ಪತಿಯ ಅನೈತಿಕ ಸಂಬಂಧದ ಸತ್ಯ ತಿಳಿಯಲು ಹೋದ ಪತ್ನಿ| ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಮಹಿಳೆ| ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದ ಘಟನೆ| ನಾಲ್ವರ ಬಂಧನ|
ಬಾಗಲಕೋಟೆ(ನ.21): ಪತಿಯ ಅನೈತಿಕ ಸಂಬಂಧದ ಶಂಕೆಯ ಬಗ್ಗೆ ಪತ್ನಿಯೊಬ್ಬಳು ಪತ್ತೆ ಹಚ್ಚಲು ಹೋಗದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗದ್ದನಕೇರಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಸಂಗೀತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆಯಾಗಿದ್ದಾಳೆ.
ಗ್ರಾಮದ ಗಾರ್ಮೆಂಟ್ ಮಾಲೀಕ ಈರಣ್ಣ ಎಂಬಾತನ ಪತ್ನಿ ಲತಾ, ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಗೀತಾ ಎಂಬುವವಳ ಜೊತೆ ತನ್ನ ಗಂಡ ಈರಣ್ಣ ಸಂಬಂಧ ಹೊಂದಿದ್ದನೆಂದು ಸಂಶಯ ಹೊಂದಿದ್ದಳು. ಸಂಗೀತಾ ನಿನ್ನೆ ಶೌಚಾಲಯಕ್ಕೆಂದು ಮನೆಗೆ ಬಂದಾಗ ತನ್ನೊಂದಿಗೆ ಮೂರು ಜನರನ್ನ ಕರೆದುಕೊಂಡು ಬಂದ ಲತಾ ಸಂಗೀತಾ ಒಳಗಿರುವಾಗಲೇ ಬೀಗ ಹಾಕಿದ್ದಳು. ಈ ವೇಳೆ ಎಷ್ಟೇ ಗೋಗರೆದರೂ ಬಾಗಿಲು ತೆರೆಯದೇ ಹೋದಾಗ ತನ್ನ ಮಾನಕ್ಕೆ ಅಂಜಿ ಸಂಗೀತಾ ತಾನು ಧರಿಸಿದ್ದ ವೇಲ್ ನಿಂದಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಕೈದಿ
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆಯ ಪೋಲಿಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಲತಾ ಸೇರಿದಂತೆ ಆಕೆಯ ಜೊತೆಗಿದ್ದ ಮೂವರನ್ನು ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.