Kodaguನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಐವರ ಬಂಧನ

By Suvarna News  |  First Published Jun 15, 2022, 3:50 PM IST

ಅಕ್ರಮವಾಗಿ ಎಂಡಿಎಂಎ ಕ್ರೀಸ್ಟಲ್, ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಐವರನ್ನು ಕೊಡಗಿನಲ್ಲಿ ಬಂಧಿಸಲಾಗಿದೆ.


ವರದಿ: ಪ್ರದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂನ್ 15): ಅಕ್ರಮವಾಗಿ ಎಂಡಿಎಂಎ ಕ್ರೀಸ್ಟಲ್ (MDMA crystal ), (ಮಾದಕ ಪಾದರ್ಥ) ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಐವರನ್ನು ಬಂದಿಸಿರುವ ಘಟನೆ ಕೊಡಗು ಜಿಲ್ಲೆ  ವೀರಾಜಪೇಟೆ  ನಗರದ ಸುಂಕದಕಟ್ಟೆ ಬಳಿ ನಡೆದಿದೆ.

Tap to resize

Latest Videos

ವೀರಾಜಪೇಟೆ ಅಮ್ಮತ್ತಿ ಗ್ರಾಮದ ನಿವಾಸಿ ಕುಟ್ಟಂಡ ಬೋಪಣ್ಣ (42),ಮೈಸೂರು ಜಿಲ್ಲೆ ಪಿರಿಯಪಟ್ಟಣ ತಾಲೂಕು ಪಂಚವಳ್ಳಿ ನಿವಾಸಿ ಜಭಿವುಲ್ಲಾ ಖಾನ್  (41), ಕಡಂಗ ಅರಪಟ್ಟು ಗ್ರಾಮದ ನಿವಾಸಿ ಕೆ.ಎಸ್. ಫರೀದ್   (22), ನಾಪೂಕ್ಲು ಕೊಟ್ಟಮುಡಿ ಗ್ರಾಮದ ನಿವಾಸಿ ಎಂ.ಕೆ.ಹೈದರ್ ಆಲಿ ಅಲಿಯಾಸ್ ಆಲಿಶಾಜ್ (24) ಮತ್ತು ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೆ.ವಿ.ಸುನೀಲ್ (26) ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಬಂದಿತ ಆರೋಪಿಗಳಾಗಿದ್ದಾರೆ.

Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!

ನಿನ್ನೆ ತಡರಾತ್ರಿ ಪ್ರಕರಣ ಪ್ರಮುಖ ಆರೋಪಿಗಳಾಗಿರುವ ಬೋಪಣ್ಣ ಮತ್ತು ಜಭಿವುಲ್ಲಾ ಖಾನ್ ಎಂಬುವವರು ಸುಮಾರು ರಾತ್ರಿ 10 ಗಂಟೆ ಸಮಯದಲ್ಲಿ ತಮ್ಮಗಳ ಬಳಿಯಿರುವ ನಶೆ ಭರಿಸುವ ಮಾದಕ ವಸ್ತುವಾದ ಎಂಡಿಎಂಎ ಕ್ರೀಸ್ಟಲ್, ಗಾಂಜಾ ವನ್ನು ಮಾರಾಟ ಮಾಡುವ ಉದ್ದೇಶದಿಂದ ಗೀರಾಕಿಗಳನ್ನು ಗೊತ್ತುಪಡಿಸಿ ವಿರಾಜಪೇಟೆ ನಗರದ ಸುಂಕದಕಟ್ಟೆ ಡೆಂಟಲ್ ಕಾಲೇಜು ಜಂಕ್ಷನ್ ಬಳಿ ಸ್ಥಳವನ್ನು ನಿಗದಿಗೊಳಿಸುತ್ತಾರೆ.

