* ತಂದೆ ಮತ್ತು ಮಕ್ಕಳ ನಡುವೆ ಜಗಳ
* ಮದ್ಯದ ದಾಸಿಯಾಗಿದ್ದ ತಾಯಿ
* ತಂದೆ ತಾಯಿ ಇಬ್ಬರು ಮದ್ಯ ವ್ಯಸನಿಗಳು
* ಗಿರವಿ ಇಟ್ಟಿದ್ದ ಆಭರಣವನ್ನು ಬಿಡಿಸಿಕೊಂಡು ಬರಲಿಲ್ಲ
ವರದಿ : ಮಧು.ಎಂ.ಚಿನಕುರಳಿ, ಮೈಸೂರು
ಮೈಸೂರು( ಮಾ. 28) ಮಗಳ (Daughter) ಜೊತೆ ಜಗಳವಾಡಿದ ತಂದೆ (Fathetr)ಕೊಲೆಯಾಗಿದ್ದಾನೆ(Murder). ಕುಡುಕ ತಂದೆ ಹಾಗೂ ಮಕ್ಕಳ ನಡುವಿನ ಜಗಳ ತಂದೆ ಸಾವಿನಲ್ಲಿ ಅಂತ್ಯವಾಗಿದೆ. ಮೈಸೂರು (Mysuru) ಜಿಲ್ಲೆ ಹುಣಸೂರು ತಾಲೂಕಿನ ಸೀಗರಕಟ್ಟೆ ಗ್ರಾಮದಲ್ಲಿ ನಡೆದಿದ್ದು 55 ವರ್ಷದ ದೇವರಾಜ್ ಮೃತ ದುರ್ದೈವಿಯಾಗಿದ್ದಾರೆ. ಕುಡುಕ ತಂದೆಯ ಬೈಗುಳ ತಪ್ಪಿಸಿಕೊಳ್ಳಲು ಮಗಳು ಅಡುಗೆ ಕೋಣೆಯಲಿದ್ದ ದೊಣ್ಣೆ ತಂದು ಬೆದರಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದ ತಂದೆ ತಲೆಗೆ ಪೆಟ್ಟಾಗಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಮಗಳ ಮಾಂಗಲ್ಯ ಸರ ಅಡವಿಟ್ಟಿದ್ದ ತಂದೆ: ಮೃತ ದೇವರಾಜ್‌ರಿಗೆ ಮೂವರು ಹೆಣ್ಣು ಮಕ್ಕಳಿದ್ದು ಇಬ್ಬರನ್ನು ಮದುವೆ ಮಾಡಿಕೊಡಲಾಗಿತ್ತು. ಎರಡನೇ ಮಗಳು ಅನಿತಾ ಬಾಣಂತನಕ್ಕಾಗಿ ತಂದೆ ಮನೆಗೆ ವರ್ಷದ ಹಿಂದೆ ಬಂದಿದ್ದಳು. ಈ ಸಂದರ್ಭದಲ್ಲಿ ತಂದೆ ದೇವರಾಜು ಮಗಳ ಮಾಂಗಲ್ಯದ ಸರವನ್ನು ಜಮೀನಿನ ಖರ್ಚಿಗಾಗಿ ಗಿರವಿ ಇಟ್ಟುಕೊಂಡಿದ್ದರ. ವರ್ಷ ಕಳೆದು ಬಾಣಂತನವೆಲ್ಲ ಮುಗಿದರೂ ಗಿರವಿ ಇಟ್ಟಿದ್ದ ಮಾಗಲ್ಯ ಸರ ವಾಪಸ್ ಬಂದಿರಲಿಲ್ಲ. ತನ್ನ ಸರವನ್ನು ಇನ್ನೂ ಸಹ ಬಿಡಿಸಿಕೊಟ್ಟಿಲ್ಲ. ತಾನು ಗಂಡನ ಮನೆಗೆ ವಾಪಸ್ ತೆರಳಲು ಮಾಂಗಲ್ಯದ ಚೈನ್ ಬಿಡಿಸಿಕೊಡು ಎಂದು ಅನಿತಾ ಕೇಳುತ್ತಿದ್ದರಿಂದ ಆಗಾಗ್ಗೆ ತಂದೆ ಮಗಳ ಮದ್ಯೆ ಜಗಳ ನಡೆಯುತ್ತಿತ್ತು. ಎರಡು ದಿನಗ ಹಿಂದೆ ಸಹ ತಂದೆ ಮಕ್ಕಳ ನಡುವೆ ರಾತ್ರಿ ಜಗಳ ನಡೆದಿತ್ತು. ಈ ವೇಳೆ ಪಕ್ಕದಲ್ಲೇ ವಾಸವಿರುವ ಮೃತ ದೇವರಾಜ್ ಸಹೋದರ ಸ್ವಾಮಿಗೌಡ ಜಗಳ ಬಿಡಿಸಿದ್ದರು.
