Udupi: ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಮಾಡಿದ್ದ ಕೇಸ್ ; ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

By Ravi Janekal  |  First Published Feb 18, 2023, 12:27 PM IST

ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ 5,000 ರೂ. ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಹಾಗು ಸಂಚಾರಿ ನ್ಯಾಯಾಲಯ ಕಾರ್ಕಳದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ. 


ಉಡುಪಿ (ಫೆ.18) : ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ 5,000 ರೂ. ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಹಾಗು ಸಂಚಾರಿ ನ್ಯಾಯಾಲಯ ಕಾರ್ಕಳದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ. 

ಆರೋಪಿಗಳಾದ ಕಾರ್ಕಳ(Karkal)ದ ಬಂಡಿಮಠ(Bandimutt)ದ ಮಧುಕರ ಆಚಾರ್ಯ(Madhukar acharya) (36) ಹಾಗು ಕುಂಭಾಶಿ ನಿವಾಸಿ ಪ್ರಶಾಂತ್ ಆಚಾರ್ಯ(Prashant acharya) (36) ನಿಗೆ ಸೆಕ್ಷನ್ 392 ರ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. 

Latest Videos

undefined

 

ಬೆಂಗಳೂರು: ಮನೆ ಬೀಗ ಮುರಿದು ₹11.75 ಲಕ್ಷ ಬೆಲೆಯ ಚಿನ್ನ, .5 ಲಕ್ಷ ಹಣ ಕಳ್ಳತನ

ಪ್ರಕರಣ ಹಿನ್ನೆಲೆ

2013 ರ ಸೆಪ್ಟೆಂಬರ್ 9 ರಂದು ಕಾರ್ಕಳದ ಕಸಬಾ ಗ್ರಾಮ(Kasaba village)ದ ಮಹಾಲಕ್ಷ್ಮಿ ಓಣಿಯಲ್ಲಿ ರಾಮಚಂದ್ರ ಮಾನೆ(Ramachandra mane) ಯವರ ಮಾಲೀಕತ್ವದ ಲಕ್ಷ್ಮೀ ಗೋಲ್ಡ್ ವರ್ಕ್ಸ್(Lakshmi Gold Works) ಚಿನ್ನಾಭರಣ ಅಂಗಡಿಗೆ ರಾತ್ರಿ 8.30 ರ ಸುಮಾರಿಗೆ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಮನೆಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಗ, ಸ್ಯಾಂಟ್ರೋ ಕಾರಿನಲ್ಲಿ ಆಗಮಿಸಿದ 6 ಜನರ ತಂಡದಲ್ಲಿ ಇಬ್ಬರು ಅಂಗಡಿಯ ಒಳಕ್ಕೆ ನುಗ್ಗಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ, 42,67, 832 ರೂ  1.50 ಕೆಜಿ ಚಿನ್ನಾಭರಣ ಮತ್ತು 40,000 ನಗದನ್ನು ದರೋಡೆಗೈದು ಪರಾರಿಯಾಗಿದ್ದರು. 

ಅಂದು ರಾತ್ರಿ ಖಚಿತ ಮಾಹಿತಿ ಆಧರಿಸಿ ಹಿರಿಯಡ್ಕ ಠಾಣಾ ಪೋಲಿಸರು ಹಿರಿಯಡ್ಕದಲ್ಲಿ ರಾತ್ರಿ‌ 9.40 ರ ಸುಮಾರಿಗೆ  ಸ್ಯಾಂಟ್ರೋ ಕಾರನ್ನು ತಡೆದು ಪರಿಶೀಲಿಸಿದಾಗ ಐವರು ಪರಾರಿಯಾಗಿದ್ದು, ಮಧುಕರ ಆಚಾರಿಯನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದರು. ನಂತರ ಉಳಿದ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿತ್ತು. 

ಇಬ್ಬರು ಮೃತ, ಇಬ್ಬರು ಖುಲಾಸೆ

ಆರು ಜನ ಆರೋಪಿಗಳಲ್ಲಿ ಮೋಹನ್ ಮೊಗವೀರ(Mohan mogaveer) ಮತ್ತು ಚಂದ್ರ ಮೊಗವೀರ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳಾದ ಕುಂದಾಪುರದ ಕೋಣಿ ನಿವಾಸಿ ಚಂದ್ರ ಆಚಾರ್ಯ ಮತ್ತು ಆನಗಳ್ಳಿ ನಿವಾಸಿ ಶಾಹಿದ್ ಅಲಿಯನ್ನು ಸಾಕ್ಷ್ಯಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.  

 

Crime News: ದೇವಸ್ಥಾನದಲ್ಲಿ ಕದ್ದು ಪರಾರಿಯಾಗಲು ಯತ್ನ; ಅನ್ಯಕೋಮಿನ ಕಳ್ಳರಿಗೆ ಜನರಿಂದ ಬಿತ್ತು ಗೂಸಾ

ಅಂದಿನ ಕಾರ್ಕಳದ ವೃತ್ತನಿರೀಕ್ಷಕ ಜಿ.ಎಮ್. ನಾಯ್ಕರ್(Gm Naikar) ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಒಟ್ಟು 35 ಸಾಕ್ಷಿಗಳಲ್ಲಿ, 20 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ‌. ಸರಕಾರದ ಪರ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದಾರೆ.

click me!