಿರುಪತಿ ಎಕ್ಸ್‌ಪ್ರೆಸ್ ರೈಲಿನ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ದೇಸೂರು ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ನ.18): ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿಯೊಬ್ಬ ತಿರುಪತಿ ಎಕ್ಸ್‌ಪ್ರೆಸ್ ರೈಲಿನ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ದೇಸೂರು ಗ್ರಾಮದಲ್ಲಿ ನಡೆದಿದೆ.
ದೇಸೂರು ಗ್ರಾಮದ ಬೊಮ್ಮಾನಿ ನಂದ್ಯಾಳ್ಕರ (55) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅನಾರೋಗ್ಯಕ್ಕೆ ಬೇಸತ್ತು ಕುಡಿತದ ಗೀಳು ಹಚ್ಚಿಕೊಂಡಿದ್ದ ಬೊಮ್ಮಾನಿ ನಂದ್ಯಾಳ್ಕರ್. ಕುಡಿದ ಮತ್ತಿನಲ್ಲೇ ಚಲಿಸುವ ರೈಲಿನ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾದ ಬೊಮ್ಮಾನಿ. ಅಪಘಾತದ ರಭಸಕ್ಕೆ ಬೊಮ್ಮಾನಿ ನಂದ್ಯಾಳ್ಕರ್ ದೇಹ ಛಿದ್ರ ಛಿದ್ರ. ರೈಲಿನ ಎರಡು ಬದಿ ಬಿದ್ದಿರುವ ಮೃತದೇಹ. ತಿರುಪತಿ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ಕಡೆಗೆ ಬರುತ್ತಿರುವಾಗ ಹಳಿಗೆ ಮಲಗಿರುವ ಬೊಮ್ಮಾನಿ. ಬೆಳಗಾವಿ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ.
ರೋಗ ಲಕ್ಷಣವನ್ನು ಗೂಗಲ್ ಮಾಡಿದ, ಕ್ಯಾನ್ಸರ್ ಅಂತ ಹೆದರಿ ಸಾಯಲು ಯತ್ನಿಸೋದಾ?
ಸಾಲಬಾಧೆಗೆ ರೈತ ಆತ್ಮಹತ್ಯೆ:
ಚವಡಾಪುರ: ಮಳೆ ಬಾರದೆ ಬೆಳೆ ಕೈಗೆ ಸಿಗದೆ ಮಾಡಿದ ಸಾಲದ ಉರುಳು ತಾಳದೆ ಅಫಜಲ್ಪುರ ತಾಲೂಕಿನ ಹಳಿಯಾಳ ಗ್ರಾಮದ ರೈತ ರಾಮಣ್ಣ ಬೀರಪ್ಪ ಮಾಂಗ(75) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೆಜಿಬಿ ಬ್ಯಾಂಕ್‌ನಲ್ಲಿ 60 ಸಾವಿರ ಸಾಲದ ಜೊತೆಗೆ ಗ್ರಾಮದಲ್ಲಿ ಕೈಗಡದಂತೆ 4 ಲಕ್ಷ ಸಾಲ ಮಾಡಿಕೊಂಡಿದ್ದ. ಉತ್ತಮ ಫಸಲು ಬಂದರೆ ಮಾಡಿದ ಸಾಲ ತೀರಿಸಿ ನೆಮ್ಮದಿಯ ಜೀವನ ಕಳೆಯಬೇಕೆಂದಿದ್ದ ರೈತನಿಗೆ ಬರಗಾಲದ ಹೊಡೆತದಿಂದ ಫಸಲು ಬರುವ ಲಕ್ಷಣ ಗೋಚರಿಸದಂತಾಗಿ ನ.13ರಂದು ತನ್ನ ಸ್ವಂತ ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿದ್ದಾನೆ. ಮನೆಯವರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನ.15ರಂದು ಕಲಬುರಗಿಯ ಜೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ.16ರಂದು ಚಿಕಿತ್ಸೆ ಫಲಿಸದೆ ರೈತ ಮೃತ ಪಟ್ಟಿದ್ದಾನೆ. ಮೃತ ರೈತನ ಮಗ ಯಶವಂತ ರಾಮಣ್ಣ ಮಾಂಗ ಅಫಜಲ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ಸ್ಥಳಕ್ಕೆ ಎಎಸ್‌ಐ ಮಹಾಂತೇಶ ಭೇಟಿ ನೀಡಿದ್ದಾರೆ.
ರಾಯಚೂರು: ಸಾಲಬಾಧೆ ತಾಳದೆ ವಿಷ ಕುಡಿದಿದ್ದ ರೈತ ಸಾವು