
ಚಿತ್ರದುರ್ಗ (ಜ.21): ಎಲ್‌ಪಿಜಿ ಸ್ಫೋಟಗೊಂಡು ಮಹಿಳೆಯೋರ್ವಳು ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಲಕ್ಷ್ಮಮ್ಮ(38) ಮೃತ ದುರ್ದೈವಿ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿವೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಳೆ ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆ ಹಿನ್ನಲೆ; ಬೆಂಗಳೂರಿನ ಈ ಸೂಕ್ಷ್ಮ ಏರಿಯಾಗಳಲ್ಲಿ ಹೈಅಲರ್ಟ್!
ಘಟನೆ ಹಿನ್ನೆಲೆ?
ಬೀದಿಬದಿ ಹೋಟೆಲ್ ನೆಡಸುತ್ತಿರುವ ಪರಮೇಶ್ ಎಂಬವವರ ಹೋಟೆಲ್‌ಗೆ ಬೆಂಕಿ ಬಿದ್ದಿದೆ. ಹೋಟೆಲ್‌ಗೆ ಬೆಂಕಿ ಬಿದ್ದ ವಿಚಾರ ತಿಳಿದು ಸುತ್ತಮುತ್ತಲಿನ ಮಹಿಳೆಯರು ಘಟನೆ ಸ್ಥಳಕ್ಕೆ ದಾವಿಸಿದ್ದಾರೆ. ಈ ವೇಳೆ ಬೆಂಕಿ ಹೋಟೆಲ್‌ಗೆ ಆವರಿಸಿದೆ ಹೋಟೆಲ್ ಒಳಗಡೆ ಇದ್ದ ಅಡುಗೆ ಸಿಲಿಂಡರ್‌ಗೆ ಬೆಂಕಿ ತಾಗಿ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಪೋಟದ ರಭಸಕ್ಕೆ ಸ್ಥಳದಲ್ಲಿದ್ದ ಮಹಿಳಾ ಕಾರ್ಮಿಕ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲುಷಿತ ನೀರು ಸೇವಿಸಿ ಆರು ಮಂದಿ ಸಾವು ಹಿನ್ನೆಲೆ, ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