ನಂತರದಲ್ಲಿ ಮಾರಾಟಕ್ಕೆ ಸಿದ್ದವಾಗಿರುತ್ತಾರೆ ಪ್ರಮುಖ ಆರೋಪಿಗಳು. ಈ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದ ಮೂವರು ಮಾರಾಟಗಾರರಿಂದ ವಸ್ತುಗಳನ್ನು ಖರೀದಿಸಿ ಇತರರಿಗೆ ಮಾರಾಟ ಮಾಡಲು ಮಾತುಕತೆ ಆಗಮಿಸುತ್ತಾರೆ. ಮಧ್ಯದ ಬಾಟಲಿನೊಂದಿಗೆ ಪಾರ್ಟಿ ಅರಂಭಿಸಿದ್ದಾರೆ.

ಕೊಪ್ಪಳ; Kara Hunnime ಓಟದಲ್ಲಿ ಗೆದ್ದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದಿದ್ದ

ಈ ವೇಳೆಯಲ್ಲಿ ಅನಾಮಿಕರ ಕರೆ ನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣವೇ ಕಾರ್ಯಪ್ರವರ್ಥರಾದ ಪೊಲೀಸರು ಸ್ಥಳದಲ್ಲಿರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಿದರು. ಅಕ್ರಮದಲ್ಲಿ ತೊಡಗಿದ್ದ ಆರೋಪಿಗಳಿಂದ 760 ಗ್ರಾಂ ಗಾಂಜಾ ಮತ್ತು ಎಂಡಿಎಂಎ ಕ್ರೀಸ್ಟಲ್, (ಮಾದಕ ಪದಾರ್ಥ) 15.5 ಗ್ರಾಂ, ಅರೋಪಿಗಳ ಬಳಿಯಿದ್ದ 3700 ರೂ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಐದು ಮೂಬೈಲ್  ಮತ್ತು  ಎರಡು ಬೈಕ್‌ಗಳು ವಶಕ್ಕೆ ಪಡೆದಿರುತ್ತಾರೆ.

ಎಂಡಿಎಂಎ ಕ್ರೀಸ್ಟಲ್, ಮಾದಕ ವಸ್ತು ಗ್ರಾಂ ಒಂದಕ್ಕೆ ಮಾರುಕಟ್ಟೆಯಲ್ಲಿ 3000 ರೂ ಎಂದು ಅಂದಾಜಿಸಲಾಗಿದೆ ವಶಕ್ಕೆ ಪಡೆದಿರುವ ವಸ್ತು ಅಂದಾಜು 46,500 ರೂಪಾಯಿಗಳಾಗಿವೆ. ಗಾಂಜಾ ಒಟ್ಟು 20,000 ರೂಗಳಾಗಿವೆ, 01 ಲಕ್ಷ ರೂಗಳು ವಶಕ್ಕೆ ಪಡೆದಿರುವ ವಾಹನಗಳ ಬೆಲೆ ಎಂದು ಅಂದಾಜಿಸಲಾಗಿದೆ.

ತುಮಕೂರು ಗಡಿಯಲ್ಲಿ ಕನ್ನಡಿಗರ ಮೇಲೆ ಆಂಧ್ರ ಪೊಲೀಸರ ದಬ್ಬಾಳಿಕೆ!

ಈ ಪ್ರಕರಣದ ಪ್ರಮುಖ ಅರೋಪಿಗಳಾಗಿರುವ ಕುಟ್ಟಂಡ ಬೋಪಣ್ಣ ಮತ್ತು ಪಿರಿಯಾಪಟ್ಟಣದ ನಿವಾಸಿ ಜಭೀವುಲ್ಲಾ ಖಾನ್ ಈ ಹಿಂದೆ ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಭಾಗಿಗಳಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದರು ಎಂದು ಪೊಲೀಸು ಮೂಲಗಳಿಂದ ತಿಳಿದು ಬಂದಿದೆ.ಬಂದಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂದನದಲ್ಲಿಡುವಂತೆ ಆದೇಶ ಮಾಡಿದ್ದಾರೆ.

click me!