ಬುಕ್ ಸ್ಟಾಲ್ ನಲ್ಲಿ ಡ್ರಗ್ಸ್ ಮಾರುತ್ತಿದ್ದವರ ಬಂಧನ!

By Santosh Naik  |  First Published Jul 4, 2022, 10:55 AM IST

ಬುಕ್‌ ಸ್ಟಾಲ್‌ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುವ ಸ್ಟಾಲ್‌ ಇರಿಸಿಕೊಂಡಿದ್ದ ವ್ಯಕ್ತಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಸದಾಶಿವನಗರ ಪೊಲೀಸರಿಂದ ಆರೋಪಿ ಲೋಕೆಶ್ ಅರೆಸ್ಟ್. ಯಶವಂತಪುರ ಆರ್ ಟಿಓ ಕಚೇರಿ ಬಳಿ ಪುಟ್ಟಪ್ಪ ಬುಕ್ ಸ್ಟಾಲ್ ಇಟ್ಟುಕೊಂಡಿದ್ದ ಆರೋಪಿ ಅಲ್ಲಿಂದಲೇ ಡಗ್ರ್ಸ್ ಮಾರಾಟ ಮಾಡುತ್ತಿದ್ದ.


ಬೆಂಗಳೂರು (ಜು. 4): ಅದು ಹೇಳಿಕೊಳ್ಳಕ್ಕೆ ಬುಕ್ ಸ್ಟಾಲ್ (Book Stall).ಆದ್ರೆ ಅಲ್ಲಿ ನಡಿತಿದ್ದ ದಂಧೆ ಬೇರೆಯದೇ ರೀತಿಯದ್ದು.  ಬಡ ಹುಡುಗನೊಬ್ಬ ಮತ್ತಲ್ಲಿ ತೇಲೋದಕ್ಕೆ ಈ‌ ಸ್ಟಾಲ್ ಕಾರಣವಾಗುತ್ತಿದ್ದದ್ದು ಈ ಸ್ಟಾಲ್.‌ ಈ ಸ್ಟಾಲ್ ಗೆ ಬಂದು ಅದೆಷ್ಟು ಜನ ಯುವಕರು ದಾರಿ ತಪ್ಪಿದ್ದಾರೆ ಎನ್ನುವುದೇ ಲೆಕ್ಕಕ್ಕಿಲ್ಲ. ದುಬಾರಿ ಬೆಲೆ ಕೊಟ್ಟು ಹೈ ಎಂಡ್‌  ಡ್ರಗ್ಸ್ ಖರೀದಿ ಮಾಡಲು ಆಗದೇ ಇದ್ದವರ ಪಾಲಿಗೆ ಈ ಸ್ಟಾಲ್‌ ಸರ್ಗದ ರೀತಿ ಕಾಣುತ್ತಿತ್ತು. ಇಂಥದ್ದೊಂದು ಬುಕ್‌ ಸ್ಟಾಲ್‌ ಸೋಗಿನ ಡ್ರಗ್ಸ್ ಅಡ್ಡವನ್ನು ಸದಾಶಿವನಗರ ಪೊಲೀಸರು (Sadashivanagar Police) ಭೇದಿಸಿದ್ದಾರೆ. 

ಸ್ಲಂ ಹುಡುಗರಿಗೆ ಬೇಕಾದಂಥ ಸಲ್ಯೂಷನ್‌ಗಳು ಈ ಬುಕ್‌ಸ್ಟಾಲ್‌ನಲ್ಲಿ ಮಾರಾಟವಾಗುತ್ತಿದ್ದವು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿ ಲೋಕೇಶ್ (Lokesh) ಅರೆಸ್ಟ್ ಮಾಡಿದ್ದಾರೆ. ಯಶವಂತಪುರ ಆರ್ ಟಿ ಓ (Yashwantapur RTO) ಕಚೇರಿ ಬಳಿ ಪುಟ್ಟಪ್ಪ ಬುಕ್ ಸ್ಟಾಲ್ ಇರಿಸಿಕೊಂಡಿದ್ದ ಆರೋಪಿ, ಅಲ್ಲಿಂದಲೇ ಇಂಥ ಸಲ್ಯೂಷನ್‌ಗಳನ್ನು ಮಾರಾಟ ಮಾಡುತ್ತಿದ್ದ. 

ಇತ್ತೀಚೆಗೆ ರಾಬರಿಗೆ ಯತ್ನಿಸಿ ಸದಾಶಿವನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ತಬ್ರೇಜ್‌ ಹಾಗೂ ತೌಸಿಫ್‌ರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳು ಜಡ್ಜ್ ಮುಂದೆಯೇ ಸಾರ್ವಜನಿಕರು ಥಳಿಸಿದ್ದರ ಬಗ್ಗೆ ಹೇಳಿದ್ದರು. ಆತನ ಹೇಳಿಕೆ ಹಿನ್ನೆಲೆ ಥಳಿಸಿದ್ದ ಸಾರ್ವಜನಿಕರ ಮೇಲೆಯೂ ದೂರು ದಾಖಲು ಮಾಡಲಾಗಿತ್ತು. ನಶೆಯಲ್ಲಿ ತೇಲ್ತಿದ್ದವರು ಖಾಕಿ ಕೈಗೆ ಸಿಕ್ಕಿ ಬೆಪ್ಪಾಗಿದ್ರು. 

