
ದೆಹಲಿ(ಫೆ.04) ಕೆಲ ಘಟನೆಗಳು ವಿಚಿತ್ರವಾದರೂ ಸತ್ಯ. ಮಗಳ ಮದುವೆಗೆ ಕೆಲ ದಿನ ಬಾಕಿ ಇರುವಾಗಲೇ ಮನೆಯಲ್ಲಿದ್ದ ಚಿನ್ನಾಭರಣ, ಕೂಡಿಟ್ಟ ಹಣ ಕಳ್ಳತನವಾಗಿದೆ. ಪೊಲೀಸರಿಗೆ ದೂರು ನೀಡಿದ ಪೋಷಕರು ತಮ್ಮ ಒಡವೆ ಹಾಗೂ ದುಡ್ಡು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಅನುಮಾನದ ಮೇಲೆ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರೇ ದಂಗಾಗಿದ್ದಾರೆ. ಕಾರಣ ಮನೆಯಲ್ಲಿದ್ದ ಒಡವೆ ಚಿನ್ನಾಭರಣ ಕದ್ದಿದ್ದು, ಅದೇ ಮನೆಯ ಸದಸ್ಯೆ. ಮದುವೆಯಾಗುತ್ತಿದ್ದ ಯುವತಿಯ ಅಕ್ಕ. ಈ ಕಳ್ಳತನ ಪ್ರಕರಣ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.
ಉತ್ತಮ ನಗರದ ನಿವಾಸಿಯಾಗಿರುವ ತಾಯಿ ಕಮಲೇಶಾಗೆ ಇಬ್ಬರು ಹೆಣ್ಣುಮಕ್ಕಳು. ಕಿರಿಯ ಮಗಳ ಮದುವೆಗೆ ಕೆಲ ದಿನಗಳು ಮಾತ್ರ ಬಾಕಿ ಇತ್ತು. ಮಗಳ ಮದುವೆಗೆ ಬೇಕಾದ ಚಿನ್ನಾಭರಣ ಖರೀದಿಸಲಾಗಿತ್ತು. ಎಲ್ಲಾ ಒಡವೆಗಳನ್ನು ತಂದು ಮನೆಯ ಲಾಕರ್‌ನಲ್ಲಿ ಇಡಲಾಗಿತ್ತು. ಹಿರಿಯ ಮಗಳು ಶ್ವೇತಾ ಕೂಡ ಮದುವೆ ಕಾರಣದಿಂದ ಪದೇ ಪದೇ ಮನೆಗೆ ಬರುತ್ತಿದ್ದಳು. ಮನೆಯಲ್ಲಿರುವ ಒಡೆವಗಳನ್ನು ನೋಡಿದ್ದಾಳೆ. ಹೀಗಾಗಿ ತಾಯಿಯಿಂದ ಲಾಕರ್ ಕಿ ಕದ್ದು ಯಾರಿಗೂ ಗೊತ್ತಿಲ್ಲದಂತೆ ಮನೆಯಿಂದ ಹೊರಟ್ಟಿದ್ದಾಳೆ.
ಬೆಂಗಳೂರು: ಹಾಡುಹಗಲೇ ಸಿಗರೇಟ್ ಡಿಸ್ಟ್ರಿಬ್ಯೂಟರ್ ಮೇಲೆ ಮಚ್ಚು ಬೀಸಿ ₹15 ಲಕ್ಷ ದರೋಡೆ!
ಜನವರಿ 30 ರ ಮಧ್ಯಾಹ್ನ ಪೋಷಕರು ಮದುವೆ ಆಮಂತ್ರಣ ನೀಡಲು ತೆರಳಿದ್ದಾರೆ. ಕಿರಿ ಮಗಳೂ ಕೂಡ ಮನೆಯಲ್ಲಿ ಇರಲಿಲ್ಲ. ಇದೇ ವೇಳೆ ಶ್ವೇತಾ ಬುರ್ಖಾ ಧರಿಸಿಕೊಂಡು ತನ್ನ ಮನೆ ಪ್ರವೇಶಿಸಿದ್ದಾಳೆ. ಬಳಿಕ ಕದ್ದ ಲಾಕರ್ ಕೀಯಿಂದ ಚಿನ್ನಾಭರಣ ಕದ್ದಿದ್ದಾಳೆ. ಇದೇ ವೇಳೆ 25,000 ರೂಪಾಯಿ ನಗದನ್ನೂ ಕದ್ದು ಪರಾರಿಯಾಗಿದ್ದಾಳೆ.
ತಾಯಿ ಕಮಲೇಶಾ ಮನೆಗೆ ಆಗಮಿಸಿದಾಗ ಆಘಾತವಾಗಿದೆ. ಮನೆಯಲ್ಲಿ ಕಳ್ಳತನವಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮನೆ ಸುತ್ತ ಮುತ್ತ ಇರುವ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬುರ್ಖಾ ಧರಿಸಿರುವ ಮಹಿಳೆಯೊಬ್ಬರು ಮನೆ ಪ್ರವೇಶಿಸಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನ ಕದ್ದು ಪರಾರಿಯಾಗಲು ಯತ್ನ: ಸಿನಿಮಾ ಶೈಲಿಯಲ್ಲಿ ದರೋಡೆಕೋರರು ಅರೆಸ್ಟ್!
ಇತ್ತ ಹಿರಿಯ ಮಗಳು ಶ್ವೇತಾ ಕೂಡ ನಾಪತ್ತೆಯಾಗಿದ್ದಳು. ಪೊಲೀಸರು ಅನುಮಾನ ಖಚಿತಗೊಂಡಿತು. ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಶ್ವೇತಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲ ಈಕೆ ನೀಡಿದ ಉತ್ತರ ಪೊಲೀಸರಿಗೂ ಆಘಾತ ನೀಡಿತ್ತು. ಪೋಷಕರು ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರೆ, ಈ ಹೊಟ್ಟೆ ಕಿಚ್ಚಿನಿಂದ ಒಡವೆ ಕದ್ದಿರುವುದಾಗಿ ಶ್ವೇತಾ ಹೇಳಿದ್ದಾಳೆ. ಶ್ವೇತಾಳಿಂದ ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು ಪೋಷಕರಿಗೆ ಮರಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