ಕುಡಿದ ಆಮಲಿನಲ್ಲಿ ಪೊಲೀಸ್‌ ಕಾರೇರಿ ಜಾಲಿ ರೈಡ್ ಹೊರಟವ ಅಂದರ್ : ವಿಡಿಯೋ ವೈರಲ್‌

By Anusha KbFirst Published Jun 15, 2022, 4:00 PM IST
Highlights

ಹೈದರಾಬಾದ್: ಮದ್ಯದ ಅಮಲು ಮೈಗೇರಿದ ಮೇಲೆ ಏನಾಗುತ್ತಿದೆ ಎಂದು ಹೇಳುವುದು ಕಷ್ಟ. ಅನೇಕರು ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡಿದ ಹಲವು ಉದಾಹರಣೆಗಳಿವೆ. ಆದರೆ ಇಲ್ಲೋರ್ವ ಯುವಕ ಕಂಠಪೂರ್ತಿ ಕುಡಿದು ಪೊಲೀಸ್ ಕಾರಿನ ಮೇಲೆ ಏರಿ ಜಾಲಿ ರೈಡ್ ಹೋಗಿದ್ದಾನೆ.

ಹೈದರಾಬಾದ್: ಮದ್ಯದ ಅಮಲು ಮೈಗೇರಿದ ಮೇಲೆ ಏನಾಗುತ್ತಿದೆ ಎಂದು ಹೇಳುವುದು ಕಷ್ಟ. ಅನೇಕರು ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡಿದ ಹಲವು ಉದಾಹರಣೆಗಳಿವೆ. ಆದರೆ ಇಲ್ಲೋರ್ವ ಯುವಕ ಕಂಠಪೂರ್ತಿ ಕುಡಿದು ಪೊಲೀಸ್ ಕಾರಿನ ಮೇಲೆ ಏರಿ ಜಾಲಿ ರೈಡ್ ಹೋಗಿದ್ದಾನೆ. ಪೊಲೀಸ್‌ ವಾಹನವನ್ನು ಪೊಲೀಸೊಬ್ಬರು ಚಾಲನೆ ಮಾಡುತ್ತಿದ್ದಾರೆ. ಪೊಲೀಸ್ ಕಾರಿನ ಮಧ್ಯದ ಸನ್ ಪ್ರೂಫ್‌ ಒಳಗಿನಿಂದ ಮೇಲೆ ಬಂದ ಈತ ಸೆಲೆಬ್ರಿಟಿಯಂತೆ ಜಾಲಿಯಾಗಿ ಓಡಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದು ವಿಡಿಯೋದಲ್ಲಿ, ಪೆಟ್ರೋಲ್ ಬಂಕ್‌ ಸಮೀಪ ಪೊಲೀಸ್‌ ವಾಹನದಿಂದ ಇಳಿದ ಯುವಕನನ್ನು ಪೊಲೀಸರು ಪ್ಲಾಸ್ಟಿಕ್ ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅವರು ಘಟನೆಯ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಹೈದರಾಬಾದ್‌ನಲ್ಲಿ ಕುಡಿದ ಅಮಲಿನಲ್ಲಿ ಯುವಕನೊಬ್ಬ ಪೊಲೀಸ್ ಗಸ್ತು ಕಾರಿನ ಮೇಲೆ ಹತ್ತಿದ ನಂತರ ಪೊಲೀಸ್ ಕಾರು ಸೇರಿದಂತೆ ವಾಹನಗಳನ್ನು ಹಾನಿಗೊಳಿಸಿದ್ದಾನೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶರ್ಟ್ ಧರಿಸದ ಯುವಕ ಚಲಿಸುತ್ತಿರುವ ಪೊಲೀಸ್ ಕಾರಿನ ಟಾಪ್‌ ಮೇಲೆ ಕುಳಿತಿರುವುದನ್ನು ಕಾಣಬಹುದು. ಸೋಮವಾರ ರಾತ್ರಿ ಹೈದರಾಬಾದ್‌ನ ಆಸಿಫ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ఈ దృశ్యం మన హైదరాబాద్ లోనే…
ఆసిఫ్ నగర్ లో మందుబాబులు పోలీసు వాహనం ఎక్కి వీరంగం వేసి, వాహనం అద్దాలు ధ్వంసం చేశారు. మద్యం మత్తులో హత్యలు, అత్యాచారాలు దాటి పోలీసు వాహనాలపై దాడులు చేసే స్థాయికి పరిస్థితి వచ్చింది.
ఈ నగరాన్ని… ఈ పాలనను ఇలాగే వదిలేద్దామా!? పౌర సమాజం ఆలోచన చెయ్యాలి. pic.twitter.com/jIHrYnBtZi

— Revanth Reddy (@revanth_anumula)

 

ಘಟನೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ ರೇವಂತ್ ರೆಡ್ಡಿ (A Revanth Reddy) , ಶರಾಬಿನ ಕೆಟ್ಟ ಪ್ರಭಾವವು ಹೆಚ್ಚಿನ ಅತ್ಯಾಚಾರ ಮತ್ತು ಕೊಲೆಗಳಿಗೆ ಕಾರಣವಾಗುವುದಲ್ಲದೆ ಪೊಲೀಸ್ ವಾಹನಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಲು ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಾಗರಿಕ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.

