ಬಳ್ಳಾರಿಯಲ್ಲಿ ಭಾರಿ ಸಂಚಲನ ಮೂಡಿಸಿದ ನಾಪತ್ತೆ ಪ್ರಕರಣ: 24 ದಿನಗಳಿಂದ ಯುವಕ ಗಯಾಬ್‌..!

By Suvarna News  |  First Published Nov 21, 2020, 1:36 PM IST

ಕಳೆದ 24 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಯುವಕ| ಬಳ್ಳಾರಿ ಜಿಲ್ಲೆಉ ಹೊಸಪೇಟೆ ನಗರದಲ್ಲಿ ನಡೆದ ಘಟನೆ| ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕರ ಮಗ ಪ್ರದೀಪ್ ನಾಪತ್ತೆ| ಯುವಕನ ಮನೆಯಲ್ಲಿ ಮನೆ ಮಾಡಿದ ಆತಂಕ| 


ಬಳ್ಳಾರಿ(ನ.21): ಜಿಲ್ಲೆಯ ಗಣಿ ಉದ್ಯಮಿಯೊಬ್ಬರ ಮಗ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟ ಘಟನೆ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಹೌದು, ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕರ ಮಗ ಪ್ರದೀಪ್ ಎಂಬ ಯುವಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. 

"

Tap to resize

Latest Videos

ಕಳೆದ ತಿಂಗಳು ನ. 26 ರಂದು 3: 30 ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಪ್ರದೀಪ 24 ದಿನಗಳಿಂದ ಮನೆಗೆ ಬಂದಿಲ್ಲ. ಹೀಗಾಗಿ ಪ್ರದೀಪ ಮನೆಯವರಲ್ಲಿ ಆತಂಕ ಮನೆ ಮಾಡಿದೆ. ಸ್ನೇಹಿತರ ಮನೆಗೆ ಹೋಗಿ ಬರೋದಾಗಿ ಹೇಳಿ ಹೋಗಿದ್ದ ಯುವಕ ಮರಳಿ ಬಂದಿಲ್ಲ.

ಮಂಡ್ಯ ಯುವಕನ ಜೊತೆ ದಲಿತ ಯುವತಿ ಪ್ರೇಮ್ ಕಹಾನಿ : ಆಕೆ ನಾಪತ್ತೆ ಮಿಸ್ಟ್ರಿಗೆ ಈಗ ಹೊಸ ಟ್ವಿಸ್ಟ್

ಮತ್ತೊಂದು ಗಣಿ ಮಾಲೀಕರ ಮಗಳ ಜೊತೆಯಲ್ಲಿ ಪ್ರದೀಪ್ ವ್ಯವಹಾರ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಮತ್ತೊಂದು ಗಣಿ ಮಾಲೀಕರು ನಮ್ಮ ಮಗನನ್ನ ಅಪಹರಣ ಮಾಡಿಸಿದ್ದಾರೆ ಪ್ರದೀಪ್‌ನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. 

ವ್ಯವಹಾರವೋ ಅಥವಾ ಇನ್ನಿತರ ವೈಯಕ್ತಿಕ ಸಂಬಂಧವೊ ಗೊತ್ತಿಲ್ಲ. ಆದ್ರೇ ಪ್ರದೀಪ್ ಮಾತ್ರ ಕಳೆದ 24 ದಿನಗಳಿಂದ  ನಾಪತ್ತೆಯಾಗಿದ್ದಾರೆ. ಈ ಸಂಬಂಧ ಹೊಸಪೇಟೆ ನಗರದ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ತಿಂಗಳಾದ್ರೂ ಪೊಲೀಸರು ನಮ್ಮ ಮಗನನ್ನು ಹುಡುಕಿ ಕೊಡುತ್ತಿಲ್ಲ ಎಂದು ಪ್ರದೀಪನ ಕುಟುಂಬದ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೊನೆಯದಾಗಿ ಪ್ರದೀಪ್ ಮನೆಯಿಂದ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 

click me!