ಹಾಸ್ಯನಟಿ ಭಾರತಿ ಸಿಂಗ್‌ ಬಂಧನ: ಮನೆ, ಕಚೇರಿಯಲ್ಲಿ 86 ಗ್ರಾಂ ಗಾಂಜಾ ಪತ್ತೆ!

By Kannadaprabha News  |  First Published Nov 22, 2020, 7:18 AM IST

ಡ್ರಗ್ಸ್‌ ಕೇಸ್‌: ಹಾಸ್ಯನಟಿ ಭಾರ್ತಿ ಸಿಂಗ್‌ ಬಂಧನ| ಮುಂಬೈನ ಮನೆ, ಕಚೇರಿಯಲ್ಲಿ 86 ಗ್ರಾಂ ಗಾಂಜಾ ಪತ್ತೆ| ಮುಂಬೈ ಮನೆ ಮೇಲೆ ಎನ್‌ಸಿಬಿ ದಾಳಿ


ಮುಂಬೈ(ನ.22): ಬಾಲಿವುಡ್‌ಗೆ ಮಾದಕ ವಸ್ತು ನಂಟಿನ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎನ್‌ಸಿಬಿ (ಮಾದಕ ದ್ರವ್ಯ ನಿಯಂತ್ರಣ ದಳ), ಈ ಸಂಬಂಧ ಖ್ಯಾತ ಹಾಸ್ಯ ಕಲಾವಿದೆ ಭಾರ್ತಿ ಸಿಂಗ್‌ ಅವರನ್ನು ಶನಿವಾರ ಬಂಧಿಸಿದೆ. ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಮಾದಕ ವಸ್ತು ಪ್ರಕರಣದಲ್ಲಿ ನಟ ಸುಶಾಂತ್‌ಸಿಂಗ್‌ ಪ್ರೇಯಸಿ ರಿಯಾ ಚಕ್ರವರ್ತಿ ಬಂಧನದ ಬಳಿಕ ಇದು ಎನ್‌ಸಿಬಿಯ ಮೊದಲ ದೊಡ್ಡ ಬೇಟೆಯಾಗಿದೆ. ಇನ್ನು ಇದೇ ಪ್ರಕರಣದಲ್ಲಿ ಭಾರ್ತಿ ಅವರ ಪತಿ ಹಷ್‌ರ್‍ ಲಿಂಬಾಚಿಯಾ ಅವರನ್ನು ಕೂಡಾ ವಿಚಾರಣೆಗೆ ಒಳಪಡಿಸಿದ್ದೂ, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

(ವಿಡಿಯೋ) ನೀವು ದಪ್ಪಗಿದ್ದೀರಾ..? ಚಿಂತೆ ಬಿಡಿ ಸದ್ಯ ಪ್ಲಸ್ ಸೈಜ್'ಗೂ ಬೆಲೆ ಬಂದಿದೆ...!

Tap to resize

Latest Videos

ಇತ್ತೀಚೆಗೆ ಡ್ರಗ್ಸ್‌ ಪೆಡ್ಲ​ರ್‍ಸ್ಗಳ ವಿಚಾರಣೆ ವೇಳೆ ಭಾರ್ತಿ ಸಿಂಗ್‌ ಹೆಸರು ಪ್ರಸ್ತಾಪವಾಗಿತ್ತು. ಅದೇ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಶನಿವಾರ ಮುಂಬೈನ ಅಂಧೇರಿಯಲ್ಲಿರುವ ಭಾರ್ತಿ ಸಿಂಗ್‌ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ 86.5 ಗ್ರಾಂನಷ್ಟುಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರ್ತಿ ಮತ್ತು ಹಷ್‌ರ್‍ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ತಾವು ಗಾಂಜಾ ಸೇವಿಸಿದ್ದನ್ನು ದಂಪತಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರ್ತಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾನುವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಇನ್ನಷ್ಟುದಿನ ವಶಕ್ಕೆ ಕೋರಲು ಎನ್‌ಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಖ್ಯಾತ ನಿರೂಪಕಿ ಭಾರ್ತಿ ಸಿಂಗ್ ಮನೆ ಮೇಲೆ NCB ರೈಡ್

undefined

ಭಾರ್ತಿ ನಿವಾಸದಲ್ಲಿ ಪತ್ತೆಯಾಗಿರುವ ಗಾಂಜಾವನ್ನು ಕಡಿಮೆ ಪ್ರಮಾಣದ ಡ್ರಗ್ಸ್‌ ಎಂದು ಪರಿಗಣಿಸಲಾಗಿದ್ದು, ಈ ಪ್ರಕರಣದ ತಪ್ಪಿತಸ್ಥರಿಗೆ 10 ಸಾವಿರ ರು. ದಂಡ ಮತ್ತು 6 ತಿಂಗಳ ಕಾರಾಗೃಹ ಶಿಕ್ಷೆಯಾಗುವ ಸಾಧ್ಯತೆಯಿದೆ.

ಭಾರ್ತಿ ಹಲವು ಕಾಮೆಡಿ ಶೋ, ರಿಯಾಲಿಟಿ ಶೋಗಳ ಮೂಲಕ ಭಾರೀ ಜನಪ್ರಿಯತೆ ಹೊಂದಿದ್ದಾರೆ.

click me!