Hospet crime: ಎಂಟು ಮನೆಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

By Kannadaprabha News  |  First Published Feb 18, 2023, 11:15 AM IST

ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆ ಕಳ್ಳತನದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ .19,19,200 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.


ಹೊಸಪೇಟೆ (ಫೆ.18) : ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆ ಕಳ್ಳತನದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ .19,19,200 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.

ನಗರ ನಿವಾಸಿ ಮರಡಿ ಹನುಮಂತ (27), ಜಿ.ಅನಿಲ್‌ (23) ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರ ವಿಚಾರಣೆ ನಡೆಸಿದಾಗ ಒಟ್ಟು ಎಂಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾರೆ.

Tap to resize

Latest Videos

undefined

ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ಮೂರು ಜೋಡಿಗಳು ಲೋಕ ಅದಾಲತ್‌ನಲ್ಲಿ ಒಂದಾದರು!

ಚಿನ್ನಾ ಭರಣ ಜಪ್ತಿ:

ಅರವಿಂದನಗರ(Arvinda nagar )ದ ಶಾದಿ ಮಹಲ್‌ ಹಿಂದುಗಡೆ ಇರುವ ಜೆ. ಇಬ್ರಾಹಿಂರವರ ಮನೆಯ ಬೀಗವನ್ನು ಜ.21ರಂದು ಬೆಳಗ್ಗೆ 11ಗಂಟೆಯಿಂದ ಜನವರಿ 22ರಂದು ಬೆಳಗ್ಗೆ 11:30 ಗಂಟೆಯ ಮಧ್ಯದ ಅವಧಿಯಲ್ಲಿ ಮುರಿದು ಒಳಗಡೆ ಪ್ರವೇಶ ಮಾಡಿದ್ದಾರೆ.ಗಾಡ್ರೇಜ್‌ಗಳ ಲಾಕ್‌ ಮುರಿದು ಅವುಗಳಲ್ಲಿಟ್ಟಿದ್ದ 315 ಗ್ರಾಂ.ಬಂಗಾರದ ಆಭರಣ ಮತ್ತು ಬೆಳ್ಳಿಯ ಆಭರಣಗಳು 72 ತೊಲೆ ಮತ್ತು ನಗದು ಹಣ .11,000 ಒಟ್ಟು ಎಲ್ಲ ಸೇರಿ .13,07,000 ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ರೀತಿ ಹೊಸಪೇಟೆ ಗ್ರಾಮೀಣ ಠಾಣೆ(Hospet Rural Station) ಸರಹದ್ದಿನಲ್ಲಿ ಅನೇಕ ಕಡೆಗಳಲ್ಲಿ ಮನೆ ಬೀಗ ಮುರಿದು ಕಳ್ಳತನವಾದ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳನ್ನು ಪತ್ತೆ ಹಚ್ಚುವ ಕುರಿತು ಪಿ.ಐ ಹೊಸಪೇಟೆ ಗ್ರಾಮೀಣ ಪೊಲೀಸ್‌ ಠಾಣೆರವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.ಇಂದು ಹೊಸಪೇಟೆ ಗ್ರಾಮೀಣ ಪೊಲೀಸ್‌ ಠಾಣೆಯ ಪಿ.ಐ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯ ಕೈಗೊಂಡಾಗ ಹೊಸಪೇಟೆ ಬಳ್ಳಾರಿ ರಸ್ತೆಯ ಎಚ್‌ಎಲ್‌.ಸಿ ಕೆನಾಲ್‌ ಆಲದಮರದ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಅವರಿಬ್ಬರು ಸೇರಿಕೊಂಡು ಸುಮಾರು ಒಂದು ವರ್ಷದಿಂದ ಹೊಸಪೇಟೆಯ ವಿವಿದ ಕಡೆಗಳಲ್ಲಿ ಸುಮಾರು 8 ಮನೆಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

Davanagere: ಕಾಳಾಪುರ ಗಲಾಟೆ ತನಿಖೆ ಮುಗಿಸಿ, ಮಗಳ ಮನೆಗೆ ಹೊರಟ್ಟಿದ್ದ ಎಎಸ್ಐ ಅಪಘಾತದಲ್ಲಿ ಸಾವು

2 ಜನ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 383 ಗ್ರಾಂ ಬಂಗಾರದ ಆಭರಣಗಳು ಮತ್ತು 70 ಗ್ರಾಂ ಬೆಳ್ಳಿಯ ಆಭರಣಗಳು ಎಲ್ಲ ಒಟ್ಟು ಮೌಲ್ಯ .19,19,200 ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯನ್ನು ಎಸ್ಪಿ ಶ್ರೀಹರಿಬಾಬು,ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ ಇವರ ಮಾರ್ಗದರ್ಶನದಲ್ಲಿ ದೀಪಕ್‌ ಆರ್‌ ಬೂಸರೆಡ್ಡಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಗ್ರಾಮೀಣ ಪೊಲೀಸ್‌ ಠಾಣೆ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಬ್ಬಂದಿ ಮೋತಿನಾಯ್ಕ, ಮಂಜುನಾಥ ಮೇಟಿ, ಕೊಟ್ರೇಶ ಏಳಂಜಿ, ಕೊಟ್ರೇಶ್‌.ಜೆ, ಸಣ್ಣ ಗಾಳೆಪ್ಪ, ಅಡಿವೆಪ್ಪ, ಬಂಡಿಮೇಗಳ ನಾಗರಾಜ, ಎಂ.ಸಂತೋಷ, ಕುಮಾರ್‌ನಾಯ್ಕ, ಶಿವುಕುಮಾರ, ಗೋಪಿನಾಯ್ಕ, ಜಗದೀಶ, ಹನುಮಂತ, ಅಂಬರೀಶ, ಆರೋಪಿತರನ್ನು ಪತ್ತೆ ಮಾಡಿದ್ದಾರೆ.

click me!