ಪ್ರಧಾನಿ ಕಚೇರಿ ಸಿಬ್ಬಂದಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ವ್ಯಕ್ತಿ ಕರೆ..!

By Kannadaprabha News  |  First Published Jul 4, 2022, 2:30 AM IST

*  ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯ ಕಲ್ಪಿಸುವಂತೆ ಕರೆ
*  ತಡವಾಗಿ ಬೆಳಕಿಗೆ ಬಂದ ಪ್ರಕರಣ
*  ಈ ಸಂಬಂಧ ಚಾಮರಾಜನಗರ ನಗರ ಠಾಣೆಗೆ ದೂರು ದಾಖಲು


ಚಾಮರಾಜನಗರ(ಜು.04):  ತಾನು ಪ್ರಧಾನಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದು ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತೆ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ, ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಸೂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಜೂ.27 ರಂದು ವ್ಯಕ್ತಿಯೊಬ್ಬ ತನ್ನನ್ನು ರಾವ್‌ ಎಂದು ಪರಿಚಯಿಸಿಕೊಂಡು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್‌ ಅವರಿಗೆ ಕರೆ ಮಾಡಿದ್ದಾನೆ. ಜು.2 ರಂದು ಬಿಳಿಗಿರಿರಂಗನಾಥ ದೇವಾಲಯಕ್ಕೆ ಭೇಟಿ ಕೊಡಲಿದ್ದು, ತನಗೆ ಜಂಗಲ್‌ ಲಾಡ್ಜ್‌ ರೆಸಾರ್ಚ್‌ನಲ್ಲಿ ಕೊಠಡಿ, ದೊಡ್ಡಸಂಪಿಗೆ ಮರವನ್ನು ವೀಕ್ಷಿಸಲು ಸೌಲಭ್ಯ ಕಲ್ಪಿಸುವಂತೆ ಕೇಳಿಕೊಂಡಿದ್ದಾನೆ. ಆತನ ಹೇಳಿಕೆಯಿಂದ ಅನುಮಾನಗೊಂಡ ಜಿಲ್ಲಾಧಿಕಾರಿ ಅವರು ಪರಿಶೀಲಿಸಿದಾಗ ನಕಲಿ ಸಿಬ್ಬಂದಿ ಎಂದು ಗೊತ್ತಾಗಿ ಚಾಮರಾಜನಗರ ನಗರ ಠಾಣೆಗೆ ದೂರು ಕೊಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Tap to resize

Latest Videos

undefined

Chamarajanagara ಜಿಲ್ಲೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಗುಜರಾತ್‌ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಪ್ರಧಾನಿ ಕಾರ್ಯಾಲಯದಲ್ಲಿದ್ದು ಗೌಪ್ಯತೆ ಕಾಪಾಡಬೇಕಿರುವುದರಿಂದ ಹೆಚ್ಚೇನೂ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕರೆ ಮತ್ತು ವಾಟ್ಸಾಪ್‌ ಸಂದೇಶದಲ್ಲಿ ಆತ ಹೇಳಿದ್ದಾನಂತೆ.
 

click me!