ಕುಡಿದ ಮತ್ತಿನಲ್ಲಿ ಬಾರ್ ಮುಂದೇ ವ್ಯಕ್ತಿಯೋರ್ವನಿಗೆ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ರೈಲ್ವೆ ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ.
ಧಾರವಾಡ (ಮಾ.24): ಕುಡಿದ ಮತ್ತಿನಲ್ಲಿ ಬಾರ್ ಮುಂದೇ ವ್ಯಕ್ತಿಯೋರ್ವನಿಗೆ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ರೈಲ್ವೆ ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರು ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಪುಂಡರು. ಎಲ್ಲೆಂದರಲ್ಲೆ ಬಾಟಲಿ ಒಡೆದು ಹುಚ್ಚಾಟ ಮಾಡಿರುವ ಆರೋಪಿಗಳು. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದ ವಿದ್ಯಾಗಿರಿ ಪೊಲೀಸರು. ಆದರೆ ದಿನನಿತ್ಯ ನಡೆಯುವ ಪುಂಡರ ಹಾವಳಿಯನ್ನು ತಪ್ಪಿಸಲು ಪೊಲೀಸರು ವಿಫಲರಾಗಿದ್ದಾರೆ. ನಗರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಸಂಜೆಯಾದರೆ ಕಂಠ ಪೂರ್ತಿ ಕುಡಿದು ತೂರಾಡುವ ಪುಂಡರಿಂದ ಸಾರ್ವಜನಿಕರು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ.
ನಿನ್ನೆ ರಾತ್ರಿ ವ್ಯಕ್ತಿಯ ಮೇಲೆ ಪುಂಡರು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಗರದಲ್ಲಿ ಕುಡಿತದಿಂದ ಗಲಾಟೆ ನಡೆಯುತ್ತಿದ್ದರೂ ಪುಂಡಾರ ಹುಚ್ಚಾಟ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಬಾರ್ ಕ್ಯಾಶಿಯರ್‌ನೊಂದಿಗೆ ಕಿರಿಕ್: ಹೆಲ್ಮೆಟ್‌ನಿಂದ ಬಾರಿಸಿ ಮಗನನ್ನ ರಕ್ಷಿಸಿದ ತಾಯಿ