ರಾಮನಗರ ಜಿಲ್ಲೆ ಕನಕಪುರ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಶುಕ್ರವಾರ ಪ್ರೀತಿ ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಯುವಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.
ಕನಕಪುರ (ಫೆ.18): ರಾಮನಗರ ಜಿಲ್ಲೆ ಕನಕಪುರ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಶುಕ್ರವಾರ ಪ್ರೀತಿ ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಯುವಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಕನಕಪುರದ ಕುರುಪೇಟೆ ನಿವಾಸಿ ಸುಮಂತ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದು, ದಾಳಿಯಿಂದಾಗಿ ಅಪ್ರಾಪ್ತ ಬಾಲಕಿಯ ಎಡ ಭಾಗದ ಕಣ್ಣಿಗೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ರಾಜ್ಯ ಮಹಿಳಾ ಆಯೋಗವು ರಾಮನಗರ ಎಸ್‌ಪಿಗೆ ಕರೆ ಮಾಡಿದ್ದು, ಅಪ್ರಾಪ್ತ ಯುವತಿಯ ಮೇಲೆ ಆ್ಯಸಿಡ್ ದಾಳಿ ವಿಚಾರದ ಮಾಹಿತಿ ಪಡೆದಿದ್ದಾರೆ. ಜೊತೆಗೆ ದಾಳಿ ಮಾಡಿರೋ ಯುವಕನ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ. ಇಂದು ಯುವತಿಯನ್ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ಮಾಡಲಿದ್ದಾರೆ. ಇನ್ನು ಕನಕಪುರ ನಗರ ಠಾಣೆಯಲ್ಲಿ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಆ್ಯಸಿಡ್ ದಾಳಿಕೋರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಣದೀಪ್ ಸಿಂಗ್ ಸುರ್ಜೇವಾಲ
ಎಟಿಎಂ ಕಾರ್ಡ್ ಬದಲಿಸಿ ಹಣ ಡ್ರಾ ಮಾಡುತ್ತಿದ್ದವರ ಬಂಧನ: ಸಾರ್ವಜನಿಕರ ಎಟಿಎಂ ಕಾರ್ಡ್‌ಗಳನ್ನು ಬದಲಾವಣೆ ಮಾಡಿ ಹಣ ಡ್ರಾ ಮಾಡುತ್ತಿದ್ದ ಇಬ್ಬರು ವಂಚಕರನ್ನು ನಗರದ ಐಜೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ತಿಮ್ಮರಾಯಪ್ಪ, ಮಂಜುನಾಥ್ ಬಂಧಿತರು. ತಾಲೂಕಿನ ಹಳ್ಳಿಮರದೊಡ್ಡಿಯ ನಿವಾಸಿ ಶಾಂತಮ್ಮ ಎಂಬುವವರು ರಾಮನಗರ ಯೂನಿಯನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಆಗಮಿಸಿದ್ದರು. ಇಬ್ಬರು ಆರೋಪಿಗಳು ಶಾಂತಮ್ಮ ಅವರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಪಿನ್ ನಂಬರ್ ಪಡೆದುಕೊಂಡಿದ್ದಾರೆ.
ಶಿವಲಿಂಗ ಪೂಜೆಗೆ ನಮಗೂ ಅನುಮತಿ ಕೊಡಿ: ಡಿಸಿಗೆ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಭಿಮಾನಿ ಬಳಗದಿಂದ ಕೋರಿಕೆ
ಈ ವೇಳೆ ಬಂಧಿತರು ಶಾಂತಮ್ಮ ಅವರ ಗಮನ ಬೇರೆಡೆ ಸೆಳೆದು, ತಮ್ಮ ಬಳಿ ಇದ್ದ ಮತ್ತೊಂದು ಎಟಿಎಂ ಕಾರ್ಡ್ ನೀಡಿ, ಈ ಕೇಂದ್ರದಲ್ಲಿ ಹಣ ಲಭ್ಯವಿಲ್ಲ. ಬೇರೆ ಎಟಿಎಂ ಕೇಂದ್ರಕ್ಕೆ ತೆರಳಿ ಹಣ ಪಡೆಯುವಂತೆ ತಿಳಿಸಿದ್ಧಾರೆ. ಇವರ ಮಾತು ನಂಬಿದ ಶಾಂತಮ್ಮ ಸ್ಥಳದಿಂದ ತೆರಳಿದ್ದಾರೆ. ತಿಪ್ಪರಾಯಪ್ಪ ಹಾಗೂ ಮಂಜುನಾಥ್ ಶಾಂತಮ್ಮ ಅವರ ಎಟಿಎಂ ಕಾರ್ಡ್ ಬಳಿಸಿ ಒಟ್ಟು 12 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು. ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಐಜೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ನಂತರ ಚನ್ನಪಟ್ಟಣದಲ್ಲಿಯೂ ಇದೇ ರೀತಿ ಹಿರಿಯರನ್ನು ಹಾಗೂ ಎಟಿಎಂ ಬಳಕೆ ಮಾಡಲು ಬಾರದವರನ್ನು ವಂಚಿಸಿದ್ದ ಘಟನೆಯು ಬೆಳಕಿಗೆ ಬಂದಿದೆ.