E-Bike Explodes: ಚಾರ್ಜ್ ಹಾಕಿದ್ದ ಬೈಕ್ ಸ್ಫೋಟ.. ತಂದೆ-ಮಗಳ ದಾರುಣ ಸಾವು
ಆದರೂ ತಂದೆ ಮಕ್ಕಳು ಜಗಳ ಮುಂದುವರೆಸಿದ್ದರು. ಕುಡುಕ ತಂದೆ ಅಕ್ಕನ ಜೊತೆಗೆ ಮಾಡುತ್ತಿದ್ದ ಗಲಾಟೆಯಿಂದ ಕೋಪಗೊಂಡ ಕಿರಿಯ ಪುತ್ರಿ ಸುನಿತಾ ಅಡುಗೆ ಮನೆಯಲ್ಲಿದ್ದ ಸೌದೆಯನ್ನು ತಂದು ಬೆದರಿಸಿದ ವೇಳೆ ಎಳೆದಾಟ ನಡೆದಿದೆ. ಈ ವೇಳೆ ದೇವರಾಜ್ ಆಕಸ್ಮಿಕವಾಗಿ ಮಂಚದ ಬಳಿ ಇದ್ದ ಟಿ.ವಿ.ಸ್ಟ್ಯಾಂಡ್ ಮೇಲೆ ಬಿದ್ದಿದ್ದಾನೆ. ಇದರಿಂದ ಆತನ ತಲೆಗೆ ತೀವ್ರ ಪೆಟ್ಟಾಗಿತ್ತು. ಕೆಳಗೆ ಬಿದ್ದ ತಂದೆ ಏಳಲು ಸಮಯವಾಗಲಿದೆ ಎಂದು ಇಬ್ಬರು ಒಳಗೆ ಹೋಗಿ ಮಲಗಿದ್ದಾರೆ. ಮಾರ್ಚ್ ಇಪ್ಪತ್ತಾರು ಬೆಳಗ್ಗೆ ಎದ್ದು ನೋಡಿದಾಗ ತಂದೆ ದೇವರಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಗಾಬರಿಗೊಂಡು ಪಕ್ಕದಲ್ಲೇ ಇದ್ದ ದೊಡ್ಡಪ್ಪ ಸ್ವಾಮಿಗೌಡರನ್ನು ಕರೆತಂದು ನೋಡುವ ವೇಳೆಗೆ ದೇವರಾಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದರಾದರೂ, ಗ್ರಾಮ ಠಾಣಾ ವ್ಯಾಪ್ತಿ ಹುಣಸೂರು ಗ್ರಾಮಾಂತರ ಠಾಣೆಗೆ ಬರುವುದೆಂಬ ಪೊಲೀಸರ ಮಾಹಿತಿಯಿಂದ ಮದ್ಯಾಹ್ನ ವೇಳೆ ಗ್ರಾಮಾಂತರ ಠಾಣೆಯಲ್ಲಿ ಸ್ವಾಮಿಗೌಡ ನನ್ನ ತಮ್ಮನ ಮಗಳು ಸುನಿತಾಳೇ ತಂದೆಯನ್ನು ಹೊಡೆದು ಸಾಯಿಸಿದ್ದಾಳೆಂದು ದೂರು ದಾಖಲಿದ್ದು, ಪ್ರಕರಣ ದಾಖಲಿಸಿಕೊಂಡ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಮೃತ ದೇವರಾಜ್ ಪುತ್ರಿ ಸುನಿತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕಪಾಳಕ್ಕೆ ಹೊಡೆದು ತಾಯಿ ಕೊಂದ ಮಗ: ಮಕ್ಕಳಿಗೆ ತಿಳಿ ಹೇಳಬೇಕಾದ ತಾಯಿ ಮದ್ಯ ವ್ಯಸನಿಯಾಗಿದ್ದಲ್ಲದೆ ಮಕ್ಕಳಿಗೆ ಅಡುಗೆ ಮಾಡದಿದ್ದರಿಂದ ಕುಪಿತಗೊಂಡ ಮಗ ತಾಯಿಯ ಕಪಾಲಕ್ಕೆ ಹೊಡೆದಿದ್ದರಿಂದ ತೀವ್ರಗಾಯಗೊಂಡ ತಾಯಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಹದೇವಸ್ವಾಮಿ ಪತ್ನಿ ಜಯಮ್ಮ 54 ಮೃತಪಟ್ಟಾಕೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ.
ಕುಡಿತಕ್ಕೆ ದಾಸಿಯಾಗಿದ್ದ ಜಯಮ್ಮ ತಾಯಿ ಜಯಮ್ಮ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ಮಕ್ಕಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಶನಿವಾರ ಕೂಡ ಹಗಲು ವೇಳೆಯೇ ಜಯಮ್ಮ ಮದ್ಯ ಸೇವಿಸಿದ್ದರು. ಅಡುಗೆ ಸಹ ಮಾಡಿರಲಿಲ್ಲ. ಚಾಲಕನಾಗಿರುವ ಪುತ್ರ ಹರೀಶ್ ಮದ್ಯಾಹ್ನ ಊಟಕ್ಕೆ ಬಂದ ವೇಳೆ ಅಡುಗೆ ಮಾಡಿರಲಿಲ್ಲ. ಕೋಪಗೊಂಡ ಹರೀಶ್ ತಾಯಿಯ ಕಪಾಳಕ್ಕೆ ಹೊಡೆದಿದ್ದರಿಂದ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮರ ಪುತ್ರಿ ತನ್ನ ಸಹೋದರ ತಾಯಿ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆಂದು ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ರವಿಕುಮಾರ್ ಆರೋಪಿ ಹರೀಶನ್ನು ಬಂಧಿಸಿ ನ್ಯಾಯಾಂ ಬಂಧನಕ್ಕೊಪ್ಪಿಸಿದ್ದಾರೆ.