ಮೈಸೂರು; ಪಲ್ಸರ್ ಏರಿ ಶ್ವಾನದೊಂದಿಗೆ ಜಾಲಿರೈಡ್ ಹೊರಟ ಯುವತಿ ಬೀದಿಜಗಳ

ಕಾಂಗ್ರೆಸ್ ವಕ್ತಾರ ದಾಸೋಜು ಶ್ರವಣ್ (Dasoju Sravan) ಅವರು ಕೂಡ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಫ್ರೆಂಡ್ಲಿ ಪೊಲೀಸ್ ಹೆಸರಿನಲ್ಲಿ, ತೆಲಂಗಾಣದಲ್ಲಿ ಈಗ ಪೊಲೀಸರ ಭಯವು ಮಾಯವಾಗಿದೆ. ರೌಡಿಗಳು ಪೊಲೀಸರನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ವೀಡಿಯೊದಿಂದ ನೋಡಬಹುದಾಗಿದೆ, ಗಾಂಜಾ ಕುಡಿದ ಯುವಕನೋರ್ವ ಪೊಲೀಸ್ ವಾಹನದ ಮೇಲ್ಛಾವಣಿಯ ಮೇಲೆ ಜಾಲಿ ಸವಾರಿ ಮಾಡುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಡಿಜಿಪಿ ಎಂ ಮಹೇಂದರ್ ರೆಡ್ಡಿ (DGP M Mahendar Reddy) ಮತ್ತು ಹೈದರಾಬಾದ್ ಕಮಿಷನರ್ (Hyderabad Commissioner) ಸಿವಿ ಆನಂದ್ (CV Anand) ಅವರನ್ನು ಟ್ಯಾಗ್ ಮಾಡಿದ್ದಾರೆ. 'ಜನಸ್ನೇಹಿ ಪೊಲೀಸ್' ಎಂಬುದು ತೆಲಂಗಾಣ ಪೊಲೀಸ್ ಇಲಾಖೆಯ ಅಡಿಬರಹ ಎಂಬುದು ಗಮನಾರ್ಹ ವಿಚಾರವಾಗಿದೆ. 

ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು, ಆಸಿಫ್ ನಗರದಲ್ಲಿ ಪೊಲೀಸರ ಬ್ಲೂ ಕೋಲ್ಟ್‌ಗಳು ಮತ್ತು ಗಸ್ತು ತಂಡಗಳು ಮಧ್ಯರಾತ್ರಿಯ ಸುಮಾರಿಗೆ ಅಂಗಡಿಯನ್ನು ಮುಚ್ಚಿರುವುದನ್ನು ಖಾತ್ರಿಪಡಿಸುವ ಕೆಲಸದಲ್ಲಿದ್ದರು. ಈ ವೇಳೆ ಅವರಿಗೆ ಸಾರ್ವಜನಿಕವಾಗಿ ಉಪದ್ರ ಮಾಡುತ್ತಿರುವ  ವ್ಯಕ್ತಿಯ ಬಗ್ಗೆ ಮಾಹಿತಿ ಬಂದಿದೆ.

Weekend Curfew ಮದ್ವೆ ಹೆಸ್ರಲ್ಲಿ ಜಾಲಿರೈಡ್, ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದು ತಬ್ಬಿಬ್ಬು

ಅಲ್ಲಿಗೆ ಹೋದಾಗ ಅದು ಕುಡಿದ ಅಮಲಿನಲ್ಲಿ ಯುವಕನೋರ್ವ ಮಾಡಿದ ಗಲಾಟೆಯಾಗಿತ್ತು. ಆತ ಕುಡಿದ ಆಮಲಿನಲ್ಲಿ ತೊಂದರೆ ಸೃಷ್ಟಿಸಿ ಜನರಿಗೆ ಬೆದರಿಕೆ ಹಾಕುತ್ತಿದ್ದ. ನಮ್ಮ ಅಧಿಕಾರಿಗಳು  ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಭಾಯಿಸಿದರು. ಈ ವೇಳೆ ಹೊರಟು ಹೋದ ಆತ ಇದ್ದಕ್ಕಿದ್ದಂತೆ ಕೊಡಲಿಯಂತಹ ಆಯುಧದೊಂದಿಗೆ ಹಿಂತಿರುಗಿದ ಮತ್ತು ಚಲಿಸುತ್ತಿದ್ದ ಗಸ್ತು ಕಾರಿನ ಮೇಲೆ ಹಾರಿದ. ಇದೆಲ್ಲವೂ ಎಷ್ಟು ವೇಗವಾಗಿ ನಡೆಯಿತು ಎಂದರೆ ನಮ್ಮ ಅಧಿಕಾರಿಗಳೂ ಆಶ್ಚರ್ಯಚಕಿತರಾದರು. ಬಹಳ ಕಷ್ಟಪಟ್ಟು ಆತನನ್ನು ಬಂಧಿಸಲಾಯಿತು' ಎಂದು ಅಧಿಕಾರಿ ತಿಳಿಸಿದರು.

ಆರೋಪಿ ಪೊಲೀಸ್ ವಾಹನದ ಹೊರತಾಗಿ ಆಟೋರಿಕ್ಷಾವನ್ನು ಹಾನಿಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟರಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆಯುಧವನ್ನು ಹಿಡಿದಿದ್ದರಿಂದ ಯುವಕನನ್ನು ಬಂಧಿಸಲು ಸ್ವಲ್ಪ ವಿಳಂಬವಾಯಿತು ಎಂದು ಅಧಿಕಾರಿ ಹೇಳಿದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧನದಲ್ಲಿಡಲಾಗಿದೆ ಎಂದು ಡಿಸಿಪಿ (ಪಶ್ಚಿಮ ವಲಯ) ಜೋಯಲ್ ಡೇವಿಸ್ (Joel Davis) ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 
 

click me!