ಸರಿಯಾದ ಊಟ ತಿಂಡಿ ಕೂಡ ಮಾಡದೇ ಕಾಟ ಕೊಡ್ತಿದ್ದರು .ನೀರು ಕುಡಿದರೂ ಕೂಡ ವಾಂತಿ ಮಾಡಿಕೊಳ್ಳುತ್ತಿದ್ದರು. ವಾರ ಪೂರ್ತಿ ಊಟ ಮಾಡದೆ ಸೆಲ್ಯೂಷನ್ ನಶೆಯಲ್ಲೇ ಇರ್ತಿದ್ದರು. ಹಾಗಾಗಿ ಇವರ ಹಿನ್ನೆಲೆ ತಿಳಿದುಕೊಳ್ಳಲು ಸದಾಶಿವನಗರ ಪೊಲೀಸರು ಮುಂದಾದ ವೇಳೆ, ನಶೆಯಲ್ಲಿಯೇ ಇವರು ರಾಬರಿಗೆ ಇಳಿದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿತ್ತು.

ಆರಂಭದಲ್ಲಿ ಪೊಲೀಸರು, ಖದೀಮರು ಗಾಂಜಾ ಮತ್ತಿನಲ್ಲಿ ರಾಬರಿಗೆ ಇಳಿದಿರಬಹುದು ಎಂದು ಅಂದಾಜಿಸಿದ್ದರು. ಸೂಕ್ತ ವಿಚಾರಣೆ ನಡೆಸಿದಾಗ ಸಲ್ಯೂಷನ್‌ ವಿಚಾರ ಬೆಳಕಿಗೆ ಬಂದಿತ್ತು. ಹಾಗಾಗಿ ಸಲ್ಯೂಷನ್‌ ಸಿಗುತ್ತಿದ್ದ ಮಳಿಗೆಯ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು.

ಮತ್ತೆ ಡ್ರಗ್ಸ್‌ ಮಾರಾಟ: ಬಿಡುಗಡೆಯಾಗಿದ್ದ ಪೆಡ್ಲರ್‌ ಮರಳಿ ಜೈಲಿಗೆ

10ನೇ ತರಗತಿಯ ಹುಡುಗನಿಗೆ ಸಲ್ಯೂಷನ್‌ ಮಾರಾಟ ಮಾಡುವ ವೇಳೆ ಲಾಕ್‌ ಆಗಿದ್ದರು. ಹಾಗಾದರೆ,  ಈ ಮತ್ತೇರಿಸೋ ಸೆಲ್ಯೂಷನ್ ಯಾರಿಗೆ ಮಾರಾಟ ಮಾಡಬೇಕು?  ಅಂಗಡಿ ಮಾಲೀಕ ಯಾರಿಗೆ ಮಾರಾಟ ಮಾಡುತ್ತಿದ್ದ..? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Bengaluru: 28 ಟನ್‌ ತೂಕದ 60 ಕೋಟಿ ಡ್ರಗ್ಸ್‌ ನಾಶ ಮಾಡಿದ ಪೊಲೀಸರು!

ನಿಜವಾದ ವಿಚಾರ ಏನೆಂದರೆ, ಸೆಲ್ಯೂಷನ್ ಅನ್ನು ಕಂಡ ಕಂಡವರಿಗೆ ಮಾರಾಟ ಮಾಡೋಹಾಗಿಲ್ಲ . 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಾಟ ಮಾಡಬೇಕು.  ವೈಟ್ನರ್‌ ಜೊತೆಗೆ ಈ ಸೆಲ್ಯೂಷನ್ ನೀಡಬೇಕು . ವೈಟ್ನರ್ ಹಚ್ಚಿ ಅದನ್ನು ಅಳಿಸಲು ಈ ಸೆಲ್ಯೂಷನ್ ಬಳಸಲಾಗುತ್ತೆ  ವೈಟ್ನರ್ ಎತ್ತಿಟ್ಟುಕೊಂಡು ಸೆಲ್ಯೂಷನ್ ಮಾತ್ರ ಮಾರಾಟ ಮಾಡ್ತಿದ್ದ. ಬುಕ್ ಸ್ಟಾಲ್ ಮಾಲೀಕ ಪುಟ್ಟಪ್ಪ ಎರಡು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದ. ಆರೋಪಿಗಳು ಸೆಲ್ಯೂಷನ್ ಬಟ್ಟೆಗೆ ಹಾಕಿಕೊಂಡು ಮೂಗಲ್ಲಿಟ್ಟು ಎಳಿತಿದ್ದ ಎನ್ನಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..

click me!